Breaking
Wed. Dec 25th, 2024

ಮರೆಯಲಾಗದ ಮಾಣಿಕ್ಯ,ಕನ್ನಡಿಗರ ರತ್ನ ಪುನಿತ್ ರಾಜಕುಮಾರ್ ಅವರ 49 ನೇ ವರ್ಷದ ಹುಟ್ಟುಹಬ್ಬ…!

ಮರೆಯಲಾಗದ ಮಾಣಿಕ್ಯ,ಕನ್ನಡಿಗರ ರತ್ನ ಪುನಿತ್ ರಾಜಕುಮಾರ್ ಅವರ 49 ನೇ ವರ್ಷದ ಹುಟ್ಟುಹಬ್ಬ. ನಮ್ಮನ್ನೆಲ್ಲ ಅಗಲಿ ಮೂರು ವರ್ಷಗಳೇ ಕಳೆದು ಹೋದವು. ದೇಶದಲ್ಲಿ ಅನೇಕ ಗಣ್ಯರು ಅಗಲಿದಾಗ ಕಂಬನಿ ಮಿಡಿದು ಸ್ವಲ್ಪ ದಿನ, ತಿಂಗಳಗಳವರೆಗೂ ನೆನದು ಮರೆತುಬಿಡುತ್ತಾರೆ. ಆದರೆ ಕನ್ನಡಿಗರ ಪ್ರೀತಿಯ ಮಗ ಅಪ್ಪು ವಿಷಯದಲ್ಲಿ ಅದು ಹಾಗಾಗಲಿಲ್ಲ. ಅಗಲಿ ಮೂರು ವರ್ಷವಾದರೂ ಇಂದಿಗೂ ಪ್ರತಿದಿನ ಕಂಬನಿ ಮಿಡಿಯುವವರಿದ್ದಾರೆ.

ಪ್ರತಿಯೊಂದು ಮನೆಯಲ್ಲಿ ತಮ್ಮ ಮನೆ ಮಗನ ಜನ್ಮ ದಿನವನ್ನು ಆಚರಿಸುವ ಹಾಗೆ ಕೇಕ್ ಕಟ್ ಮಾಡುವ ಮೂಲಕ ಪ್ರೀತಿ ವಾತ್ಸಲ್ಯ ತೋರಿ ಕಣ್ಣೀರು ಹಾಕುತಿದ್ದಾರೆ. ಅಭಿಮಾನಿಗಳಲ್ಲಿ ಅವರನ್ನು ಕಳೆದುಕೊಂಡ ನೋವು ಮಾತ್ರ ಕಡಿಮೆಯಾಗಿಲ್ಲ. ಅನೇಕ ಮನೆಗಳ ದೇವರ ಮನೆಯಲ್ಲಿ ಪೂಜ್ಯನೀಯ ಸ್ಥಾನ ಪಡೆದಿದ್ದಾರೆ. 

ಪ್ರತೀ ಜಾತ್ರೆ ತೇರುಗಳ ಮೇಲೆ ದೇವರ ಬಳಿ ಇವರ ಭಾವಚಿತ್ರಕ್ಕೆ ಪೂಜಿಸಲಾಗುತ್ತಿದೆ. ಆಡಿಯೋ, ಟೈಟಲ, ಟ್ರೈಲರ್, ಟೀಸರ್ ಯಾವುದೇ ಸಿನಿಮಾ ಕಾರ್ಯಕ್ರಮಗಳಿದ್ದರೂ ಮೊದಲು ಪುನೀತ್ ಅವರನ್ನು ನೆನೆದು ಮುಂದಿನ ಕಾರ್ಯಕ್ರಮ ಶುರು ಮಾಡುವ ಪದ್ಧತಿ ಅಗಲಿ ಮೂರು ವರ್ಷವಾದರೂ ಇಂದಿಗೂ ಗಾಂಧಿನಗರದಲ್ಲಿ ನಡೆದುಕೊಳ್ಳುತ್ತಾ ಬಂದಿದೆ. ಬಿಡುಗಡೆಯಾಗುವ ಪ್ರತೀ ಚಿತ್ರದಲ್ಲಿ ಮೊದಲಿಗೆ ಅಭಿಮಾನದ ನುಡಿಗಳನ್ನು ಬರೆಯಲಾಗಿರುತ್ತದೆ. ಅಷ್ಟರಮಟ್ಟಿಗೆ ಗಾಂನಗರ ಅಪ್ಪು ಅವರನ್ನು ನೆನಪುಗಳ ಮೂಲಕ ಜೀವಂತವಾಗಿರಿಸಿದೆ. 

ಇಂದು ಹಳ್ಳಿ, ಪಟ್ಟಣ, ನಗರಗಳ ಮೂಲೆಮೂಲೆಗಳಲ್ಲೂ ಪುನೀತ್ ರಾಜಕುಮಾರ್ ಭಾವಚಿತ್ರಗಳ ದೊಡ್ಡ ದೊಡ್ಡ ಕಟೌಟ್‍ಗಳು ಹೂವುಗಳಿಂದ ಅಲಂಕೃತಗೊಂಡು ರಾರಾಜಿಸುತ್ತಿವೆ. ಪುನೀತ್ ಸಮಾಯ ಬಳಿ ಸಾವಿರಾರು ಅಭಿಮಾನಿಗಳು ಕೈಯಲ್ಲಿ ಕೇಕುಗಳನ್ನು ಹಿಡಿದು ತಂಡೋಪ ತಂಡವಾಗಿ ಬಂದು ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಎದೆ ಭಾರ ಮಾಡಿಕೊಂಡು ಆಚರಿಸುತ್ತ, ಜೈ ಅಪ್ಪು, ಅಪ್ಪು ಅಮರ,ಅಪ್ಪು ಮತ್ತೆ ಹುಟ್ಟಿ ಬಾ ಘೋಷಣೆಗಳನ್ನು ಕೂಗುತ್ತಾ ಮತ್ತೊಮ್ಮೆ ಸಮಾಯ ದರ್ಶನವನ್ನು ಮಾಡುತ್ತಾ ಕಣ್ಣೀರು ಸುರಿಸುತ್ತಾ ಸಾಗುತ್ತಿದ್ದಾರೆ. ಇಂದೂ ಕೂಡ ರಾಜ್ಯದ ಮೂಲೆಮೂಲೆಗಳಿಂದ ಸಾವಿರಾರು ಮಂದಿ ಸಮಾಯ ಬಳಿ ಬಂದು ದರ್ಶನ ಮಾಡುವ ಮೂಲಕ ಹುಟ್ಟು ಹಬ್ಬಕ್ಕೆ ಶುಭ ಹಾರೈಸುತ್ತಿದ್ದಾರೆ. 

