ದಾವಣಗೆರೆ : ನಗರದ ಕೆ.ಟಿ.ಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇದ್ದಕ್ಕಿದ್ದಂತೆ ನಡು ರಸ್ತೆಯಲ್ಲಿ ಕಾರು ಹೊತ್ತಿ ಉರಿದಿರುವಂತಹ ಘಟನೆ ನಡೆದಿದೆ.
ರಸ್ತೆ ಪಕ್ಕದಲ್ಲಿ ನೆಲೆಸಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಹದಡಿ ರಸ್ತೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆ ಬಿಸಿಲಿನ ತಾಪಮಾನಕ್ಕೆ ಆಗಿದೆಯೋ ಅಥವಾ ತಾಂತ್ರಿಕ ದೋಷದಿಂದ ಆಗಿದೆಯೋ ಎಂಬ ನಿಖರ ಕಾರಣ ತಿಳಿದಿಲ್ಲ. ಹೊತ್ತಿದ ಬೆಂಕಿ ನೋಡ ನೋಡುತ್ತಲೇ ಇಡೀ ಕಾರನ್ನು ಆವರಿಸಿದೆ. ಇಡೀ ಕಾರು ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಆಗಿಲ್ಲ.
ನಗರದ ಹದಡಿ ರಸ್ತೆಯ ವಿಶಾಲ್ ಮಾರ್ಟ ಮುಂದೆ ಘಟನೆ ನಡೆದಿದೆ. ನಿಂತಿರುವ ಕಾರಿನಲ್ಲಿ ಬೆಂಕಿ ಕಂಡು ಜನ ಆತಂಕಗೊಂಡರು. ಜನರು ನೀರಿಗಾಗಿ ಪರದಾಡಿದರು. ಬೆಂಕಿ ಹತ್ತಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಾಂತಿ ನಗರದ ನಿವಾಸಿ ನಾಗನ್ಕಾಯ್ ಎಂಬುವವರಿಗೆ ಬೆಲೆನೋ ಕಾರು ಸೇರಿದೆ. ಮಗನ ಪರೀಕ್ಷೆ ಇದ ಕಾರಣ ಮಗನನ್ನು ಕರಕೊಂಡು ತಂದೆ ಬಂದಿದ್ದರು. ಸಮಯ ಇರುವ ಕಾರಣ ವಿಶಾಲ ಮಾರ್ಟನಲ್ಲಿ ಬಟ್ಟೆ ಖರೀದಿಗೆ ಕಾರ ಪಾರ್ಕಿಂಗ್ ಮಾಡಿ ಹೋದಾಗ ಘಟನೆ ನಡೆದಿದೆ.