Breaking
Tue. Dec 24th, 2024

ಡಿವೋರ್ಸ್ ಬಳಿಕ ಬರೋಬ್ಬರಿ ಎರಡೂವರೆ ವರ್ಷದ ನಂತರ ಒಂದೇ ವೇದಿಕೆಯಲ್ಲಿ ಸಮಂತಾ – ನಾಗಚೈತನ್ಯ..!

ಟಾಲಿವುಡ್‌ನ :  ಸೆನ್ಸೇಷನ್ ಜೋಡಿಯಾಗಿದ್ದ ಸಮಂತಾ- ನಾಗಚೈತನ್ಯ ಡಿವೋರ್ಸ್ ಪಡೆಯುವ ಮೂಲಕ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದರು. ಇದೀಗ ಡಿವೋರ್ಸ್ ಬಳಿಕ ಬರೋಬ್ಬರಿ ಎರಡೂವರೆ ವರ್ಷದ ನಂತರ ಒಂದೇ ವೇದಿಕೆಯಲ್ಲಿ ಸಮಂತಾ- ನಾಗಚೈತನ್ಯ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.  ಬಹುಭಾಷಾ ಕಲಾವಿದರು ಮತ್ತು ತಂತ್ರಜ್ಞರು ಈ ಮೆಗಾ ಇವೆಂಟ್‌ಗಳಲ್ಲಿ ಭಾಗವಹಿಸಿದ್ದರು.

ಕರಣ್ ಜೋಹರ್  ಈ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಸಮಂತಾ ಹಾಗೂ ನಾಗಚೈತನ್ಯ ಇಬ್ಬರೂ ಭಾಗವಹಿಸಿದ್ದರು. ಸಮಂತಾ  ನಟಿಸಿದ ‘ಸಿಟಾಡೆಲ್’ ವೆಬ್ ಸರಣಿಯನ್ನು ಒಟಿಟಿ ಸಂಸ್ಥೆಯೊಂದು ನಿರ್ಮಾಣ ಮಾಡಿದೆ. ಭಾರತ ವರ್ಷನ್‌ನ ಈ ವೆಬ್ ಸೀರಿಸ್ ಅನ್ನು ‘ಫ್ಯಾಮಿಲಿ ಮ್ಯಾನ್’ (Familyman 2) ಸೀರಿಸ್‌ನ ರಾಜ್ ಮತ್ತು ಡಿಕೆ ನಿರ್ದೇಶಿಸಿದ್ದವರೇ ಸಿಟಾಡೆಲ್‌ ಕೂಡ ನಿರ್ದೇಶನ ಮಾಡಿದ್ದಾರೆ. ಹೀಗಾಗಿ ಸಮಂತಾ ಈ ಕಾರ್ಯಕ್ರಮದ ಭಾಗವಾಗಿದ್ದರು.

ಇನ್ನೊಂದು ಕಡೆ ನಾಗಚೈತನ್ಯ ನಟಿಸಿದ ‘ಧೂತ’ ವೆಬ್ ಸೀರಿಸ್‌ಗೆ ದೊಡ್ಡ ಯಶಸ್ಸು ಸಿಕ್ಕಿತ್ತು. ಹೀಗಾಗಿ ಅವರನ್ನು ಆಹ್ವಾನ ಮಾಡಲಾಗಿತ್ತು. ಈಗ ಒಂದೇ ಕಾರ್ಯಕ್ರಮದಲ್ಲಿ ಮಾಜಿ ದಂಪತಿ ಕಾಣಿಸಿಕೊಂಡಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಹಳೆಯ ಮುನಿಸೆಲ್ಲಾ ಮರೆತು ಮತ್ತೆ ಈ ಜೋಡಿ ಒಂದಾಗಬಾರದಾ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. 

2021ರಲ್ಲಿ ಸಮಂತಾ-ನಾಗಚೈತನ್ಯ ಡಿವೋರ್ಸ್ ಕುರಿತು ಅಧಿಕೃತವಾಗಿ ಅನೌನ್ಸ್ ಮಾಡಿದ್ದರು. ಕೆಲ ಮನಸ್ತಾಪಗಳಿಂದ ದಾಂಪತ್ಯ ಜೀವನಕ್ಕೆ ಇಬ್ಬರು ಗುಡ್‌ ಬೈ ಹೇಳಿದ್ದರು. ಅದಾದ ನಂತರ ಇಬ್ಬರೂ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಒಟ್ನಲ್ಲಿ ಈ ಒಂದು ಕಾರ್ಯಕ್ರಮ ಮಾಜಿ ದಂಪತಿಯನ್ನು ಒಟ್ಟು ಗೂಡಿಸಿರೋದು ಸದ್ಯ ಭಾರೀ ಸುದ್ದಿ ಮಾಡುತ್ತಿದೆ.  

Related Post

Leave a Reply

Your email address will not be published. Required fields are marked *