Breaking
Wed. Dec 25th, 2024

ಗೋ ಬ್ಯಾಕ್ ನಾರಾಯಣಸ್ವಾಮಿ, ಗೋವಿಂದ ಕಾರಜೋಳ | ಸ್ಥಳೀಯ ರಘುಚಂದನ್ ಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಕಾರ್ಯಕರ್ತರ ಆಕ್ರೋಶ..!

ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವತಿಯಿಂದ ಸ್ಥಳೀಯರಾದ ರಘುಚಂದನ್ ರವರಿಗೆ ಪಕ್ಷದವತಿಯಿಂದ ಟಿಕೆಟ್ ನಿಡುವಂತೆ ಆಗ್ರಹಿಸಿ ಅವರ ಬೆಂಬಲಿಗರು ಇಂದು ನಗರದಲ್ಲಿ ಮೆರವಣಿಗೆಯನ್ನು ನಡೆಸಿ ಬಿಜೆಪಿ ಪಕ್ಷದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ವೃತ್ತದಿಂದ ಬಿಜೆಪಿ ಕಚೇರಿಯವರೆಗೂ ಮೆರವಣಿಗೆಯನ್ನು ನಡೆಸಿದ ಅಭಿಮಾನಿಗಳು ದಾರಿಯುದ್ದಕ್ಕೂ, ಗೋ ಬ್ಯಾಕ್ ನಾರಾಯಣಸ್ವಾಮಿ, ಗೋವಿಂದ ಕಾರಜೋಳ, ಸ್ಥಳಿಯರಿಗೆ ಟಿಕೆಟ್ ನೀಡಿ, ನಮಗೆ ಸ್ಥಳಿಯರು ಬೇಕು ಹೊರಗಿನವರು ಬೇಡ, ಎಂ.ಪಿ. ನಮ್ಮ ಕಷ್ಟ ಕೇಳಬೇಕು ಅವರು ಕಷ್ಟವನ್ನು ನಾವು ಕೇಳುವುದಲ್ಲ ಎಂಬ ಘೋಷಣೆಗಳನ್ನು ಕೂಗಲಾಯಿತು.   

ಕಳೆದ ಎಲ್ಲಾ ಚುನಾವಣೆಗಳಲ್ಲಿ ಬೇರೆ ಜಿಲ್ಲೆಗಳಿಂದ ಬಂದ ಅಭ್ಯರ್ಥಿಗಳನ್ನು ನಮ್ಮ ಮನೆಯ ಮಕ್ಕಳಂತೆ ಹೋರಾಟ ಮಾಡಿ ಗೆಲ್ಲಿಸಿದ್ದೇವೆ. ಅವರಿಂದ ನಮ್ಮ ಜಿಲ್ಲೆಗೆ ಯಾವುದೇ ಕೊಡುಗೆಯೂ ಇಲ್ಲ, ನಮ್ಮ ಕಾರ್ಯಕರ್ತರಿಗೂ ಬೆಲೆಯೂ ಇಲ್ಲ. ಗೆಲ್ಲುವವರೆಗೂ ಅಷ್ಟೇ ನಮ್ಮನ್ನು ಬಳಸಿಕೊಂಡು ನಂತರ ಜಿಲ್ಲೆಯನ್ನು, ಜಿಲ್ಲೆಯ ಜನರನ್ನು ಕಡೆಗಣಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಹಾಗೂ ಕಾರ್ಯಕರ್ತರ ಬಗ್ಗೆ ಕಾಳಜಿ ಹೊಂದಿರುವ ಸ್ವಾಭಿಮಾನದ ಅಭ್ಯರ್ಥಿಯಾದ ಎಂ.ಸಿ ರಘುಚಂದನ್‍ರವರಿಗೆ ಬಿ.ಜೆ.ಪಿ ಟಿಕೆಟ್ ನೀಡಬೇಕೆಂದು ರಾಜ್ಯ ಮತ್ತು ಕೇಂದ್ರ ನಾಯಕರಿಗೆ ಮತದಾರರ ಅಭಿಪ್ರಾಯದ ಕುರಿತ ಸಂದೇಶವನ್ನು ಕಳುಹಿಸುವಂತೆ ಮನವಿ ಮಾಡಲಾಯಿತು. 

