Breaking
Mon. Dec 23rd, 2024

I.P.L ಪಂದ್ಯ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಿಂಗ್ ನಡೆಯುವ ಬಗ್ಗೆ ಮಾಹಿತಿ ಸಿಕ್ಕಿದೆ : ಡಿಸಿಪಿಗಳಿಗೆ ಅಲರ್ಟ್ ಆಗಿ ಇರಲು ಬೆಂಗಳೂರು ಕಮಿಷನರ್ ದಯಾನಂದ್ ಸೂಚನೆ..?

ಬೆಂಗಳೂರು, ಮಾರ್ಚ್.22: ರಾಜ್ಯದಲ್ಲಿ ಒಂದು ಕಡೆ ಲೋಕ ಸಭೆ ಚುನಾವಣೆ  ಮತ್ತೊಂದೆಡೆ ಐಪಿಎಲ್  ಪಂದ್ಯದ ಕಾವು ಹೆಚ್ಚಾಗುತ್ತಿದೆ. ಸದ್ಯ ಇಂದಿನಿಂದ IPL ಆರಂಭವಾಗುತ್ತಿದ್ದು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. IPL ಪಂದ್ಯ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಿಂಗ್ ನಡೆಯುವ ಬಗ್ಗೆ ಮಾಹಿತಿ ಸಿಕ್ಕಿದೆ. ಡಿಸಿಪಿಗಳಿಗೆ ಅಲರ್ಟ್ ಆಗಿ ಇರಲು ಬೆಂಗಳೂರು ಕಮಿಷನರ್ ದಯಾನಂದ್ ಸೂಚನೆ ನೀಡಿದ್ದಾರೆ.

ನಗರದ ಹೋಟೆಲ್ ಹಾಗೂ ಲಾಡ್ಜ್ಗಳ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.   ಬಾರಿಯ ಮಹಿಳಾ ಪ್ರೀಮಿಯರ್ ಲೀಗ್ನ (WPL) ಫೈನಲ್ ಪಂದ್ಯದಲ್ಲಿ ದೆಹಲಿ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಮಹಿಳಾ ಆರ್ಸಿಬಿ ತಂಡ ಕಪ್ ಗೆದ್ದಿದೆ. ಹೀಗಾಗಿ ಐಪಿಎಲ್ ಪದ್ಯಗಳ ಮೇಲಿನ ಗಮನ ಹೆಚ್ಚಾಗಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬೆಟ್ಟಿಂಗ್ ನಡೆಯೋ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಮಾಹಿತಿ ಬೆನ್ನಲ್ಲೇ ಎಲ್ಲಾ ಡಿಸಿಪಿಗಳಿಗೆ ಅಲರ್ಟ್ ಆಗಿ ಇರಲು ಕಮಿಷನರ್ ಸೂಚನೆ ನೀಡಿದ್ದಾರೆ.

ನಗರದಾದ್ಯಂತ ಬುಕ್ಕಿಗಳ‌ ಮೇಲೆ ತೀವ್ರ ನಿಗಾ ವಹಿಸಬೇಕು. ಆಯಾ ಠಾಣಾ ವ್ಯಾಪ್ತಿಯಲ್ಲಿನ ಬುಕ್ಕಿಗಳ ಮೇಲೆ ನಿಗಾ ಇಡಿ. ಈ ಹಿಂದೆ ಬೆಟ್ಟಿಂಗ್ ಕೇಸ್ ಅಲ್ಲಿ ಅರೆಸ್ಟ್ ಆಗಿ ಜಾಮೀನಿನ ಮೇಲೆ ಬಂದಿರುವವರ ಮೇಲೂ ತೀವ್ರ ನಿಗಾ ಇಡಿ. ಬೆಟ್ಟಿಂಗ್ ಆಡೋಕೆ ಅಂತಾನೆ ಹೋಟೆಲ್, ಲಾಡ್ಜ್ ಗಳಲ್ಲಿ ರೂಂ ಪಡೀತಾರೆ. ಹೀಗಾಗಿ ಹೋಟೆಲ್, ಲಾಡ್ಜ್ ಗಳ ಪರಿಶೀಲನೆ ಮಾಡಬೇಕು. ಎಲ್ಲಾ ಆಯಾಮದಲ್ಲೂ ಮಾಹಿತಿ ಪಡೆಯೋದ್ರ ಜೊತೆಗೆ ಅಲರ್ಟ್ ಆಗಿ ಇರಲು ಸೂಚನೆ ನೀಡಲಾಗಿದೆ.

ಠಾಣಾ ವ್ಯಾಪ್ತಿಯ ಪೊಲೀಸರ ಜೊತೆಗೆ ಸಿಸಿಬಿಯೂ ಫುಲ್ ಅಲರ್ಟ್ ಆಗಿದೆ. ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕುವ ಸಲುವಾಗಿ ಸಿಸಿಬಿಯಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಹಳೇ ಬೆಟ್ಟಿಂಗ್ ಕೇಸಲ್ಲಿ ಬಂಧನ ಆಗಿ ಹೊರಗಡೆ ಇರೋರ ಮೇಲೆ ಹದ್ದಿನ ಕಣ್ಣಿಡಲಾಗಿದೆ. 

 ಐಪಿಎಲ್ ಮೊದಲ ಪಂದ್ಯದಲ್ಲೇ ಆರ್ಸಿಬಿ, ಚೆನ್ನೈ ತಂಡಗಳು ಸೆಣೆಸಾಡಲಿವೆ. ಚೆನ್ನೈ ತಂಡದ ಕ್ಯಾಪ್ಟನ್ಸಿಯಿಂದ ಚಾಂಪಿಯನ್ ಕ್ಯಾಪ್ಟನ್ ಧೋನಿ ಕೆಳಗಿಳಿದು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಐಪಿಎಲ್ ಮೊದಲ ಪಂದ್ಯ ನಡೆಯಲಿದೆ.

ಚೆನ್ನೈ ತಂಡದ ನೂತನ ನಾಯಕನಾಗಿ ಋತುರಾಜ್ ಗಾಯಕ್ವಾಡ್ ಆಯ್ಕೆಯಾಗಿದ್ದಾರೆ. ಆದ್ರೂ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿಯತ್ತಲೇ ಅಭಿಮಾನಿಗಳ ಚಿತ್ತ ನೆಟ್ಟಿದೆ. ಇನ್ನು ಆರ್ಸಿಬಿ ಮಾಜಿ ನಾಯಕ ಕಿಂಗ್ ಕೊಹ್ಲಿ, ಚೆನ್ನೈನಲ್ಲಿ ಯಾವ ರೀತಿ ಬ್ಯಾಟಿಂಗ್ ಮಾಡ್ತಾರೆ ಅನ್ನೋ ನಿರೀಕ್ಷೆ ಹೆಚ್ಚಿದೆ. ಇತ್ತ ಆರ್ಸಿಬಿಯಲ್ಲೂ ವಿರಾಟ್ ಕೊಹ್ಲಿಯ ಬ್ಯಾಟಿಂಗ್ನತ್ತಲೇ ಕ್ರಿಕೆಟ್ ಜಗತ್ತಿನ ಚಿತ್ತನೆಟ್ಟಿದೆ.

Related Post

Leave a Reply

Your email address will not be published. Required fields are marked *