Breaking
Tue. Dec 24th, 2024

ಭಾರತ : ಹೋಳಿಯನ್ನು  ಬಣ್ಣದ ಹಬ್ಬ ಎಂದೂ ಕರೆಯುತ್ತಾರೆ. ಇದನ್ನು ಫಾಲ್ಗುಣ ಮಾಸದಲ್ಲಿ (ಫೆಬ್ರವರಿ ಅಥವಾ ಮಾರ್ಚ್) ಭಾರತದಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ, ಹೋಳಿಯು ಮಾರ್ಚ್ 25ರಂದು ಬರುತ್ತದೆ. ಮಥುರಾ ಮತ್ತು ವೃಂದಾವನ ದೇವಾಲಯಗಳಲ್ಲಿನ ಸಾಂಪ್ರದಾಯಿಕ ಪದ್ಧತಿಗಳಿಂದ ಹಿಡಿದು ಮೆಟ್ರೋಪಾಲಿಟನ್ ನಗರಗಳಲ್ಲಿನ ಆಧುನಿಕ ಪಾರ್ಟಿಗಳವರೆಗೆ ಭಾರತದಲ್ಲಿ ಹಲವು ರೀತಿಯಲ್ಲಿ ಹೋಳಿಯನ್ನು ಆಚರಿಸಲಾಗುತ್ತದೆ. ಭಾರತದ ಪ್ರತಿಯೊಂದು ಪ್ರದೇಶದಲ್ಲಿ ಹೋಳಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.

ಭಾರತದಲ್ಲಿ ಹೋಳಿ ಹಬ್ಬದ ಆಚರಣೆಗೆ ಕೆಲವು ಅದ್ಭುತ ಸ್ಥಳಗಳಿವೆ. ಅಲ್ಲಿ ಹಬ್ಬವನ್ನು ಬಹಳ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಲಾಗುತ್ತದೆ. ವೀಕೆಂಡ್ನಲ್ಲಿ ನೀವು ಈ ಸ್ಥಳಗಳಿಗೆ ಹೋಗಿ ಹೋಳಿ ಹಬ್ಬವನ್ನು ಆಚರಿಸಬಹುದು.

 ನಗರದ ಹೊರಗೆ ಪ್ರಯಾಣಿಸುವ ಮೂಲಕ ದೀರ್ಘ ವಾರಾಂತ್ಯದ ರಜೆಯನ್ನು ಆನಂದಿಸಲು ಬಯಸುವವರಿಗೆ ಹೋಳಿಯು ಒಳ್ಳೆಯ ಅವಕಾಶವನ್ನು ನೀಡುತ್ತದೆ. ಹೋಳಿ ಮಾರ್ಚ್ 25ರಂದು (ಸೋಮವಾರ) ಬರುತ್ತದೆ. ಅದರ ಜೊತೆಗೆ ಮಾರ್ಚ್ 23 ಮತ್ತು 24 ವಾರಾಂತ್ಯವಾದ್ದರಿಂದ 3 ದಿನಗಳ ಕಾಲ ಹೋಳಿಯನ್ನು ಎಂಜಾಯ್ ಮಾಡಬಹುದು. 

ಹೋಳಿ ಸಮಯದಲ್ಲಿ ಭಾರತದಲ್ಲಿ ಭೇಟಿ ನೀಡಬಹುದಾದ ಟಾಪ್ 5 ಸ್ಥಳಗಳು ಇಲ್ಲಿವೆ:

1. ಮಥುರಾ, ಉತ್ತರ ಪ್ರದೇಶ : ಮಥುರಾದಲ್ಲಿ ಹೋಳಿಯನ್ನು ಆಚರಿಸುವುದು ಈ ಹಬ್ಬಕ್ಕೆ ಸಾಂಪ್ರದಾಯಿಕತೆಯ ಟಚ್ ನೀಡುತ್ತದೆ. ಶ್ರೀಕೃಷ್ಣ ಇಲ್ಲಿ ಜನಿಸಿದ ಕಾರಣ ಈ ತಾಣವು ಪ್ರಸಿದ್ಧವಾಗಿದೆ. ಭಗವಾನ್ ಕೃಷ್ಣನ ಭಕ್ತರಲ್ಲಿ ಹೋಳಿ ಬಹಳ ಸಂಭ್ರಮದ ಹಬ್ಬವಾಗಿದೆ. ಜನರು ದ್ವಾರಕಾಧೀಶ ದೇವಸ್ಥಾನಕ್ಕೆ ಹೋಗಿ ಹೋಳಿಯಲ್ಲಿ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ.

2. ವೃಂದಾವನ, ಉತ್ತರ ಪ್ರದೇಶ : “ಹೂವುಗಳ ಹೋಳಿ” ಆಚರಿಸಲು ಇದು ಅತ್ಯುತ್ತಮ ಸ್ಥಳವಾಗಿದೆ. ವೃಂದಾವನವು ಶಾಂತಿಯನ್ನು ಹುಡುಕುವ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಲವಾರು ಪ್ರವಾಸಿಗರು ಬಂಕೆ ಬಿಹಾರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಹೋಳಿ ಆಚರಣೆಯ ಸಮಯದಲ್ಲಿ ಶಾಂತಿಯುತವಾಗಿ ಪ್ರಾರ್ಥಿಸುತ್ತಾರೆ. ಈ ಮಂಗಳಕರ ದಿನದಂದು ಶ್ರೀಕೃಷ್ಣನಿಗೆ ಭಕ್ತಿಗೀತೆಗಳನ್ನು ಅರ್ಪಿಸುತ್ತಾರೆ.

