Breaking
Tue. Dec 24th, 2024

ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಮಾಡಿದ ಯಡವಟ್ಟಿಗೆ ಬಾಣಂತಿ ಸಾವು..!

ವಿಜಯಪುರ :  ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಮಾಡಿದ ಯಡವಟ್ಟಿಗೆ ಬಾಣಂತಿ ಮೃತಪಟ್ಟ ಘಟನೆ ನಡೆದಿದೆ. ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ ನಂತರ ಬಾಣಂತಿಗೆ ರಕ್ತಸ್ರಾವ ಆಗಿತ್ತು. ಆದರೆ, ಆಸ್ಪತ್ರೆ ಸಿಬ್ಬಂದಿ A+ ರಕ್ತದ ಬದಲು B+ ರಕ್ತ ನೀಡಿದ ಪರಿಣಾಮ ಬಾಣಂತಿ ಮೃತಪಟ್ಟಿದ್ದಾರೆ. ವಿಜಯಪುರ  ಜಿಲ್ಲೆಯ ಬಬಲೇಶ್ವರ ತಾಲೂಕಿನ ದದಾಮಟ್ಟಿ ಗ್ರಾಮದ ಶಾರದಾ ದೊಡಮನಿ ಮೃತ ದುರ್ದೈವಿ.

ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಶಾರದಾ ದೊಡಮನಿ ಅವರನ್ನು ಫೆಬ್ರವರಿ 23 ರಂದು ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಅವಳಿ ಜವಳಿ ಮಗುವವಿಗೆ ಜನ್ಮ ನೀಡಿದ್ದಾರೆ. ಒಂದು ಹೆಣ್ಣು, ಒಂದು ಗಂಡು ಮಗುವಿಗೆ ಜನ್ಮ ನೀಡಿದ ನಂತರ ಶಾರದಾ ಅವರಿಗೆ ತೀವ್ರ ರಕ್ತಸ್ರಾವ ಉಂಡಾಗಿದೆ.

ರಕ್ತಸ್ರಾವ ಹಿನ್ನೆಲೆ ಆಸ್ಪತ್ರೆ ನರ್ಸಿಂಗ್ ಆಪೀಸರ್ಸ್, ಎ ಪಾಸಿಟವ್ ರಕ್ತದ ಗುಂಪು ಹೊಂದಿದ್ದ ಬಾಣಂತಿ ಶಾರದಾ ಅವರಿಗೆ ಒಂದು ಯುನೀಟ್ ಬಿ ಪಾಸಿಟಿವ್ ರಕ್ತವನ್ನು ಕೊಟ್ಟಿದ್ದಾರೆ. ಟಿಬಿ ಖಾಯಿಲೆಯಿಂದ ಬಳಲುತ್ತಿದ್ದ ಶಾರದಾ ಅವರಿಗೆ ಬದಲಿ ರಕ್ತದ ಗುಂಪಿನ ರಕ್ತ ಹಾಕಿ ಸಿಬ್ಬಂದಿ ಯಡವಟ್ಟು ಮಾಡಿಕೊಂಡಿದ್ದಾರೆ.

ರಕ್ತ ನೀಡುತ್ತಿದ್ದಂತೆ ತೀವ್ರ ಅಸ್ವಸ್ಥರಾದ ಶಾರದಾ ಅವರನ್ನು ಜಿಲ್ಲಾಸ್ಪತ್ರೆಯ ವೈದ್ಯರು ನಗರದ ಬಿಎಲ್ಡಿಇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸಾ ವೆಚ್ಚವನ್ನು ಜಿಲ್ಲಾಸ್ಪತ್ರೆಯಿಂದಲೇ ಭರಿಸುವುದಾಗಿ ಶಾರದಾ ಅವರ ಪೋಷಕರಿಗೆ ವೈದ್ಯರು ಭರವಸೆ ನೀಡಿದ್ದರು.

ಫೆಬ್ರವರಿ 23 ರಿಂದ ಇಂದಿನವರೆಗೂ 26 ದಿನಗಳ ಕಾಲ ಬಿಎಲ್ಡಿಇ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ, ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಶಾರದಾ ಅವರು ಇಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಮೃತ ಶಾರದಾ ಅವರ ಅವಳಿ ಜವಳಿ ಮಕ್ಕಳಿಗೆ ಬಿಎಲ್ಡಿಇ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ.

ಮೃತಳ ಪತಿಯ ದದಾಮಟ್ಟಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಘಟನೆಗೆ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಕಾರಣವೆಂದು ಆರೋಪ ಮಾಡಲಾಗಿದ್ದು, ಮೃತ ಶಾರದಾಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಬದಲಿ ರಕ್ತ ಹಾಕಿದವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಆಸ್ಪತ್ರೆ ಸಿಬ್ಬಂದಿ ಅಮಾನತು : ಪ್ರಕರಣ ಸಂಬಂಧ ಜಿಲ್ಲಾಸ್ಪತ್ರೆಯ ಡಿಎಸ್ ಡಾ. ಶಿವಾನಂದ ಮಾಸ್ತಿಹೋಳಿ ಅವರು, ಬದಲಿ ರಕ್ತ ಹಾಕಿದ್ದಕ್ಕೆ ಕಾರಣವಾದ ಲ್ಯಾಬ್ ಟೆಕ್ನಿಷಿಯನ್ ಈರಪ್ಪ ಜಂಬಗಿ, ನರ್ಸಿಂಗ್ ಆಫೀಸರ್ಸ್ ಆಗಿರೋ ಸುರೇಖಾ, ಲಕ್ಷ್ಮೀ ಹಾಗೂ ಸವಿತಾ ಎಂಬುವವರನ್ನು ಸೇವೆಯಿಂದ ಅಮಾನತ್ತು ಮಾಡಿದ್ದಾರೆ.

Related Post

Leave a Reply

Your email address will not be published. Required fields are marked *