Breaking
Wed. Dec 25th, 2024

ಚುನಾವಣಾ ಹೊತ್ತಿನಲ್ಲೇ ಹೆಚ್ಚಾಯ್ತು ಸೈಬರ್‌ ಕಳ್ಳರ ಹಾವಳಿ

 ಬೆಂಗಳೂರು : 2018ರಲ್ಲಿ ತೆರೆಕಂಡ ತಮಿಳಿನ `ಇರುಂಬುತಿರೈ’ (ಕಬ್ಬಿನ ಪರದೆಯ ಹಿಂದೆ) ಸಿನಿಮಾ ಸಾಕಷ್ಟು ಸದ್ದು ಮಾಡಿತ್ತು. ಸೈಬರ್ ವಂಚನೆ ಹೇಗೆಲ್ಲಾ ವಂಚನೆ ಮಾಡಲು? ಎಂಬುದನ್ನ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು.

ನಕಲಿ ಸಂದೇಶಗಳನ್ನು ಕಳುಹಿಸಿ ಜನರ ಬ್ಯಾಂಕ್ ಖಾತೆಗಳಿಂದ ಹಣ ಎಗರಿಸುತ್ತಾರೆ ಎಂಬುದನ್ನ ತೋರಿಸಲಾಗಿದೆ. ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಅದೇ ರೀತಿಯ ವಂಚನೆ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ. ಹೊಸ ರೂಪದಲ್ಲಿ ಅಗೋಚರ ಶತ್ರುವಿನ ಪ್ರತ್ಯಕ್ಷವಾಗಿದೆ. ಚುನಾವಣೆ ಸಮೀಪಿಸುವಂತೆ ಸೈಬರ್ ಖದೀಮರು ಕೂಡ ಫುಲ್ ಅಲರ್ಟ್ ಆಗಿದ್ದಾರೆ.

ಚುನಾವಣೆ ಹೊತ್ತಲ್ಲೇ ನಕಲಿ ಮೆಸೇಜ್‌ಗಳ ಹಾವಳಿ ಸಹ ಹೆಚ್ಚಾಗುತ್ತಿದೆ. ಇಲ್ಲಿ ಸ್ವಲ್ಪ ಯಾಮಾರಿದ್ರೂ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಬೀಳೋದು ಗ್ಯಾರಂಟಿ. ಹೌದು ಚುನಾವಣೆ ಸಂದರ್ಭದಲ್ಲಿ ಪ್ರಧಾನಿಗಳ ಫೋಟೋ ಬಳಸಿ ಫೇಕ್ ಮೆಸೇಜ್ ಹರಿಬಿಡಲಾಗುತ್ತಿದೆ. ಎಲ್ಲರ ಖಾತೆಗೆ ಮೋದಿಯವರ ಕಡೆಯಿಂದ 5,000 ರೂಪಾಯಿ ಅನ್ನೋ ಫೇಕ್ ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ. 

 5,000 ಪಡೆದಿದ್ದೀರಿ, ಇದನ್ನು ನಿಮ್ಮ ಅಕೌಂಟ್‌ಗೆ ಹಾಕಲು ಲಿಂಕ್ ಮಾಡಿ ಎಂಬ ಸಂದೇಶ ಕಳುಹಿಸುತ್ತಾರೆ. ಲಿಂಕ್ ಕ್ಲಿಕ್ ಮಾಡಿದರೆ ಕೂಡಲೇ ಖಾತೆಯಿಂದ ಹಣ ಎಗರಿಸುವಂತೆ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ. ಕುರುಡು ಕಾಂಚಾಣದ ಓಡಾಟ ಸಹ ಜೋರಾಗಿರೋದ್ರಿಂದ ಜನರು ಸುಲಭವಾಗಿ ಮೋಸದ ಬಲೆಗೆ ಬೀಳುತ್ತಿದ್ದಾರೆ. ಕೂಡಲೇ ಇದಕ್ಕೆ ಕಡಿವಾಣ ಹಾಕಲು ಚುನಾವಣಾಧಿಕಾರಿಗಳು ಹಾಗೂ ಸೈಬರ್ ಅಪರಾಧ ಕರ್ನಾಟಕ ರಕ್ಷಣಾ ವೇದಿಕೆ ದೂರು ನೀಡಿ, ಕ್ರಮಕ್ಕೆ ಒತ್ತಾಯಿಸಿದ್ದಾರೆ. 

 ಈ ರೀತಿಯ ಮೆಸೆಜ್‌ಗಳ ಬಗ್ಗೆ ಸೈಬರ್ ತಜ್ಞರು ಜನರಿಗೆ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ. ಕಳ್ಳರು ಸುಲಭವಾಗಿ ತಂತ್ರಜ್ಞಾನವನ್ನ ಸಾಮಾನ್ಯರ ಖಾತೆಗಳಿಗೆ ಕನ್ನ ಹಾಕುತ್ತಿದ್ದಾರೆ. ಅದ್ರೇ ಈಗ ಪ್ರಧಾನಿಗಳ ಫೋಟೋ ಬಳಸಿ ವಂಚಿಸಲು ಮುಂದಾಗಿದ್ದಾರೆ. ಈ ರೀತಿಯ ಮೆಸೇಜ್ ಬಂದಾಗ ಯಾರೂ ಸಹ ರೆಸ್ಪಾಂಡ್ ಮಾಡಬೇಡಿ. ವೈಯಕ್ತಿಕ ಒಟಿಪಿಗಳನ್ನ ಶೇರ್ ಮಾಡಬೇಡಿ. ಅನ್ಯ ಸಂದೇಶಗಳಿಂದ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡದಂತೆ ತಜ್ಞರ ಸಲಹೆ.  

Related Post

Leave a Reply

Your email address will not be published. Required fields are marked *