ಚಂಡೀಗಢ : ಇಂದು ಹರಿಯಾಣದಲ್ಲಿ ನಯಾಬ್ ಸಿಂಗ್ ಅವರ ಸಚಿವ ಸಂಪುಟ ವಿಸ್ತರಣೆಯಾಗಿದೆ. ಒಟ್ಟು 8 ಹೊಸ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಸದ್ಯ ನಯಾಬ್ ಅವರ ಸಂಪುಟದಲ್ಲಿ ಒಟ್ಟು 13 ಮಂದಿ ಸಚಿವರಿದ್ದಾರೆ.
ಇತ್ತೀಚೆಗಷ್ಟೇ ಹರಿಯಾಣದಲ್ಲಿ ಮನೋಹರ್ ಲಾಲ್ ಖಟ್ಟರ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಿಜೆಪಿಯು ನಯಾಬ್ ಸಿಂಗ್ ಅವರನ್ನು ರಾಜ್ಯದ ನೂತನ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಬಹುಮತ ಸಾಬೀತುಪಡಿಸಿದ ನಂತರ ನಯಾಬ್ ಸಿಂಗ್ ಹರಿಯಾಣದ ಹೊಸ ಮುಖ್ಯಮಂತ್ರಿಯಾದರು.
ನಯಾಬ್ ಸಿಂಗ್ ಸಿಎಂ ಆದ ಬಳಿಕ ಇಂದು ರಾಜಭವನದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಒಟ್ಟು 8 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಳೆದ ಬಾರಿ 5 ಮಂದಿಗೆ ಸಚಿವ ಸ್ಥಾನ ನೀಡಲಾಗಿತ್ತು. ಈ ಮೂಲಕ ಈಗ ಉಪ ಸಚಿವ ಸಂಪುಟದಲ್ಲಿ ಒಟ್ಟು 13 ಮಂದಿ ಸಚಿವ ಸ್ಥಾನ ಪಡೆದಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದವರು ಯಾರು?: ಕಮಲ್ ಗುಪ್ತಾ, ಸೀಮಾ ತ್ರಿಖಾ, ಮಹಿಪಾಲ್ ಧಂಡಾ, ಅಸೀಮ್ ಗೋಯಲ್, ಅಭಯ್ ಸಿಂಗ್ ಯಾದವ್, ಸುಭಾಷ್ ಸುಧಾ ಹಾಗೂ ವಿಶಂಭರ್ ಸಿಂಗ್ ವಾಲ್ಮೀಕಿ ಹಾಗೂ ಸಂಜಯ್ ಸಿಂಗ್ ನೂತನ ಸಚವರುಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.