Breaking
Tue. Dec 24th, 2024

ಭಾರತ ಕ್ರಿಕೆಟ್ನ ಮೂವರು ದಿಗ್ಗಜರಾದ ಸಿಎಸ್ಕೆ ನಾಯಕ ಎಂಎಸ್ ಧೋನಿ, ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್ ಶರ್ಮಾ ಹಾಗೂ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ

IPL 2024 : 2008 ರಿಂದ ಆರಂಭವಾದ ಐಪಿಎಲ್ನಲ್ಲಿ ಇದುವರೆಗೆ ಹಲವು ಶ್ರೇಷ್ಠ ಆಟಗಾರರು ವಿವಿಧ ತಂಡಗಳನ್ನು ಮುನ್ನಡೆಸಿ ತಂಡಕ್ಕೆ ಯಶಸ್ಸು ತಂದುಕೊಟ್ಟಿದ್ದಾರೆ. ಅವರಲ್ಲಿ ಪ್ರಮುಖರು ಎಂದಾಕ್ಷಣ ನೆನಪಿಗೆ ಬರುವುದು ಭಾರತ ಕ್ರಿಕೆಟ್ನ ಮೂವರು ದಿಗ್ಗಜರಾದ ಸಿಎಸ್ಕೆ ನಾಯಕ ಎಂಎಸ್ ಧೋನಿ, ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್ ಶರ್ಮಾ ಹಾಗೂ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ. 

2008 ರಿಂದ ಆರಂಭವಾದ ಐಪಿಎಲ್ನಲ್ಲಿ ಇದುವರೆಗೆ ಹಲವು ಶ್ರೇಷ್ಠ ಆಟಗಾರರು ವಿವಿಧ ತಂಡಗಳನ್ನು ಮುನ್ನಡೆಸಿ ತಂಡಕ್ಕೆ ಯಶಸ್ಸು ತಂದುಕೊಟ್ಟಿದ್ದಾರೆ. ಅವರಲ್ಲಿ ಪ್ರಮುಖರು ಎಂದಾಕ್ಷಣ ನೆನಪಿಗೆ ಬರುವುದು ಭಾರತ ಕ್ರಿಕೆಟ್ನ ಮೂವರು ದಿಗ್ಗಜ ಆಟಗಾರರು. ಆ ಮೂವರೆದಂದರೆ, ಸಿಎಸ್ಕೆ ನಾಯಕ ಎಂಎಸ್ ಧೋನಿ, ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್ ಶರ್ಮಾ ಹಾಗೂ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ. 

ರೋಹಿತ್ ಶರ್ಮಾ ಹಾಗೂ ಧೋನಿ ನಾಯಕತ್ವದಲ್ಲಿ ಎರಡೂ ತಂಡಗಳು ತಲಾ ಐದೈದು ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗುವ ಮೂಲಕ ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳೆನಿಸಿಕೊಂಡಿವೆ. ಈ ಇಬ್ಬರ ಹೊರತಾಗಿ ಒಂದೇ ಒಂದು ಟ್ರೋಫಿ ಗೆಲ್ಲದಿದ್ದರೂ ಆರ್ಸಿಬಿ ತಂಡವನ್ನು ಐಪಿಎಲ್ನ ಅತ್ಯಂತ ಜನಪ್ರಿಯ ತಂಡವನ್ನಾಗಿಸುವಲ್ಲಿ ಕಿಂಗ್ ಕೊಹ್ಲಿ ಪಾತ್ರ ಆಗಾದವಾಗಿದೆ. 

ಹೀಗಾಗಿಯೇ ಈ ಮೂವರು ಆಟಗಾರರನ್ನು ಐಪಿಎಲ್ನ ಯಶಸ್ವಿ ನಾಯಕರ ಪಟ್ಟಿಯಲ್ಲಿ ಸೇರಿಸಲಾಗಿದೆ. ಕಳೆದ 16 ಆವೃತ್ತಿಗಳಲ್ಲಿ ಈ ಮೂವರಲ್ಲಿ ಒಬ್ಬರಾದರೂ ತಂಡವನ್ನು ಮುನ್ನಡೆಸುವ ಜವಬ್ದಾರಿ ಹೊತ್ತು ಐಪಿಎಲ್ ಅಖಾಡಕ್ಕಿಳಿಯುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಈ ಮೂವರು ನಾಯಕತ್ವವಿಲ್ಲದೆ ಐಪಿಎಲ್ ಆಡಲಿದ್ದಾರೆ. 

