ಇತ್ತೀಚೆಗೆ ‘ಕಂಗುವ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಸಾಕಷ್ಟು ಗಮನ ಸೆಳೆದಿದೆ. ಹೆಣಗಳ ರಾಶಿ, ಫೈಟ್ ಹೀಗೆ ಹಲವು ವಿಚಾರಗಳು ಗಮನ ಸೆಳೆದಿವೆ. ಸಖತ್ ಖಡಕ್ ಆಗಿ ಟೀಸರ್ ಮೂಡಿ ಬಂದಿದೆ.
ತಮಿಳಿನಲ್ಲಿ ಸಿದ್ಧವಾಗುತ್ತಿರುವ ‘ಕಂಗುವ’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಸೂರ್ಯ ಅವರು ವಿವಿಧ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಬಾಬಿ ಡಿಯೋಲ್ ಕೂಡ ನಟಿಸಿದ್ದಾರೆ.
ಇತ್ತೀಚೆಗೆ ‘ಕಂಗುವ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಸಾಕಷ್ಟು ಗಮನ ಸೆಳೆದಿದೆ. ಹೆಣಗಳ ರಾಶಿ, ಫೈಟ್ ಹೀಗೆ ಹಲವು ವಿಚಾರಗಳು ಗಮನ ಸೆಳೆದಿವೆ. ಸಖತ್ ಖಡಕ್ ಆಗಿ ಟೀಸರ್ ಮೂಡಿ ಬಂದಿದೆ.
‘ಕಂಗುವ’ ಸಿನಿಮಾ ಬಗ್ಗೆ ನೀರಿಕ್ಷೆ ಮೂಡಲು ಹಲವು ಕಾರಣಗಳಿವೆ. ಈಗ ಟೀಸರ್ ರಿಲೀಸ್ ಆದ ಬಳಿಕ ಈ ನಿರೀಕ್ಷೆ ಹೆಚ್ಚಿದೆ. ‘ಕಂಗುವ’ ಚಿತ್ರಕ್ಕೆ ಶಿವ ಅವರು ನಿರ್ದೇಶನ ಮಾಡಿದ್ದಾರೆ.
ಬಾಬಿ ಡಿಯೋಲ್ ಕೂಡ ‘ಕಂಗುವ’ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಅವರು ನಟಿಸಿರುವ ಮೊದಲ ದಕ್ಷಿಣ ಭಾರತದ ಚಿತ್ರ ಅನ್ನೋದು ವಿಶೇಷ. ಈ ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಅವರು ಸಂಗೀತ ನೀಡುತ್ತಿದ್ದಾರೆ.
‘ಅನಿಮಲ್’ ಸಿನಿಮಾದಲ್ಲಿ ಬಾಬಿ ಡಿಯೋಲ್ ಅಬ್ಬರಿಸಿದ್ದರು. ಇದಾದ ಬಳಿಕ ಅವರಿಗೆ ಹಲವು ಆಫರ್ ಬಂದಿದ್ದವು. ಅವರು ‘ಕಂಗುವ’ ಚಿತ್ರದಲ್ಲಿಯೂ ಕ್ರೂರವಾದ ಅವತಾರ ತಾಳುತ್ತಿದ್ದಾರೆ.
ಟೀಸರ್ ಸಖತ್ ಅದ್ದೂರಿಯಾಗಿ ಮೂಡಿ ಬಂದಿದೆ. ಈ ಮೂಲಕ ಸಿನಿಮಾ ಹೇಗೆ ಇರಲಿದೆ ಎಂಬ ಸೂಚನೆ ಸಿಕ್ಕಿದೆ. ಸೂರ್ಯ ಅವರ ಲುಕ್ ಗಮನ ಸೆಳೆಯುತ್ತಿದೆ.
‘ಕಂಗುವ’ ಚಿತ್ರದ ಸೆಟ್, ಎಲ್ಲರೂ ಹಾಕಿರುವ ಕಾಸ್ಟ್ಯೂಮ್ ಗಮನ ಸೆಳೆಯುತ್ತಿದೆ. ಈ ರಿಲೀಸ್ ಡೇಟ್ ಬಗ್ಗೆ ಇನ್ನೂ ಸ್ಪಷ್ಟ ಚಿತ್ರ ಸಿಕ್ಕಿಲ್ಲ.