ಕಿರುತೆರೆ ನಟಿ ಭವ್ಯಾ ಗೌಡ ಅವರು ‘ಗೀತಾ’ ಸೀರಿಯಲ್ ಮೂಲಕ ಮನೆ ಮಾತಾಗಿದ್ದರು. ಈ ಸೀರಿಯಲ್ ನಿಂದ ಅಪಾರ ಅಭಿಮಾನಿಗಳ ಬಳಗ ಕೂಡ ನಟಿ ಹೊಂದಿದ್ದರು. ಇದೀಗ ಜನಪ್ರಿಯ ಗೀತಾ ಧಾರಾವಾಹಿ ಮುಕ್ತಾಯವಾಗಿದೆ. ಈ ಬೆನ್ನಲ್ಲೇ ನಟಿ ಭವ್ಯಾ ಧರ್ಮಸ್ಥಳ, ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
“ಗೀತಾ ಸೀರಿಯಲ್ ” 4 ವರ್ಷಗಳ ಕಾಲ ಟಿವಿ ಪ್ರಸಾರವನ್ನು ರಂಜಿಸಿತು. ಮಧ್ಯಮ ಕುಟುಂಬದ ಹುಡುಗಿಯ ಪಾತ್ರದಲ್ಲಿ ಭವ್ಯಾ ಗಮನ ಸೆಳೆದಿದ್ದರು. ಟಿಕ್ ಟಾಕ್ ಸ್ಟಾರ್ ಆಗಿದ್ದ ಭವ್ಯಾ ಕಿರುತೆರೆ ನಟಿಯಾಗಿ ಗೆದ್ದಿದ್ದರು. ಧನುಷ್ ಗೌಡ-ಭವ್ಯ ಜೋಡಿಗೆ ಹಿಡಿಸಿತ್ತು.
ಈಗ ಸತತ 4 ವರ್ಷಗಳು ರಂಜಿಸಿದ್ದ ‘ಗೀತಾ’ ಧಾರಾವಾಹಿ ಜರ್ನಿ ಅಂತ್ಯವಾಗಿದೆ. ಹೊಸ ಜರ್ನಿಗೆ ಮುನ್ನುಡಿ ಬರೆಯುವ ಮೊದಲು ದೇವರ ಸನ್ನಿಧಿಗೆ ನಟಿ ಭೇಟಿ ನೀಡಿದ್ದಾರೆ. ಧರ್ಮಸ್ಥಳ ಮಂಜುನಾಥ ಮತ್ತು ಕಟೀಲು ದುರ್ಗಾಪರವೇಶ್ವರಿ ದೇವಿಗೆ ನಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಗೀತಾ’ ಸೀರಿಯಲ್ ನಂತರ ಮುಂದೇನು? ಎಂಬ ಪ್ರಶ್ನೆ ಭವ್ಯಾ ಅಭಿಮಾನಿಗಳಲ್ಲಿ ಕಾಡ್ತಿದೆ. ಮತ್ತೆ ಕಿರುತೆರೆಗೆ ಎಂಟ್ರಿ ಕೊಡ್ತಾರಾ? ಅಥವಾ ಬೆಳ್ಳಿಪರದೆಯಲ್ಲಿ ಮಿಂಚುತ್ತಾರಾ ಕಾದುನೋಡಬೇಕಿದೆ.