ಮಾಗಡಿ : ಬೈಚಾಪುರ ಕರಗದಹಳ್ಳಿ ನಡುವೆ ನಡೆಯಲಿರುವ ಪುರಾಣ ಪ್ರಸಿದ್ಧ ಜಡೆ ಮುನೇಶ್ವರಿ ಮತ್ತು ಚೌಡೇಶ್ವರಿ ಅಮ್ಮನವರ ದೇವಾಲಯದಲ್ಲಿ ಮಾರ್ಚ್ 24 ರಿಂದ 26 ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಪ್ರಧಾನ ಅರ್ಚಕರಾದ ಪುರುಷೋತ್ತಮ್ ತಿಳಿಸಿದ್ದಾರೆ.
ದೇವಾಲಯದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದವರು ಮಾರ್ಚ್ 24ರಂದು ಬೆಳಗ್ಗೆ 9:00ಗೆ ಗಂಗಾ ಪೂಜೆ, ಮೂಲದೇವರುಗಳಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ ನಡೆಯಲಿದೆ. ಸಂಜೆ 5:00ಗೆ ಮರಿಯಕ್ಕದೇವಿಯ ಆಗಮನವಾಗಲಿದೆ, ಮಾರ್ಚ್ 25ರಂದು ಬೆಳಗ್ಗೆ ಉಭಯಮ್ಮನವರಿಗೆ ಪಂಚಾಮೃತ, ಅಭಿಷೇಕ ಹೂವಿನ ಅಲಂಕಾರ, ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಸಾಮೂಹಿಕ ದಾಸೋಹ ನಡೆಯಲಿದೆ.
ಸಂಜೆ 4:00ಗೆ ಜಡೆ ಮುನೇಶ್ವರಿ, ಚೌಡೇಶ್ವರಿ ಮರಿಯಕ್ಕ ತ್ರಿವಳಿ ದೇವಿಯರ ಅಲಂಕೃತ ಉತ್ಸವ ಮೂರ್ತಿಗಳನ್ನು ಬೆಳ್ಳಿರಥದಲ್ಲಿಟ್ಟು ವಿವಿಧ ಜನಪದ ಕಲಾತಂಡಗಳೊಂದಿಗೆ ಪಟ್ಟಣದ ಮುಖ್ಯ ಬೇದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಇದೇ ದಿನ ರಾತ್ರಿ 10 ಗಂಟೆಗೆ ಅಗ್ನಿಕೊಂಡೋತ್ಸವ ನಡೆಯಲಿದೆ.
ಮಾರ್ಚ್ 26ರಂದು ಮುಂಜಾನೆ 5:30ಕ್ಕೆ ಅಗ್ನಿಕೊಂಡ ಪ್ರವೇಶ ಮತ್ತು ಮೂಲ ದೇವರುಗಳಿಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಯೋಗ ನಡೆಯಲಿದೆ. ಮಧ್ಯಾಹ್ನ 12:30ಕ್ಕೆ ಸಾಮೂಹಿಕ ದಾಸೋಹ ಏರ್ಪಡಿಸಲಾಗಿದೆ ಕರಗದ ಹಳ್ಳಿ , ಬೈಚಾಪುರ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಲಿದ್ದಾರೆ ಜಡೆ ಮುನೇಶ್ವರಿ ದೇವಿಯ ಮತ್ತು ಚೌಡೇಶ್ವರಿ ದೇವಿಯರ ದೇವಾಲಯದ ಸೇವಾ ಸಮಿತಿಯ ಪದಾಧಿಕಾರಿಗಳು ಜಾತ್ರಾ ಮಹೋತ್ಸವದ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ತಿಳಿಸಿದರು.