ಬಾಲಿವುಡ್ ಅನಿಮಲ್ ಸಿನಿಮಾದಲ್ಲಿ ಸಣ್ಣ ಪಾತ್ರ ಮಾಡಿದ್ದ ನಟಿ ತೃಪ್ತಿ ದಿಮ್ರಿ ಇದೀಗ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇಬ್ಬರು ನಟರ ಜೊತೆ ತೃಪ್ತಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ರು. ಏನಿದು ಹೊಸ ವಿಚಾರ ಅಂತ ಫ್ಯಾನ್ಸ್ ಕೇಳ್ತಿದ್ದಾರೆ.
ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರಿಗಿಂತಲೂ ತೃಪ್ತಿ ದಿಮ್ರಿ ಹೈಲೈಟ್ ಆಗಿದ್ರು. ಅನಿಮಲ್ನಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್, ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆದ್ರೆ ರಣಬೀರ್ ಜೊತೆಗೆ ಹೆಚ್ಚು ಸದ್ದು ಮಾಡಿದ್ದು.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರನ್ನೇ ಹಂದಿಕ್ಕಿ ತೃಪ್ತಿ ದಿಮ್ರಿ ಟಾಪ್ಗೆ ಬಂದಿದ್ದಾರೆ. ಅನಿಮಲ್ನಲ್ಲಿ ಸಿನಿಮಾ ಸಿನಿಮಾದಲ್ಲಿ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತೃಪ್ತಿ ‘ಬ್ಯಾಡ್ ನ್ಯೂಸ್ ’ ನೀಡುತ್ತಿದ್ದಾರೆ.
ಇಬ್ಬರು ನಟರ ಜೊತೆ ತೃಪ್ತಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಬೋಲ್ಡ್ ಫೋಟೋ ನೋಡಿದ ಫ್ಯಾನ್ಸ್. ಏನಿದು ಹೊಸ ವಿಚಾರ ಎಂದು ಕೇಳ್ತಿದ್ದಾರೆ. ಹೊಸ ಸಿನಿಮಾ ಬಗ್ಗೆ ನಟಿ ಮಾಹಿತಿ ನೀಡಿದ್ದಾರೆ.
ವಿಕ್ಕಿ ಕೌಶಲ್, ತೃಪ್ತಿ ದಿಮ್ರಿ, ಆಮಿ ವಿರ್ಕ್ ಅವರ ಮುಂಬರುವ ಚಿತ್ರದ ‘ಬ್ಯಾಡ್ ನ್ಯೂಸ್’ ಬಿಗ್ ಅಪ್ಡೇಟ್ ಹೊರಬಿದ್ದಿದೆ. ಈ ಚಿತ್ರವು ಜುಲೈ 19 ರಂದು ಬಿಡುಗಡೆಯಾಗಲಿದೆ. ಮೋಷನ್ ಪೋಸ್ಟರ್ ಮತ್ತು ಚಿತ್ರದ ಬಿಡುಗಡೆ ದಿನಾಂಕವನ್ನು ಮಾರ್ಚ್ 18 ರಿಲೀಸ್ ಮಾಡಲಾಗಿದೆ.
ತೃಪ್ತಿ ದಿಮ್ರಿ ವಿಕ್ಕಿ ಮತ್ತು ಆಮಿ ಜೊತೆ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ. ಈ ಚಿತ್ರದ ಟೈಟಲ್ ಅನೌನ್ಸ್ ಮಾಡಿದ್ದು, ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ. ಈ ಚಿತ್ರದಲ್ಲಿ ಐವಿಎಫ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಥೆಯನ್ನು ತೋರಿಸಲಿದೆ. ಚಿತ್ರದಲ್ಲಿ ಇಬ್ಬರು ನಾಯಕರು ಮತ್ತು ಒಬ್ಬ ನಟಿ ಇರುವುದರಿಂದ ಅದರಲ್ಲಿ ತ್ರಿಕೋನ ಪ್ರೇಮವಿರಬಹುದು ಎನ್ನಲಾಗ್ತಿದೆ.
ರಣಬೀರ್ ಕಪೂರ್ ಅವರ ಬ್ಲಾಕ್ ಬಸ್ಟರ್ ಚಿತ್ರ ‘ಅನಿಮಲ್’ ಮೂಲಕ ರಾತ್ರೋರಾತ್ರಿ ರಾಷ್ಟ್ರಮಟ್ಟದಲ್ಲಿ ಕ್ರಶ್ ಆದ ತೃಪ್ತಿ ದಿಮ್ರಿ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ. ಅನಿಮಲ್‌ನಿಂದ ಆಕೆಗೆ ಸಿಕ್ಕ ಯಶಸ್ಸಿನ ನಂತರ ಶೀಘ್ರದಲ್ಲೇ ಅವರು ಭೂಲ್ ಭುಲೈಯಾ 3 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ನಟಿ ಇದೀಗ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಭೂಲ್ ಭುಲೈಯಾ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದೇ ಇದಕ್ಕೆ ಒಂದು ಕಾರಣವಾಗಿದೆ ಎನ್ನಲಾಗ್ತಿದೆ. ನಟಿ ಡಿಮ್ಯಾಂಡ್ಗೆ ತಕ್ಕಂತೆ ನಿರ್ಮಾಪಕರು ಸಂಭಾವನೆ ನೀಡುತ್ತಿದ್ದಾರೆ.
ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಚಿತ್ರದಲ್ಲಿನ ಪಾತ್ರಕ್ಕಾಗಿ ತೃಪ್ತಿ 40 ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ರು. ಆದರೆ ಈಗ ಅವರು ಈ ಚಿತ್ರದಿಂದ 80 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ, ಪ್ರಮುಖ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
ಅನಿಮಲ್ ಸಿನಿಮಾದಲ್ಲಿ ಕೆಲವೇ ನಿಮಿಷಗಳ ಕಾಲ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿದ್ರು. ಸಣ್ಣ ಪಾತ್ರದಲ್ಲೂ ರಾತ್ರೋರಾತ್ರಿ ಈ ಚಿತ್ರದಲ್ಲಿ ಫೇಮಸ್ ಆದರು. ಇದೀಗ ‘ಭೂಲ್ ಭುಲೈಯಾ 3’ ನಲ್ಲಿ ಹೆಚ್ಚು ಸ್ಕ್ರೀನ್ ಸ್ಪೇಸ್ ನೀಡಿದ್ದಾರೆ. ಇದೀಗ ಬ್ಯಾಡ್ ನ್ಯೂಸ್ ಸಿನಿಮಾದಲ್ಲೂ ನಟಿ ಕಾಣಿಸಿಕೊಂಡಿದ್ದಾರೆ.
ತೃಪ್ತಿ 2017 ರಲ್ಲಿ “ಪೋಸ್ಟರ್ ಬಾಯ್ಸ್” ಎಂಬ ಹಾಸ್ಯ ಚಿತ್ರದೊಂದಿಗೆ ಪಾದಾರ್ಪಣೆ ಮಾಡಿದರು. 2018 ರಲ್ಲಿ “ಲೈಲಾ ಮಜ್ನು” ಎಂಬ ರೋಮ್ಯಾಂಟಿಕ್ ನಾಟಕದೊಂದಿಗೆ ತೃಪ್ತಿ ಫೇಮಸ್ ಆಗಿದ್ರು.