ಐತಿಹಾಸ ಹಿನ್ನಲೆಯುಳ್ಳ ಈ ಜಿಲ್ಲೆಯೂ ಸುತ್ತ ಮುತ್ತಲಿನ ಹೊಸ ಜಿಲ್ಲೆಗಳಿಗಿಂತ ತುಂಬ ಹಿಂದುಳಿದ ಜಿಲ್ಲೆಯಂತಿದೆ. ಕಾರಣ ಈ ಜಿಲ್ಲೆಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳಿಗೆ ನಿರುದ್ಯೋಗದ ಸಮಸ್ಯೆ, ನೀರಾವರಿ ಸಮಸ್ಯೆಯಿದ್ದು, ರೈತರು ಮಳೆ ಮತ್ತು ಬೋರವೆಲ್‍ಗಳನ್ನು ನಂಬಿ ಬೆಳೆ ಬೆಳೆಯುವ ಪರಿಸ್ಥಿತಿ ಇದೆ ಮಳೆಯ ಅಭಾವದ ಕಾರಣದಿಂದ ರೈತರು ಕೃಷಿಗಾಗಿ ಸಾಲ ಸೂಲ ಮಾಡಿ ಸಂಕಷ್ಟಕ್ಕೆ ಗುರಿಯಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದು ಒದಗಿದೆ. 

 ಚಿತ್ರದುರ್ಗ ಜಿಲ್ಲೆಯನ್ನು ಹಲವು ವರ್ಷಗಳಿಂದಲೂ ಹೊರಗಿನವರೂ ಬಂದು ಈ ಜಿಲ್ಲೆಯಲ್ಲಿ ಆಡಳಿತ ಮಾಡುತ್ತಿರುವುದರಿಂದ ಈ ಜಿಲ್ಲೆಯೂ ಅತ್ಯಂತ ಹಿಂದುಳಿಯಲೂ ಕಾರಣವಾಗಿದೆ. ಆದ್ದರಿಂದ ನಮ್ಮ ಜಿಲ್ಲೆಯ ಸಮಸ್ಯೆಯನ್ನು ಅರ್ಥಮಾಡಿಕೊಂಡು ಆ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಶ್ರಮಪಡುವ ಸ್ಥಳೀಯ ನಾಯಕರಿಗೆ ಟಿಕೇಟ್ ಕೊಟ್ಟು ಸಹಕರಿಸಿದ್ದೆ ಆದರೆ ನಮ್ಮ ಜಿಲ್ಲೆಯೂ ಇತರೆ ಜಿಲ್ಲೆಗಳಿಗಿಂತ ಹೆಚ್ಚಿನ ಅಭಿವೃದ್ಧಿ ಹೊಂದುವುದರಲ್ಲಿ ಯಾವುದೇ ಸಂದೇಹವಿರುವುದಿಲ್ಲ.

ನಮ್ಮ ಕೂಗು ನಮ್ಮ ಜಿಲ್ಲೆಯ ಉಳಿವಿಗಾಗಿ ಸ್ವಾಭಿಮಾನಕ್ಕಾಗಿ ಎಷ್ಟು ಅಂತ ದುಡಿಯೋಣ. ನಮ್ಮವರಿಗಾಗಿ ಸ್ಪಂದಿಸೋಣ. ಸ್ಥಳೀಯರಾದ ಹಾಗೂ ಯುವ ಮುಖಂಡರಾದ ಎಂ.ಸಿ ರಘುಚಂದನ್‍ರವರಿಗೆ ಪಕ್ಷದಿಂದ ಟಿಕೇಟ್ ನೀಡಿ ನಾವು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಕಿಟಕಿ ಗಾಜು ಪುಡಿ ಪುಡಿ : ರಘುಚಂದನ್ ರವರಿಗೆ ಬಿಜೆಪಿ ಪಕ್ಷದ ಟೀಕೇಟ್ ನೀಡುವಂತೆ ಆಗ್ರಹಿಸುವ ಸಮಯದಲ್ಲಿ ಯಾರೂ ಕಿಡಿಗೇಡಿಗಳು ಬಿಜೆಪಿ ಪಕ್ಷದ ಕಚೇರಿಯ ಕಿಟಕಿಯ ಗಾಜನ್ನು ಹೊಡೆದಿದ್ದಾರೆ, ಇದರಿಂದ ಕಿಟಕಿಯ ಗಾಜು ಪುಡಿ ಪುಡಿಯಾಗಿದೆ. ಬಿಜೆಪಿ ಪಕ್ಷದ ಕಚೇರಿಗೆ ನುಗ್ಗಲು ಯತ್ನಿಸಿದ ಅಭಿಮಾನಿಗಳನ್ನು ಪೋಲಿಸರ ತಡೆಯವುದರ ಮೂಲಕ ಮೇಲಕ್ಕೆ ಕಚೇರಿಗೆ ಹೋಗದಂತೆ ತಡೆದಿದ್ದಾರೆ, ಆದರೂ ಸಹಾ ಆದಾವ ಮಾಯೆದಲ್ಲಿಯೂ ಯಾರು ಕಿಟಕಿಯ ಗಾಜನ್ನು ಒಡೆದು ಪುಡಿ ಪುಡಿ ಮಾಡಿದ್ದಾರೆ.  

Related Post

Leave a Reply

Your email address will not be published. Required fields are marked *