3. ಶಾಂತಿನಿಕೇತನ, ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ ಶಾಂತಿನಿಕೇತನ ಎಂಬ ಪುಟ್ಟ ಪಟ್ಟಣವು ರವೀಂದ್ರನಾಥ ಠಾಗೋರರಿಂದ ಪ್ರೇರಿತವಾದ ‘ಬಸಂತ ಉತ್ಸವ’ ಎಂದು ಕರೆಯಲ್ಪಡುವ ಹೋಳಿಯನ್ನು ಸಾಂಸ್ಕೃತಿಕ ಪ್ರದರ್ಶನಗಳು, ನೃತ್ಯಗಳು, ಹಾಡುಗಳು ಮತ್ತು ಕವನಗಳೊಂದಿಗೆ ಬಣ್ಣಗಳ ಆಟದೊಂದಿಗೆ ಆಚರಿಸುತ್ತದೆ. ಶಾಂತಿನಿಕೇತನದಲ್ಲಿ ಬಸಂತ ಉತ್ಸವದ ಉತ್ಸವವು ವಿಶ್ವಭಾರತಿ ವಿಶ್ವವಿದ್ಯಾಲಯದ ಆವರಣದಿಂದ ಕೋಪೈ ನದಿಯವರೆಗೆ ‘ಪ್ರಭಾತ್ ಫೆರಿಸ್’ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ಮುಂಜಾನೆ ಮೆರವಣಿಗೆಯೊಂದಿಗೆ ಪ್ರಾರಂಭವಾಗುತ್ತದೆ.

4. ಆನಂದಪುರ್ ಸಾಹಿಬ್, ಪಂಜಾಬ್ : ಪಂಜಾಬ್‌ನ ಆನಂದಪುರ್ ಸಾಹಿಬ್ ಹೋಲಾ ಮೊಹಲ್ಲಾದ ಮೂಲಕ ಹೋಳಿಯನ್ನು ಆಚರಿಸುತ್ತದೆ. ಇದು ಸಮರ ಕಲೆಗಳ ಪ್ರದರ್ಶನಗಳ ಮೂಲಕ ಸಿಖ್ ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ. 3 ದಿನಗಳ ಆಚರಣೆಯ ಸಮಯದಲ್ಲಿ ಸರ್ವಶಕ್ತನ ಆಶೀರ್ವಾದವನ್ನು ಪಡೆಯಲು ಭಕ್ತರು ತಖ್ತ್ ಶ್ರೀ ಕೇಶ್ಘಢ ಸಾಹಿಬ್ಗೆ ಭೇಟಿ ನೀಡುತ್ತಾರೆ.

5. ಮುಂಬೈ, ಮಹಾರಾಷ್ಟ್ರ ಮತ್ತು ದೆಹಲಿ : ಮುಂಬೈ ಮತ್ತು ದೆಹಲಿಯಂತಹ ಮಹಾನಗರಗಳಲ್ಲಿ, ಹೋಳಿಯನ್ನು ಸಂಗೀತ, ನೃತ್ಯ ಮತ್ತು ಬಣ್ಣಗಳ ಅಬ್ಬರವನ್ನು ಹೈಲೈಟ್ ಮಾಡುವ ಪಾರ್ಟಿಗಳೊಂದಿಗೆ ಆಚರಿಸಲಾಗುತ್ತದೆ. ಪಾರ್ಟಿ ಮೂಲಕ ಹೋಳಿಯನ್ನು ಆಚರಿಸುವವರಿಗೆ ಈ ಮೂರು ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಸಾಕಷ್ಟು ಅವಕಾಶಗಳಿವೆ.

ಮುಂಬೈನಿಂದ ಗೋವಾಕ್ಕೆ ಪ್ರಯಾಣಿಸುವ ಜನರು ಈ ವರ್ಷ ವಿಮಾನ ಪ್ರಯಾಣಕ್ಕಾಗಿ ಶೇ. 43ರಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ. ಏಕೆಂದರೆ ವಿಮಾನ ದರವು ಈಗ ಸುಮಾರು 3,372 ರೂ. ಆಗಿದೆ. ಕಳೆದ ವರ್ಷ, ಸರಾಸರಿ ವಿಮಾನ ಟಿಕೆಟ್ ದರ 2,366 ರೂ. ಆಗಿತ್ತು. ಅದೇ ರೀತಿ, ದೆಹಲಿ-ಪಾಟ್ನಾ ಮಾರ್ಗದ ವಿಮಾನ ಟಿಕೆಟ್ ದರವನ್ನು ಶೇ. 46ರಷ್ಟು ಹೆಚ್ಚಿಸಲಾಗಿದೆ. ಪುಣೆ-ನವದೆಹಲಿ ಮಾರ್ಗದ ವಿಮಾನ ದರದಲ್ಲಿ ಶೇ. 42ರಷ್ಟು ಹೆಚ್ಚಳ, ಬೆಂಗಳೂರು-ನವದೆಹಲಿ ಮಾರ್ಗದಲ್ಲಿ ಶೇ. 38ರಷ್ಟು ಹೆಚ್ಚಳ ಮತ್ತು ಮುಂಬೈ-ಜೈಪುರ ಮಾರ್ಗದಲ್ಲಿ ಶೇ. 33ರಷ್ಟು ಏರಿಕೆಯಾಗಿದೆ.

 

Related Post

Leave a Reply

Your email address will not be published. Required fields are marked *