Breaking
Mon. Dec 23rd, 2024

ಮನೆಯಲ್ಲೇ ತಯಾರಿಸಿ ರುಚಿಕರವಾದ ಮಾವಿನ ಹಣ್ಣಿನ ಜ್ಯೂಸ್…!

ಬೇಸಿಗೆ ಹಣ್ಣುಗಳ ರಾಜ ಮಾವು ತನ್ನ ರುಚಿಯನ್ನು ತೋರಿಸುವ ಕಾಲ. ಇನ್ನು ಮಾವಿನ ಹಣ್ಣಿನ ರುಚಿ ಮಾತ್ರ ಸವಿದರೆ ಸಾಕೆ? ಅದರ ಜೊತೆಗೆ ಆ ಹಣ್ಣಿನ ರಸವನ್ನು ಸೇವಿಸಿದಾಗ ತಾನೆ ಅದರ ರುಚಿ ನಮ್ಮ ರುಚಿ ಗ್ರಂಥಿಗಳಿಗೆ ಆಹ್ಲಾದವನ್ನುಂಟು ಮಾಡುವುದು.

  ಮಾವಿನ ಹಣ್ಣಿನ ರಸವನ್ನು ಸೇವಿಸಬೇಕೆಂದು ಸಂಸ್ಕರಿಸಿದ ರಸ ಅಥವಾ ಜ್ಯೂಸ್ ಕಾರ್ನರ್‌ಗಳಲ್ಲಿ ಮಾವಿನ ಜ್ಯೂಸ್ ಸೇವಿಸುವ ಬದಲು, ನಿಮ್ಮ ಮನೆಯಲ್ಲಿಯೇ ಅದನ್ನು ತಯಾರಿಸಿಕೊಳ್ಳಿ. ಈ ಋತುವಿನಲ್ಲಿ ಮಾವಿನ ಹಣ್ಣಿನ ರಸವನ್ನು ಮನೆಯಲ್ಲಿಯೇ ಮಾಡುವುದನ್ನು ನಾವು ಇಂದು ನಿಮಗೆ ತಿಳಿಸುತ್ತಿದ್ದೇವೆ.

ಈ ಪಾಕವಿಧಾನ ತುಂಬಾ ಸರಳವಾಗಿದೆ. ಅದನ್ನು ಹೊಂದಿಸಲು ಕೆಲವೇ ಪದಾರ್ಥಗಳು ಬೇಕಾಗುತ್ತವೆ.  ಅಗತ್ಯವಾದ ಪದಾರ್ಥಗಳು

  • ನಾಲ್ಕು ಜನ ಸೇವಿಸಬಹುದು
  • 2 ಹಣ್ಣಾದ ಮಾವಿನಹಣ್ಣುಗಳು
  • 1 ಕಪ್ ನೀರು
  • 2 ಟೀ.ಚಮಚ ಸಕ್ಕರೆ
  • ಒಂದಿಷ್ಟು ಐಸ್ ಕ್ಯೂಬ್‍ಗಳು 

ಮಾವು : ತಾಜಾ, ಮಾಗಿದ ಮತ್ತು ಸಿಹಿಯಾದ ಮಾವನ್ನು ಬಳಸಿ. ಸಕ್ಕರೆ : ನಿಮ್ಮ ಹಣ್ಣಿನ ಮಾಧುರ್ಯವನ್ನು ಅವಲಂಬಿಸಿ ಸಕ್ಕರೆಯ ಪ್ರಮಾಣವನ್ನು ಹೊಂದಿಸಿ. ನೀರು : ಈ ಜ್ಯೂಸ್ ಮಾಡಲು ತಣ್ಣಗಾದ ನೀರನ್ನು ಬಳಸಿ.

ಮಾವಿನ ಜ್ಯೂಸ್ ಮಾಡುವುದು ಹೇಗೆ ? (ಹಂತವಾಗಿ) ಮಾಡುವ ವಿಧಾನ

  • ಮಾವಿನ  ಹಣ್ಣುಗಳ ಸಿಪ್ಪೆಯನ್ನು ತೆಗೆಯಿರಿ.
  • ಇದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ.
  • ಮಾವು, ಐಸ್, ನೀರು ಮತ್ತು ಸಕ್ಕರೆ ಎಲ್ಲವನ್ನೂ ಮಿಕ್ಸಿನಲ್ಲಿ ಹಾಕಿ. ಚೆನ್ನಾಗಿ ರುಬ್ಬಿಕೊಳ್ಳಿ.
  • ನಂತರ ಇದನ್ನು ಶೋಧಿಸಿಕೊಳ್ಳಿ.
  • ಉಳಿದ ಸಿಪ್ಪೆಗಳನ್ನು ಮತ್ತು ನಾರನ್ನು ತೆಗೆದು ದೂರವಿಡಿ.
  • ಈ ಜ್ಯೂಸನ್ನು ಗ್ಲಾಸುಗಳಲ್ಲಿ, ಅಲಂಕಾರಕ್ಕಾಗಿ ಒಂದು ತುಂಡು ಮಾವಿನ ಹಣ್ಣನ್ನು ಸಿಕ್ಕಿಸಿ ಸರ್ವ್ ಮಾಡಿ. 

ಸಲಹೆಗಳು : ಮಾವಿನಹಣ್ಣುಗಳಲ್ಲಿ ಉತ್ತಮವಾದ ಸ್ವಾದದ ಜೊತೆಗೆ, ಒಳ್ಳೆಯ ಸುವಾಸನೆ ಸಹ ಇರುತ್ತದೆ. ಮಾವಿನ ಹಣ್ಣಿನ ಜೊತೆಗೆ ಜಿಪುಣತನ ಮಾಡಬೇಡಿ. ಹೆಚ್ಚು ಮಾವಿನ ಹಣ್ಣು ಬಳಸಿದಷ್ಟು ನೀರನ್ನು ಹೆಚ್ಚು ಮಾಡಿ.

  • ಜ್ಯೂಸ್ ಮಾಡಲು ರುಚಿಯಾದ ಮತ್ತು ಕಡಿಮೆ ನಾರಿನಂಶವಿರುವ ಮಾವಿನಹಣ್ಣುಗಳನ್ನು ಬಳಸಿ.
  • ನೀರು ಬೆರೆಸಬೇಕೆಂದು ಹೆಚ್ಚು ಪ್ರಮಾಣದ ನೀರನ್ನು ಬೆರೆಸಬೇಡಿ. ಅದು ಮಾವಿನ ಹಣ್ಣಿನ ರುಚಿಯನ್ನು ಹಾಳು ಮಾಡಿ ಬಿಡುತ್ತದೆ.

Related Post

Leave a Reply

Your email address will not be published. Required fields are marked *