ದಾವಣಗೆರೆ : ಜಿಲ್ಲೆಯಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ದುಗ್ಗಮ್ಮ ಜಾತ್ರೆ ನಡೆಯಲಿದೆ. ಈ ಬಾರಿಯೂ ದುಗ್ಗಮ್ಮ ಜಾತ್ರೆಯನ್ನು ಅದ್ದೂರಿಯಾಗಿ ಮಾಡಲಾಗಿದೆ. ದುಗ್ಗಮ್ಮ ಜಾತ್ರೆ ಬರೋಬ್ಬರಿ ಒಂದು ತಿಂಗಳ ಕಾಲ ನಡೆಯಲಿದೆ.
ಈ ಜಾತ್ರೆಗೆ ಸುತ್ತಮುತ್ತಲಿನ ಜನರು ಸಹ ಸೇರುತ್ತಾರೆ. ಇಲ್ಲಿ ಬಳಗಳದ್ದೇ ಸದ್ದು ಇರುತ್ತದೆ. ಜೊತೆಗೆ ಆದಾಯವೂ ಕಡಿಮೆ ಏನು ಇಲ್ಲ. ಬಳೆಯಿಂದಾನೇ ಒಂದು ಕೋಟಿಗೂ ಹೆಚ್ಚು ವಹಿವಾಟು ಮಾಡಿಕೊಳ್ಳಲಾಗಿದೆ.
ಬೆಣ್ಣೆ ನಗರಿ ದಾವಣಗೆರೆಯ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೂ ಬಳಗಳಿಂದಾನೇ ಸಿಂಗಾರ ಮಾಡಲಾಗಿದೆ. ಬಳೆಗಳೆ ಈ ಜಾತ್ರೆಯ ವಿಶೇಷವಾಗಿದೆ. ಬಳೆಗಳನ್ನು ಮಾರಾಟ ಮಾಡಿಯೇ ಇಲ್ಲಿನ ಬಳೆಗಾರರು ಕೋಟಿ ಕೋಟಿ ಹಣ ದುಡಿಯುತ್ತಾರೆ. ಅಷ್ಟಕ್ಕೂ ಈ ಜಾತ್ರೆಯಲ್ಲಿ ಬಳೆಗಳನ್ನೇ ಮಾರಾಟ ಮಾಡುವುದು ಯಾಕೆ..? ಅದರ ಹಿಂದೆ ಒಂದು ಇತಿಹಾಸವೇ ಇದೆ.
ದುರ್ಗಾಂಭಿಕೆ ಮೂಲತಃ ವಿಜಯ ನಗರ ಜಿಲ್ಲೆಯ ದುಗ್ಗಾವತಿಯ ಮೂಲದವಳು. ದುಗ್ಗಾವತ್ತಿ ದುಗ್ಗಮ್ಮ ಎನ್ನುತ್ತಾರೆ. ದುಗ್ಗಾವತಿಗೆ ದಾವಣಗೆರೆ ಮೂಲದ ಬಳೆಗಾರನೊಬ್ಬ ಬಳೆ ಮಾರಾಟಕ್ಕೆ ಹೋಗುತ್ತಿದ್ದ. ಅಲ್ಲಿ ರೈತರು ಕೊಟ್ಟ ದವಸ ಧಾನ್ಯಗಳ ಚಕ್ಕಡಿಯ ಮೂಲಕ ತರುವ ಆ ಚಕ್ಕಡಿ ಮೂಲಕವೇ ಕರಿಕಲ್ಲಿನ ರೂಪದಲ್ಲಿ ಬಂದವಳು ದುಗ್ಗಮ್ಮ ಅಥವಾ ದುರ್ಗಾದೇವಿ.
ಬಳೆಗಾರನ ಮೂಲಕ ಬಂದು ಇಲ್ಲಿ ಪ್ರತಿಷ್ಠಾಪನೆ ಗೊಂಡು ಖ್ಯಾತಿ ಗಳಿಸಿದ ದುಗ್ಗಮ್ಮನ ನೆನಪಿಗೆ ಬಂದವರು ಬಳೆ ಖರೀದಿ ಮಾಡಲೇ ಬೆೇಕು. ಹೀಗಾಗಿ ಜಾತ್ರೆಗೆ ಬರುವವರೆಲ್ಲಾ ತಾಯಿಯ ದರ್ಶನ ಪಡೆದು, ಪೂಜೆ ಮಾಡಿ, ಜಾತ್ರೆಯಲ್ಲಿ ಸುತ್ತುತ್ತಾರೆ. ಜಾತ್ರೆಯಲ್ಲಿ ಯಾವ ವಸ್ತುವನ್ನು ತೆಗೆದುಕೊಳ್ಳುತ್ತಾರೋ ಬಿಡುತ್ತಾರೋ ಆದರೆ ಬಳೆಯನ್ನು ಎಲ್ಲರು ಕೊಂಡು ಕೊಳ್ಳಲೇಬೇಕು ಎಂಬ ಸಂಪ್ರದಾಯವಿದೆ.