ಉತ್ತರ ಪ್ರದೇಶ : ಕಾರನ್ನು ಹೆಲಿಕಾಪ್ಟರ್ನಂತೆ ಮಾಡಿಫೈ ಮಾಡಿ ರಸ್ತೆಯಲ್ಲಿ ಚಲಾಯಿಸಿದ್ದರಿಂದ ಮಧ್ಯಪ್ರವೇಶಿಸಿದ ಉತ್ತರ ಪ್ರದೇಶ ಪೊಲೀಸರು ಕೂಡಲೇ ಈ ವಿಭಿನ್ನ ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಸಹೋದರರಿಬ್ಬರು ಶ್ರಮವಹಿಸಿ ತಯಾರಿಸಿದ ವಾಹನವನ್ನು ವಶಕ್ಕೆ ಪಡೆದುಕೊಂಡ ಪೊಲೀಸ್ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಪ್ರಾರಂಭವಾಗಿದೆ.
ಕಾರನ್ನು ಸಹೋದರರಿಬ್ಬರು ಹೆಲಿಕಾಪ್ಟರ್ ಆಗಿ ಪರಿವರ್ತಿಸಿ ಸುದ್ದಿಯಾಗಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಸಹೋದರರು ತಮ್ಮ ಕ್ರಿಯಾತ್ಮಕ ಆಲೋಚನೆಯ ಮೂಲಕ ಕಾರನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ್ದಾರೆ.
ಆದರೆ ಕಾರನ್ನು ಮಾಡಿಫೈ ಮಾಡಿ ರಸ್ತೆಯಲ್ಲಿ ಚಲಾಯಿಸಿದ್ದರಿಂದ ಮಧ್ಯಪ್ರವೇಶಿಸಿದ ಉತ್ತರ ಪ್ರದೇಶ ಪೊಲೀಸರು ಕೂಡಲೇ ಈ ವಿಭಿನ್ನ ವಾಹನವನ್ನು ವಶಕ್ಕೆ ಪಡೆದು ಶಾಕ್ ನೀಡಿದ್ದಾರೆ. ಸಹೋದರರಿಬ್ಬರು ಶ್ರಮವಹಿಸಿ ತಯಾರಿಸಿದ ವಾಹನವನ್ನು ವಶಕ್ಕೆ ಪಡೆದುಕೊಂಡ ಪೊಲೀಸ್ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಪ್ರಾರಂಭವಾಗಿದೆ.
ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಸಹೋದರರ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಪೊಲೀಸ್ ಈ ವಾಹನವನ್ನು ವಶಪಡಿಸಿದಕ್ಕೆ ನೆಟ್ಟಿಗರು “ಸ್ಥಳೀಯ ಪ್ರತಿಭೆಗಳಿಗೆ ಯಾವುದೇ ಬೆಂಬಲವಿಲ್ಲ” ಎಂದು ವಿಷಾದ ವ್ಯಕ್ತಪಡಿಸಿದರು. “ನಮ್ಮ ದೇಶದಲ್ಲಿ ಹಲವಾರು ಮಂದಿ ಇಂತಹ ವಿನೂತನ ಆಲೋಚನೆಗಳೊಂದಿಗೆ ಮುಂದೆ ಬರುತ್ತಿದ್ದರೂ ಸರಿಯಾದ ಪ್ರೋತ್ಸಾಹವಿಲ್ಲದೆ ಹಿಂದುಳಿದಿದ್ದಾರೆ. ಪ್ರತಿಭೆಯಿಂದ ತುಂಬಿದ್ದರೂ, ಸರಿಯಾದ ಆಧಾರವಿಲ್ಲದ ಕಾರಣ ಇಂತಹ ಅನೇಕ ಆವಿಷ್ಕಾರಗಳು ಬೆಳಕಿಗೆ ಬರುತ್ತಿಲ್ಲ” ಎಂದು ನೆಟ್ಟಿಗರು ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.