ರಾಜ್ಯಾದ್ಯಂತ ಸಾವಿರಾರು ದೇವಸ್ಥಾನಗಳಲ್ಲಿ ಪುನೀತ್ ಹೆಸರಿನ ಮೇಲೆ ಹೋಮ, ಹವನ, ಅಭಿಷೇಕ ಕೈಂಕರ್ಯಗಳು ನಡೆಯುತ್ತಿದ್ದು, ಅನ್ನ ದಾಸೋಹ ಕಾರ್ಯಕ್ರಮಗಳು ದೊಡ್ಡಮಟ್ಟದಲ್ಲಿ ಜರುಗುತ್ತಿವೆ. ಇದಷ್ಟೇ ಅಲ್ಲದೆ ಪುನೀತ್ ಅಭಿಮಾನಿಗಳ ಸಂಘಗಳು ಮತ್ತು ವಿವಿಧ ಸಂಘಟನೆಗಳು ಇಂದು ನೇತ್ರದಾನ ಅರಿವು ಕಾರ್ಯಕ್ರಮ, ರಕ್ತದಾನ ಶಿಬಿರಗಳು, ನೇತ್ರ ಚಿಕಿತ್ಸಾ ಶಿಬಿರಗಳು,ಅಂಗಾಂಗ ದಾನ, ಬಡ ಶಾಲಾ ಮಕ್ಕಳಿಗೆ ನೆರವು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಅಪ್ಪು ಸಮಾಜಮುಖಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. 

ಅಪ್ಪು ಅವರ ಫ್ಯಾನ್ಸ್ ಕೇವಲ ಹುಡುಗರಷ್ಟೇ ಅಲ್ಲ. ಮಹಿಳೆಯರಿಗೆ ಇವರೆಂದರೆ ಪಂಚಪ್ರಾಣ. ಪ್ರತಿಯೊಂದು ಮನೆ ಮನೆಯಲ್ಲಿ ಅಣ್ಣ, ತಮ್ಮ, ಮಗನಂತೆ ಮನೆಯ ಸದಸ್ಯನಾಗಿ ಆರಾಸುವ ಇವರು ಕುಟುಂಬಸ್ಥರೊಂದಿಗೆ ಅಪ್ಪು ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಅಗಲಿದ ಮೇಲೆ ಅನೇಕ ತಾಯಂದಿರು ತಮ್ಮ ಮಕ್ಕಳು ಅಪ್ಪುವಿನಂತೆ ಆಗಬೇಕೆಂದು ಅವರ ಹೆಸರಿಟ್ಟಿದ್ದಾರೆ. ಇದು ಇವರ ಮೇಲಿನ ಅಭಿಮಾನಕ್ಕೆ ಮತ್ತೊಂದು ಉದಾಹರಣೆ.

ಅಪ್ಪು ಅಭಿನಯದ ಕೊನೆಯ ಚಿತ್ರ ಗಂಧದಗುಡಿ ಚಿತ್ರವನ್ನು ವೀಕ್ಷಿಸಿ ಪ್ರೇಕ್ಷಕ ಹೃದಯ ಭಾರ ಮಾಡಿಕೊಂಡು ಕೊನೆಯ ವಿದಾಯ ಹೇಳಿದ್ದ. ಅಪ್ಪು ಯಾವಾಗಲೂ ಬಾಕ್ಸ್ ಆಫೀಸ್ ಸುಲ್ತಾನನಾಗಿದ್ದ. ಅವರು ಇಲ್ಲದಿದ್ದರೂ ಅದು ಮತ್ತೆ ಸಾಬೀತಾಗಿದೆ. ಏಕೆಂದರೆ ಈ ವಾರ ಮತ್ತೆ ತೆರೆಕಂಡು ಭರ್ಜರಿ ಪ್ರದರ್ಶನವಾಗುತ್ತಿರುವ ಜಾಕಿ ಚಿತ್ರವನ್ನು ಅಭಿಮಾನಿಗಳು ಮತ್ತೆ ಮತ್ತೆ ನೋಡುತ್ತಿದ್ದಾರೆ. ಒಂದೇ ದಿನದಲ್ಲಿ ಕೋಟಿ ಕೋಟಿ ಹಣ ಥಿಯೇಟರ್‍ಗಳಿಂದ ಕಲೆಕ್ಷನ್ ಆಗುತ್ತಿದೆ. ಅಪ್ಪು ಕನ್ನಡಿಗರ ಹೃದಯಗಳಲ್ಲಿ ಅಜರಾಮರವಾಗಿ ನಿಂತಿದ್ದಾರೆ.

Related Post

Leave a Reply

Your email address will not be published. Required fields are marked *