ಚಳ್ಳಕೆರೆ : ನಗರದ ನಾಯಕನಹಟ್ಟಿ ಕ್ರಾಸ್ ಬಳಿ ತಪಾಸಣಾ ಕೇಂದ್ರದಲ್ಲಿ ಮಧ್ಯಾಹ್ನ ಬಳ್ಳಾರಿ ಕಡೆಯಿಂದ ಏಕೋ ಕಾರ್ ನಲ್ಲಿ 38 ಲಕ್ಷ ಹಣ ಸಾಕಾಣಿಕೆಯಾಗಿದ್ದು ತಪಾಸಣೆ ನಡೆಸಿದ ಸಂದರ್ಭದಲ್ಲಿ ಹಣ ಇರುವುದು ಕಂಡುಬಂದಿದೆ ಕೂಡಲೇ ಚುನಾವಣಾ ಪ್ಲೈಯಿಂಗ್ ಸ್ಕಾಂಡ್ ಅಧಿಕಾರಿಗಳು ತಾಸಿಲ್ದಾರ್ ಮತ್ತು ಚುನಾವಣಾ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪರಿಶೀಲನ ಸಂದರ್ಭದಲ್ಲಿ ಹಣ ಸಾಕಾಣಿಕೆ ಮಾಡಲು ಅನುಮತಿ ಪಡೆಯದ ಕಾರಣ ಹಣ ಮುಟ್ಟುಗೋಲು ಹಾಕಲಾಗಿದೆ.
ವಾಹನ ತಪಾಸಣೆ ನಡೆಸಿದ ಸಂದರ್ಭದಲ್ಲಿ ಕಾರಿನಲ್ಲಿದ್ದ ಮೂವರು ವ್ಯಕ್ತಿಗಳು ಮಾಹಿತಿ ನೀಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಯೋಜನೆಯ ಹಣವಾಗಿದೆ, ಮಹಿಳಾ ಶ್ರೀ ಶಕ್ತಿ ಸಂಘಗಳಿಗೆ ಸಾಲ ನೀಡಿ ಹಿಂಪಡೆದ ಹಣವಾಗಿದೆ ಇದನ್ನು ಬ್ಯಾಂಕಿಗೆ ಜಮಾ ಮಾಡಬೇಕಿದ್ದು, ನನಗೆ ಸದರಿ ಹಣವನ್ನು ಸೂಟ್ಕೇಸ್ ಮೂಲಕ ಕಚೇರಿಗೆ ತಂದು ಅಲ್ಲಿಂದ ಬ್ಯಾಂಕಿಗೆ ಜಮಾ ಮಾಡುವುದಾಗಿ ತಿಳಿಸಿದ್ದಾರೆ.
ತಾಸಿಲ್ದಾರ್ ರೆಹಮಾನ್ ಪಾಷಾ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಕುಮಾರಸ್ವಾಮಿ ಹಣ ಕಚೇರಿಗೆ ಸೇರಬೇಕಾಗಿದ್ದರೂ ಈ ಹಣವನ್ನು ಸಾಗಾಟ ಮಾಡಲು ಯಾವುದೇ ಅನುಮತಿ ಪಡೆದಿಲ್ಲ. ಅನುಮತಿ ಇಲ್ಲದ ಹಣ ಸಾಗಾಣಿಕೆ ಮಾಡಲು ಅವಕಾಶ ಇರುವುದಿಲ್ಲ ಆದ್ದರಿಂದ ಸದರಿ ಹಣವನ್ನು ಮುಟ್ಟುಗೊಲು ಹಾಕಿಕೊಂಡು ಇಲ್ಲಿನ ಉಪಕಜನೆಯಲ್ಲಿ ಇಡುವುದಾಗಿ ತಿಳಿಸಿದ್ದಾರೆ ಮತ್ತು ಸೂಕ್ತ ದಾಖಲಾತಿಗಳನ್ನು ನೀಡಿದ ನಂತರ ಹಣವನ್ನು ವಾಪಸ್ ಪಡೆಯುವುದಾಗಿದೆ ಎಂದರು.
ಡಿವೈಎಸ್ಪಿ ಟಿಬಿ ರಾಜಣ್ಣ , ಠಾಣಾ ಇನ್ಸ್ಪೆಕ್ಟರ್. ಕೆ. ಕುಮಾರ್, ಪಿಎಸ್ಐ ಕೆ. ಸತೀಶ್ ನಾಯಕ್, ಪರಯುಕ್ತ ಜೀವನ್ ಕಟ್ಟಿಮನಿ, ಕಂದಾಯ ಅಧಿಕಾರಿ ಲಿಂಗೇಗೌಡ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್, ಚುನಾವಣಾ ಇಲಾಖೆ ಹೋಬಳೇಶ್ ಮುಂತಾದವರು ಚೆಕ್ ಪೋಸ್ಟ್ ನಲ್ಲಿ ಉಪಸ್ಥಿತರಿದ್ದರು.