ಐಪಿಎಲ್ ಮೊದಲ ಆವೃತ್ತಿಯಿಂದಲೂ ಸಿಎಸ್ಕೆ ತಂಡವನ್ನು ಎಂಎಸ್ ಧೋನಿ ಮುನ್ನಡೆಸುತ್ತಾ ಬಂದಿದ್ದರು. ಅವರ ನಾಯಕತ್ವದಲ್ಲಿ ತಂಡ 5 ಐಪಿಎಲ್ ಟ್ರೋಫಿಗಳೊಂದಿಗೆ, 2 ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದಿದೆ. ಆದರೀಗ ನಿವೃತ್ತಿಯ ಅಂಚಿನಲ್ಲಿರುವ ಧೋನಿ, ಸಿಎಸ್ಕೆ ತಂಡದ ನಾಯಕತ್ವ ತೊರೆದು ಸಾಮಾನ್ಯ ಆಟಗಾರನಂತೆ ಕೊನೆಯ ಸೀಸನ್ ಆಡಲಿದ್ದಾರೆ. 

 ಧೋನಿ ನಂತರ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಒಂದೇ ಸೀಸನ್ನಲ್ಲಿ ಅಂದರೆ 2013 ರ ಆವೃತ್ತಿಯಲ್ಲಿ ತಮ್ಮ ತಮ್ಮ ತಂಡಗಳ ನಾಯಕತ್ವವಹಿಸಿಕೊಂಡರು. 2013 ರ ಐಪಿಎಲ್ ಆರಂಭದಲ್ಲೇ ವಿರಾಟ್ ಕೊಹ್ಲಿಗೆ ನಾಯಕತ್ವ ಸಿಕ್ಕರೆ, ರೋಹಿತ್ ಶರ್ಮಾಗೆ ಸೀಸನ್ನ ಮಧ್ಯ ಭಾಗದಲ್ಲಿ ನಾಯಕತ್ವ ಹಸ್ತಾಂತರಿಸಲಾಗಿತ್ತು. 

ಆದರೆ 2021 ರ ಐಪಿಎಲ್ಗೂ ಮುನ್ನ ವಿರಾಟ್ ಕೊಹ್ಲಿ ಸ್ವತಃ ತಾವೇ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಈ ನಡುವೆ ಸತತ 8 ಆವೃತ್ತಿಗಳಲ್ಲಿ ಆರ್ಸಿಬಿ ತಂಡವನ್ನು ಒಮ್ಮೆಯೂ ಪ್ರಶಸ್ತಿಗೆ ಮುನ್ನಡೆಸಲು ಕೊಹ್ಲಿಗೆ ಸಾಧ್ಯವಾಗದಿದ್ದರೂ, ಕೊಹ್ಲಿ ನಾಯಕತ್ವದಲ್ಲಿ ತಂಡದ ಜನಪ್ರಿಯತೆ ಉತ್ತುಂಗಕ್ಕೇರಿತ್ತು.

ಕೊಹ್ಲಿ ಜೊತೆಯೇ ನಾಯಕತ್ವವಹಿಸಿಕೊಂಡಿದ್ದ ರೋಹಿತ್ ಶರ್ಮಾರನ್ನು 2024ರ ಐಪಿಎಲ್ ಆರಂಭಕ್ಕೂ ಮುನ್ನ ಇದಕ್ಕಿದ್ದಂತೆ ನಾಯಕತ್ವದಿಂದ ಕೆಳಗಿಳಿಸಲಾಯಿತು. ತಂಡವನ್ನು ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ರೋಹಿತ್ರನ್ನು ಮುಂಬೈ ಫ್ರಾಂಚೈಸಿ ಈ ರೀತಿ ನಡೆಸಿಕೊಂಡಿದ್ದು, ಅಭಿಮಾನಿಗಳನ್ನು ಕೆರಳುವಂತೆ ಮಾಡಿತ್ತು.

Related Post

Leave a Reply

Your email address will not be published. Required fields are marked *