ತೆಲುಗಿನ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಅವರ 2ನೇ ಪುತ್ರಿ ಮದುವೆ ಇದೀಗ ಅದ್ಧೂರಿಯಾಗಿ ನಡೆದಿದೆ. ದಗ್ಗುಬಾಟಿ ಕುಟುಂಬದ ನವಜೋಡಿಗೆ ಶುಭಕೋರಲು ಸ್ಟಾರ್ ಕಲಾವಿದರ ದಂಡೇ ಹರಿದು ಬಂದಿದೆ.
ದಗ್ಗುಬಾಟಿ ವೆಂಕಟೇಶ್ ಅವರ 2ನೇ ಪುತ್ರಿ ಹಯವಾಹಿನಿ ಗ್ರ್ಯಾಂಡ್ ಆಗಿ ಹೈದರಾಬಾದ್‌ನಲ್ಲಿ ನಡೆದಿದೆ. ನಿಶಾಂತ್ ಎಂಬುವವರ ಜೊತೆ ವೆಂಕಟೇಶ್ ಪುತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹಯವಾಹಿನಿ ಎಂಗೇಜ್‌ಮೆಂಟ್ ಕಳೆದ ವರ್ಷ ನೆರವೇರಿತ್ತು. ಇದೀಗ ಮದುವೆಗೆ 2 ಕುಟುಂಬದ ಸದಸ್ಯರು ಮತ್ತು ಆಪ್ತರು ಅಷ್ಟೇ ಭಾಗಿಯಾಗಿ ಹೊಸ ಜೋಡಿಗೆ ಶುಭ ಹಾರೈಸಿದ್ದಾರೆ.
ಈ ಮದುವೆಯಲ್ಲಿ ರಾಣಾ ದಗ್ಗುಬಾಟಿ, ನಾಗಾಚೈತನ್ಯ, ಅಕಿಲ್ ಅಕ್ಕಿನೇನಿ, ಮಹೇಶ್ ಬಾಬು, ಮೆಗಾಸ್ಟಾರ್ ಚಿರಂಜೀವಿ, ತಮಿಳು ನಟ ಕಾರ್ತಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.