ಇತ್ತೀಚೆಗೆ 8 ವರ್ಷದ ಬಾಲಕಿಯನ್ನು ದತ್ತು ಪಡೆದಿದ್ದ ಸೋನು ಗೌಡ ಅವರ ವಿರುದ್ಧ ಬ್ಯಾಡರ ಹಳ್ಳಿ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ. ಅನಧಿಕೃತವಾಗಿ ಮಗುವನ್ನು ಮನೆಯಲ್ಲಿ ಇಟ್ಟಿಕೊಂಡ ಆರೋಪ ಕೇಳಿ ಬಂದಿದೆ.
ಮಕ್ಕಳ ರಕ್ಷಣಾ ಕಚೇರಿ ಇಲಾಖೆ ಅಧಿಕಾರಿಗಳಿಂದ ಮತ್ತು ಪೊಲೀಸ್ ಜಂಟಿ ಕಾರ್ಯಚರಣೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಮಗು ದತ್ತು ಪಡೆದಿರುವ ಬಗ್ಗೆ ಟ್ರೋಲ್ ಆಗಿತ್ತು. ಸಾಕಷ್ಟು ಸುದ್ದಿಯಾಗಿದ್ದ ಘಟನೆಯಲ್ಲಿ ಈಗ ಹೊಸ ಟ್ವಿಸ್ಟ್ ಬಂದಿದೆ.
ಮಕ್ಕಳ ಹಕ್ಕು ಕಸಿದಿರುವ ಅರೋಪದ ಮೇಲೆ ನೋಟೀಸ್ ಕಳುಹಿಸಲಾಗಿದೆ. ಉತ್ತರ ಕರ್ನಾಟಕದ 8 ವರ್ಷದ ಮಗುವನ್ನು ದತ್ತು ಪಡೆದ ಸೋನು ಗೌಡ ಆ ಬಾಲಕಿಯ ಜೊತೆಗೆ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇದ್ದರು.
ಹೀಗಾಗಿ ಮಕ್ಕಳ ರಕ್ಷಣಾಧಿಕಾರಿಗಳಿಂದ ದೂರು ನೀಡಲಾಗಿತ್ತು. ಬ್ಯಾಡರಿ ಪೊಲೀಸರು ನಟಿಯನ್ನು ವಿಚಾರಣೆಗೆ ಹಾಜರಾಗಲು ನೋಟಿಸ್ ಕಳುಹಿಸಿದ್ದಾರೆ. ದತ್ತು ಪಡೆದರೂ ಕೂಡ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಳ್ಳುವಂತಿಲ್ಲ ಎನ್ನಲಾಗಿದೆ.
ಆದರೆ ಸೋನುಗೌಡ ವಿಡಿಯೋದಲ್ಲಿ ಮಗುವಿನ ಮಾಹಿತಿ ಹಂಚಿಕೊಂಡಿದ್ದರು. ಮಗುವಿನ ತಂದೆ ತಾಯಿಗೂ ಕೂಡ ನೊಟಿಸ್ ಕಳುಹಿಸಲಾಗಿದೆ. ಮಗುವನ್ನ ದತ್ತು ತೆಗೆದುಕೊಂಡಿದ್ದು ನಿಜನಾ? ದತ್ತು ಕೊಡುವಾಗ ಹಣ ಪಡೆದಿದ್ದಾರಾ ಎಂದು ಕೇಳಲಾಯಿತು.
8 ವರ್ಷದ ಮಗುವನ್ನ ಕರೆ ತಂದು ತನ್ನ ಜೊತೆ ಇಟ್ಟುಕೊಂಡಿರುವ ಸೋನುಗೌಡ ಅವರ ವಿರುದ್ಧ ನೆಟ್ಟಿಗರಿಂದಲೂ ಟೀಕೆ ವ್ಯಕ್ತವಾಗಿತ್ತು. ಪಬ್ಲಿಸಿಟಿಗಾಗಿ ನಟಿ ಇದನ್ನೆಲ್ಲ ಮಾಡಬಾರದು ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದರು.
ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಂಡ ಬಳಿಕ ಸೋನು ಗೌಡ ಜನಪ್ರಿಯತೆಯೂ ಹೆಚ್ಚಿದೆ. ಸಿನಿಮಾಗಳಲ್ಲಿ ಸೋನು ಬ್ಯುಸಿ ಆಗಿದ್ದಾರೆ. ಈ ನಡುವೆ ಸೋನು ಗೌಡ ಬಗ್ಗೆ ಶಾಕಿಂಗ್ ಸುದ್ದಿ ಹೊರಬಿದ್ದಿತ್ತು.
ಸೋನು ಗೌಡ ಹೋಗ್ತಿದ್ದ ಕಾರು ಅಪಘಾತಕ್ಕಿಡಾಗಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಕಾರು ಸಂಪೂರ್ಣ ಜಖಂಗೊಂಡಿದ್ದು ಸಣ್ಣ-ಪುಟ್ಟ ಗಾಯಗಳಿಂದ ಸೋನು ಗೌಡ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿತ್ತು. ಇದೀಗ ಸೋನು ಗೌಡ ಅವರೇ ಅಪಘಾತದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ ಸೋನು ನೋಡಿ ನನಗೇನು ಆಗಿಲ್ಲ ಅಂದಿದ್ದಾರೆ. ಇನ್ಸ್ಟಾ ಸ್ಟೋರಿಸ್ನಲ್ಲಿ ವಿಡಿಯೋ ಹಂಚಿಕೊಂಡ ಸೋನು ಗೌಡ,ಯಾರು ಗುರು ಇದು, ನನಗೆ ಯಾವ ಆ್ಯಕ್ಸಿಡೆಂಟ್ ಕೂಡ ಆಗಿಲ್ಲ. ನೋಡಿ ಐ ಆಮ್ ಫೈನ್ ಎಂದು ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.
ಟಿಕ್ ಟಾಕ್ , ರೀಲ್ಸ್ ಮೂಲಕ ಫೇಮಸ್ ಆಗಿರೋ ಸೋನು ಶ್ರೀನಿವಾಸ್, ಬಿಗ್ ಬಾಸ್ ಮನೆಯಲ್ಲಿ ತಮ್ಮ ಖಾಸಗಿ ಬದುಕಿನಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡು ಕಣ್ಣೀರು ಹಾಕಿದ್ರು. ಸೋನು ಶ್ರೀನಿವಾಸ್ ಗೌಡ ಅವರ ಖಾಸಗಿ ವಿಡಿಯೋ ಲೀಕ್ ಆಗಿ ಭಾರೀ ವೈರಲ್ ಆಗಿತ್ತು. ಇದ್ರಿಂದಲೇ ಸೋನು ಗೌಡ ಸಖತ್ ಟ್ರೋಲ್ ಆಗಿದ್ರು. ಸೋಶಿಯಲ್ ಮೀಡಿಯಾದಲ್ಲಿ ಸೋನು ಗೌಡ ಅಪಾರ ಫಾಲೋವರ್ಸ್ ಹೊಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಆ ಬಗ್ಗೆ ಸ್ವತಃ ಸೋನು ಅವರೇ ಒಪ್ಪಿಕೊಂಡಿದ್ರು. ಅಷ್ಟೇ ಅಲ್ಲ, ತಮ್ಮದು ಇನ್ನೊಂದು ವಿಡಿಯೋ ಇದೆ. ಅದನ್ನು ಅವನ್ನು ಯಾವಾಗ ರಿಲೀಸ್ ಮಾಡ್ತಾನೋ ಗೊತ್ತಿಲ್ಲ ಅನ್ನೋ ಆತಂಕವಿದೆ ಎಂದು ಸೋನು ಗೌಡ ಹೇಳಿಕೊಂಡಿದ್ರು.