Breaking
Tue. Dec 24th, 2024

ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥ ಪ್ರಕರಣ; ಚಿಕಿತ್ಸೆ ಫಲಿಸದೆ ಓರ್ವ ಬಾಲಕ ಸಾವು..!

ದಾವಣಗೆರೆ : ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪಟ್ಟಣದಲ್ಲಿ ಪಾನಿಪೂರಿ ಸೇವಿಸಿ 19 ಮಕ್ಕಳು ತೀವ್ರ ಅಸ್ವಸ್ಥಗೊಂಡು ಪ್ರಕರಣದಲ್ಲಿ ಇಂದು‌  6 ವರ್ಷದ ಓರ್ವ ಬಾಲಕ ಚಿಕಿತ್ಸೆ ಫಲಿಸದೆ, ಜಿಲ್ಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಹಜರತ್ ಬಿಲಾಲ್ ಬಿನ್ ಇರ್ಫಾನ್ (6) ಸಾವನ್ನಪ್ಪಿದ ಬಾಲಕ. ಮಾರ್ಚ್ 15 ರಂದು ಸಂಜೆ ಹರಿಹರ ತಾಲ್ಲೂಕಿನ ಮಲೆಬೆನ್ನೂರಿನಲ್ಲಿ ರಂಜಾನ್ ಹಬ್ಬದ ಹಿನ್ನೆಲೆ ಉಪವಾಸ ಅಂತ್ಯದ ಬಳಿಕ ಜಾಮೀಯಾ ಮಸೀದಿ ಬಳಿ ಮಾರುತ್ತಿದ್ದ ಪಾನಿಪೂರಿ ತಿಂದಿದ್ದರು. ಪಾನಿಪೂರಿ ತಿಂದ ಕೆಲ ಹೊತ್ತಿನಲ್ಲಿ ವಾಂತಿ-ಭೇದಿ, ಹೊಟ್ಟೆ ನೋವಿನಿಂದ ತೀವ್ರ 19 ಮಕ್ಕಳು ಅಸ್ವಸ್ಥಗೊಂಡಿದ್ದರು.

19 ಮಕ್ಕಳ ಪೈಕಿ ನಾಲ್ವರು ಸ್ಥಿತಿ ಚಿಂತಾಜನಕವಾಗಿತ್ತು. ದಾವಣಗೆತೆ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಒಂದು ಮಗು ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದೆ. ಇನ್ನುಳಿದು ಮೂವರು ಮಕ್ಕಳು ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಂಡಿದ್ದಾರೆ.

ಘಟನೆ ಬಳಿಕ ಪಾನಿಪೂರಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಪರಾರಿಯಾಗಿದ್ದು, ಆರೋಪಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದದೆ.

Related Post

Leave a Reply

Your email address will not be published. Required fields are marked *