Breaking
Tue. Dec 24th, 2024

ದೊಡ್ಡಬಳ್ಳಾಪುರ 248ರ ರಾಷ್ಟ್ರೀಯ ಹೆದ್ದಾರಿಯ ರಸ್ತೆ ತಡೆದು ರೈತರ ಪ್ರತಿಭಟನೆ

ದೊಡ್ಡಬಳ್ಳಾಪುರ : ಪ್ರತಿ ದಿನ 3000ಕ್ಕೂ ಹೆಚ್ಚು ಜನರು ಸಂಚರಿಸುವ ರಸ್ತೆ 40 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ, ಈ ರಸ್ತೆಗೆ ಅಡ್ಡವಾಗಿ ರಾಷ್ಟ್ರೀಯ ಹೆದ್ದಾರಿ 248  ರಾಷ್ಟ್ರೀಯ ಹೆದ್ದಾರಿ ಏಕಾಏಕಿ ರಸ್ತೆ ಬಂದ್ ಆಗಿದೆ, ಇದು ಸ್ಥಳೀಯ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದೆ.

ದಾಬಸ್ ಪೇಟೆ – ಹೊಸೂರು ರಾಷ್ಟ್ರೀಯ ದೊಡ್ಡಬಳ್ಳಾಪುರ ನಗರದ ಮೂಲಕ ಹಾದು ಹೋಗಿದ್ದು ವಾಹನದ ದಟ್ಟಣೆಗಾಗಿ ದೊಡ್ಡಬಳ್ಳಾಪುರಕ್ಕೆ ವರ್ತುಲ ರಸ್ತೆ ನಿರ್ಮಾಣ ಮಾಡಲಾಗಿದೆ, ಇದೇ ರಸ್ತೆ ದೊಡ್ಡಬಳ್ಳಾಪುರ ಹೆಸರುಗಟ್ಟದ ರಸ್ತೆಯ ಮೇಲೆ ಹಾದುಹೋಗಿದೆ, ರಾಷ್ಟ್ರೀಯ ಪ್ರಾಧಿಕಾರವು ಈ ರಸ್ತೆಯಲ್ಲಿ ಏಕಾಏಕಿ ಬಂದು ರಸ್ತೆಯಿಂದ 40 ಗ್ರಾಮಗಳ ಜನರಿಗೆ ಸಮಸ್ಯೆಗೆ ಅರ್ಜಿ ಸಲ್ಲಿಸಲು ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆಯನ್ನು ಮುಂದುವರಿಸಿದರು. ಹೊರ ವರ್ತುಲ ರಸ್ತೆ ಯೋಜನೆ ಪ್ರಾರಂಭವಾಗಿ ವಿವೇಕಾನಂದ ನಗರ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡುವ ಪ್ಲ್ಯಾನ್ ಇತ್ತು. ಆದರೆ ಇದೇ ಸ್ಥಳದಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಕೆಲವರು ಅಂಡರ್ ಪಾಸ್ ನಿರ್ಮಾಣವಾಗದಂತೆ ಸ್ಟೇಟ್ ತಂದ ಹಾಗೆ ಅಂಡರ್ ಪಾಸ್ ನಿರ್ಮಾಣವಾಗದೆ ರಾಷ್ಟ್ರೀಯ ಹೆದ್ದಾರಿ ಪ್ರಾರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನಗಳ ಸುಗಮ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರವು ಬಂದ್ ಆಗಿದೆ ಇದನ್ನು ತೆರೆಯಲು ಗಳಿಸಿ ಅಂಡರ್ಪ್ಸ್ ನಿರ್ಮಾಣ ಮಾಡಿ ಮುಂದಿನ ಕ್ರಮ ಕೈಗೊಳ್ಳುವಂತೆ ಉಗ್ರ ಹೋರಾಟದ ಎಚ್ಚರಿಕೆಯನ್ನು ಘೋಷಿಸಲಾಯಿತು. ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಆದಿತ್ಯ ನಾಗೇಶ್ ಚಿಕ್ಕ ತುಮಕೂರು ಗ್ರಾಮ ಹೊಟ್ಟೆಯಿಂದ ಇದೇ ರಸ್ತೆಯಲ್ಲಿ ಸಂಚಾರಕ್ಕೆ ಬಳಸಲಾಗಲಿಲ್ಲ, ಮಾಜಿ ಶಾಸಕರಾದ ಟಿ ವೆಂಕಟರಮಣಯ್ಯ ನವರ ಪ್ರಯತ್ನದಿಂದ ಈ ಸ್ಥಳದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ರಸ್ತೆ ಪ್ರಾಧಿಕಾರ ಒಪ್ಪಿಗೆ ನೀಡಿತು.

ಚುನಾವಣಾ ಸಮಯದಲ್ಲಿ ಹೋರಾಟ ಬೇಡ ಎಂದು ಕೆಲವರು ಹೇಳಿದ್ದಾರೆ ಆದ್ದರಿಂದ ಅಂಡರ್ ಪಾಸ್ ನಿರ್ಮಾಣಕ್ಕಾಗಿ ಚುನಾವಣಾ ಬಹಿಷ್ಕಾರ ಮಾಡಲು ಸಹ ನಾವು ಹಿಂಜರಿಯುವುದಿಲ್ಲ. ಸ್ಥಳೀಯ ಮುಖಂಡರಾದ ರಂಗರಾಜು ಮಾತನಾಡಿ ಇದೇ ಸಮಯದಲ್ಲಿ ರಸ್ತೆಯ ಮೂಲಕ ರೈತರು ತರಕಾರಿಯನ್ನು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗುತ್ತಾರೆ.

ಜೊತೆಗೆ ಈ ರಸ್ತೆಯಲ್ಲಿ ಮುಕ್ತಿಧಾಮ ಇದ್ದು, ಪ್ರತಿ ದಿನ ನಾಲ್ಕೈದು ಶವಗಳ ದಹನಕ್ರಿಯೆ ನಡೆಯುತ್ತಿದೆ. ನಗರದಿಂದ ಅಂತ್ಯಸಂಸ್ಕಾರಕ್ಕಾಗಿ ಬರುವ ಜನರು ಸುತ್ತು ಬಳಸಿ ಮುಕ್ತಿ ಧಾಮಕ್ಕೆ ಬರಬೇಕಿದೆ ಅಂಡರ್ ಪಾಸ್ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. 

ಮೂಲ ನಿರ್ದೇಶಕರಾದ ಬಿಸಿ ಆನಂದ್ ಕುಮಾರ್ ಅವರು ಕೆಲವು ಕೆಡಿಗೇಡಿಗಳು ಇಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದಿಕ್ಕು ತಪ್ಪಿಸಿದ್ದಾರೆ ಆದ್ದರಿಂದ ಅಂಡರ್ ಪಾಸ್ ನಿರ್ಮಾಣವಾದರೆ ಸಾವಿರಾರು ಜನರಿಗೆ ಅನುಕೂಲವಾಗುತ್ತದೆ.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ವಸಂತ್ ಕುಮಾರ್, ಸತೀಶ್, ಕೆಂಪಣ್ಣ, ಸಂದೇಶ ಸೇರಿದಂತೆ ಹಲವಾರು ರೈತ ಪ್ರತಿಭಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

Related Post

Leave a Reply

Your email address will not be published. Required fields are marked *