Breaking
Tue. Dec 24th, 2024

ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಂಚನೆ ಪ್ರಕರಣಗಳು, ಸೈಬರ್ ಪ್ರಕರಣಗಳು ಹೆಚ್ಚುತ್ತಲೇ ಇವೆ. ಪೊಲೀಸ್ ಇಲಾಖೆ ಎಷ್ಟೇ ಕ್ರಮ ವಹಿಸಿದರೂ ವಂಚನೆ ಪ್ರಕರಣಗಳಿಗೆ ಬ್ರೇಕ್ ಬೀಳುತ್ತಿಲ್ಲ. ಇದೀಗ, ಗೃಹ ಸಾಲ ಕ್ಲಿಯರ್ ಮಾಡಿಸುವುದಾಗಿ ನಂಬಿಸಿ ವ್ಯಕ್ತಿಗೆ 47 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಜೊತೆಗೆ, 7 ತಿಂಗಳ ಹಿಂದೆ ಸೈಬರ್ ವಂಚಕರು ದೋಚಿದ ಹಣವೂ ಸಿಕ್ಕಿಲ್ಲ, ಆರೋಪಿಗಳು ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿ, ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿದ್ದಾನೆ. ನಿರ್ವಿಕ್ ರಾಧೇಶ್ಯಾಮ್ ಮತ್ತು ಗೌರವ್ ಅರೋರ ಎಂಬವರು 47 ಲಕ್ಷ ರೂಪಾಯಿ ವಂಚಿಸಿದ್ದಾರೆ ಆರೋಪಿ ಸಂಜಯ್ ಎಂಬವರು ಕೇಂದ್ರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಿಸಿದ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬ್ಯಾಂಕ್ ಮೂಲಕ ಸಂಜಯ್ ಗೃಹ ಸಾಲ ತೆಗೆದುಕೊಂಡಿದ್ದರು. ಈ ವಿಚಾರ ತಿಳಿದ ಮ್ಯೂಚುಯಲ್ ಫ್ರೆಂಡ್ ನಿರ್ವಿಕ್ ರಾಧೆ ಶ್ಯಾಮ್, ತನಗೆ ಬ್ಯಾಂಕ್ನ ಹಿರಿಯ ಅಧಿಕಾರಿಗಳು ಪರಿಚಯ ಇದ್ದಾರೆ. ಬ್ಯಾಂಕ್ ಲೋನ್ ಸೆಟಲ್ಮೆಂಟ್ ಮಾಡಿಸುವುದಾಗಿ ನಂಬಿಸಿ ಗೌರವ್ ಅರೋರ ಎಂಬಾತನನ್ನ ಬ್ಯಾಕ್ನ ಲೀಗಲ್ ಲಾಯರ್ ಎಂದು ಪರಿಚಯಿಸಿದ್ದನು. 

ಲೀ ಫೀಸ್ ಅಂತ ಸಂಜಯ್ಗಲ್ ಅವರಿಂದ 3.50 ಲಕ್ಷ ರೂ. ಪಡೆದಿದ್ದ ಆರೋಪಿಗಳು, ಬಳಿಕ ಮುಂಬೈಗೆ ಕರೆಸಿಕೊಂಡು ಸೆಟಲ್ ಮೆಂಟ್ ಬಗ್ಗೆ ಮಾತುಕತೆ. ಸಂಜಯ್ ಬ್ಯಾಂಕ್‌ಗೆ ಮರುಪಾವತಿಸಬೇಕಾದ ಹಣವನ್ನು ಗೌರವ್ ಅಕೌಂಟ್‌ಗೆ ಪಾವತಿಸಲು ನಿರ್ವಿಕ್ ಹೇಳಿದ್ದಾರೆ. ಅದರಂತೆ 47.50 ಲಕ್ಷ ರೂ. ಗೌರವ್ ಅರೋರ ಖಾತೆಗೆ ಸಲ್ಲಿಸಿದ್ದಾರೆ.

ಬಳಿಕ ನಿರ್ವಿಕ್ ಮತ್ತು ಗೌರವ್ ಸಂಪರ್ಕಕ್ಕೆ ಸಿಗದೆ ತಲೆಮರೆಸಿಕೊಂಡಿದ್ದಾರೆ. ಬಳಿಕ ತಾನು ವಂಚನೆಗೆ ಸಿಲುಕಿರುವುದು ಖಚಿತವಾಗುತ್ತಿದ್ದಂತೆ ಸಂಜಯ್, ಕೇಂದ್ರ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾರೆ. ನಿರ್ವಿಕ್ ಮತ್ತು ಗೌರವ್ ಎಂಬವರು ಸುಳ್ಳು ಹೇಳಿ ವಂಚಿಸಿರುವ ಸಂಜಯ್ ದೂರಿನಲ್ಲಿ ಆರೋಪಿಸಿದ್ದಾರೆ. 

ಹಣವೂ ಇಲ್ಲ, ಆರೋಪಿಗಳ ಪತ್ತೆಯೂ ಇಲ್ಲ; ಟ್ವೀಟ್ ಮಾಡಿದ ವಿದ್ಯಾರ್ಥಿ

ಹೆಚ್ಚಿನ ದಿನೇ ದಿನೇ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ದೂರು ನೀಡಿದರೂ ಪ್ರಯೋಜನವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಅನಾಶ್ ಮೆಹಮೂದ್ ಎಂಬ ವಿದ್ಯಾರ್ಥಿ 7 ತಿಂಗಳ ಹಿಂದೆ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ 20 ಸಾವಿರ ಹಣ ಕಳೆದುಕೊಂಡಿದ್ದ. ನಂತರ ಕೆ.ಆರ್ ಪುರಂ ಠಾಣಾ ಪೊಲೀಸರಿಗೆ ಕರೆ ಮಾಡಿ ಅಕೌಂಟ್ ಸಹ ಫ್ರೀಜ್ ಮಾಡಿದ್ದಾನೆ.

ಆದರೆ, ಪ್ರಕರಣ ನಡೆದಿದ್ದು 7 ತಿಂಗಳಾದರೂ ಇತ್ತ ಫ್ರೀಜ್ ಹಣವೂ ಬಂದಿಲ್ಲ, ಆರೋಪಿಗಳು ಪತ್ತೆಯಾಗುತ್ತಿಲ್ಲ. ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲ ಎಂದು ಆಕ್ರೋಶಗೊಂಡ ವಿದ್ಯಾರ್ಥಿ ಅನಾಶ್, ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದಾನೆ.

ದೂರುದಾರರ ಟ್ವೀಟ್ ಕುರಿತು ಪೊಲೀಸ್ ಆಯುಕ್ತರು, ಪ್ರಕರಣದ ಪ್ರಗತಿ ಮಾಹಿತಿ ಕೇಳಿದ್ದಾರೆ. ತನಿಖೆಯ ಹಂತದಲ್ಲಿದೆ, ಪ್ರೀಜ್ ಆದ ಹಣ ವಾಪಸ್ ಯಾಕೆ ದೂರುದಾರರಿಗೆ ಹೋಗಿಲ್ಲ ಅಂತ ಮಾಹಿತಿ ಪಡೆಯಲು ಮುಂದಾಗಿದ್ದಾರೆ.

 

Related Post

Leave a Reply

Your email address will not be published. Required fields are marked *