ತುಮಕೂರಿನ ಕೆರೆಯ ಅಂಗಳದಲ್ಲಿ ಅಪರಿಚಿತ ಕಾರೊಂದು ಸುಟ್ಟ ರೀತಿಯಲ್ಲಿ ದೊರೆತಿದ್ದು, ಈ ಕಾರಿನ ಗುರುತು ಪತ್ತೆ ಹಚ್ಚಲು ಹೋದಾಗ ಸ್ಥಳೀಯರಿಗೆ ಅಚ್ಚರಿಯ ರೂಪದಲ್ಲಿ, ಮೂವರು ಮೃತದೇಹಗಳು ಕಾರಿನಲ್ಲಿ ಪತ್ತೆಯಾಗಿದೆ.
ಯಾರು ಇಲ್ಲದ ಸಮಯದಲ್ಲಿ ಈ ನಿರ್ಜನ ಪ್ರದೇಶವಾದ ಕೆರೆಯ ಅಂಗಳದಲ್ಲಿ ಈ ಘಟನೆ ನಡೆದಿದ್ದು. ತುಮಕೂರು ತಾಲೂಕಿನ ಕೋರ ಹೋಬಳಿಯ ಕುಚ್ಚಂಗಿ ಕೆರೆಯಲ್ಲಿ ಮೃತದೇಹಗಳು ಪತ್ತೆಯಾಗಿದ್ದು ಇನ್ನು ಸುಟ್ಟ ಕಾರಿನಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ.
ಇನ್ನು ಸುಟ್ಟ ಕಾರು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟದ್ದು, ಕಾರು ಸಂಪೂರ್ಣ ಸುಟ್ಟು ಹೋಗಿದ್ದು ಇಂದು ಸಾರ್ವಜನಿಕರು ಕೆರೆಗೆ ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದ್ದು.
ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಎಸ್. ಪಿ ಅಶೋಕ್ ಕೆ ವಿ ಅಡಿಷನಲ್ ಎಸ್ಪಿ ಮರಿಯಪ್ಪ, ಡಿವೈಎಸ್ಪಿ ಚಂದ್ರಶೇಖರ್ ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸ್ಥಳಕ್ಕೆ ಶ್ವಾನದಳ ಹಾಗೂ ಎಫ್ ಎಸ್ ಎಲ್ ತಂಡ ಭೇಟಿ ನೀಡಿದರು. ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದು, ಕಾರಿನಲ್ಲಿ ಪತ್ತೆಯಾಗಿರುವ ಮೃತದೇಹಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.