ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸೋಕೆ ಅವಕಾಶವನ್ನು ಕಲ್ಪಿಸಿದ್ದಾರೆ ಕೆವಿಎನ್ ಪ್ರೊಡಕ್ಷನ್. ಈ ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಟಾಕ್ಸಿಕ್ ಸಿನಿಮಾದಲ್ಲಿ ನಟಿಸಲು ಯಾರಿಗೆಲ್ಲ ಅವಕಾಶವಿದೆ ಎನ್ನುವುದನ್ನು ಅವರು ಬರೆದುಕೊಂಡಿದ್ದಾರೆ. ಹಾಗಾಗಿ ಅವರ ರೂಲ್ಸ್ ಫಾಲೋ ಮಾಡಿ, ಯಾರು ಬೇಕಾದರೂ ಆಡಿಷನ್ ನಲ್ಲಿ ಭಾಗಿಯಾಗಬಹುದು.
ಚಿತ್ರದ ಶೂಟಿಂಗ್ ಇನ್ನೂ ನಿಯಮಿತವಾಗಿ ಆರಂಭವೇ ಆಗಿಲ್ಲ. ಆಗಲೇ ಚಿತ್ರದ ಬಗ್ಗೆ ಸಾಕಷ್ಟು ವಿಷಯಗಳು ಆಚೆ ಬರುತ್ತಿವೆ. ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ನಟಿಸ್ತಾರಾ? ಇಂಥದ್ದೊಂದು ಪ್ರಶ್ನೆ ಹಲವು ತಿಂಗಳ ಹಿಂದೆಯೇ ಶುರುವಾಗಿತ್ತು. ಅದಕ್ಕೀಗ ಉತ್ತರ ಸಿಕ್ಕಂತೆ ಕಾಣುತ್ತಿದೆ. ಬಿಟೌನ್ ನಲ್ಲಿ ಸುದ್ದಿ ಆಗಿರುವ ಪ್ರಕಾರ, ಸ್ವತಃ ಕರೀನಾ ಅವರೇ ಹೇಳಿಕೊಂಡಂತೆ ಬಾಲಿವುಡ್ ಚಿತ್ರದಲ್ಲಿ ಕರೀನಾ ನಟಿಸುತ್ತಿದ್ದಾರಂತೆ. ಆದರೆ, ಆ ಸಿನಿಮಾ ಯಾವುದನ್ನು ಎನ್ನುವುದನ್ನು ಸದ್ಯಕ್ಕೆ ಹೇಳಲಾರೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಈ ಹಿಂದೆಯೇ ಸಂದರ್ಶನವೊಂದರಲ್ಲಿ ಕರೀನಾ ಅವರು, ಯಶ್ ಜೊತೆ ಮಾತ್ರ ನಟಿಸುತ್ತೇನೆ. ಪ್ರಭಾಸ್, ಅಲ್ಲು ನಕೋ ಬಾಬಾ ಎಂದಿದ್ದರು. ಯಶ್ ಜೊತೆ ನಟಿಸೋದು ಹೆವ್ವಿ ಇಷ್ಟ. ಅದೇ ಲೈಫ್ ಟೈಮ್ ಅಚೀವ್‌ಮೆಂಟು ಎಂದಿದ್ದರು. ಈ ಮೂಲಕ ತಾವು ಯಶ್ ಜೊತೆ ನಟಿಸುವ ಉತ್ಸಾಹವನ್ನೂ ತೋರಿಸಿದ್ದರು. ಆ ಕನಸು ನನಸಾದಂತೆ ಕಾಣುತ್ತಿದೆ.
ಈ ನಡುವೆ ಯಶ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಇದೆ. ಟಾಕ್ಸಿಕ್ ಸಿನಿಮಾವನ್ನು ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದಾರೆ ಎನ್ನುವ ವಿಷಯ ಬಿಟ್ಟರೆ, ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದ ಒಂದೇ ಒಂದು ಫೋಟೋ ಕೂಡ ಆಚೆ ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಯಶ್ ಮತ್ತು ಗೀತು ಅವರ ಫೋಟೋ ಸಿಕ್ಕಿದೆ. ಗೋವಾದಲ್ಲಿ ಸಿನಿಮಾದ ಶೂಟಿಂಗ್ ನಡೆದಿದ್ದು, ಆ ಫೋಟೋ ಅದು ಎನ್ನಲಾಗುತ್ತಿದೆ.
ಟೆಂಪಲ್ ರನ್ ಮುಗಿಸಿಕೊಂಡು ಸದ್ಯ ಯಶ್ ಗೋವಾದಲ್ಲಿ ಬೀಡು ಬಿಟ್ಟಿದ್ದಾರೆ. ಗೋವಾದ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದರು. ಸದ್ಯ ಅವರು ಗೋವಾನಲ್ಲಿ ಬೀಡು ಬಿಟ್ಟಿರೋದು ಟಾಕ್ಸಿಕ್ ಸಿನಿಮಾದ ಶೂಟಿಂಗ್ ಗಾಗಿ ಎನ್ನುವ ವಿಚಾರ ಹರಿದಾಡುತ್ತಿತ್ತು. ಅದು ಈಗ ನಿಜವಾಗಿದೆ. ಶೂಟಿಂಗ್ ಸಮಯದ್ದು ಎನ್ನಲಾದ ಫೋಟೋ ವೈರಲ್ ಆಗಿದೆ.
ಟಾಕ್ಸಿಕ್ ಸಿನಿಮಾದ ಬಗ್ಗೆ ಯಾವುದೇ ಅಪ್ ಡೇಟ್ ನೀಡದ ಯಶ್ ಮೊನ್ನೆಯಷ್ಟೇ ಈ ಕುರಿತಂತೆ ಮಾತನಾಡಿದ್ದರು. ತಮ್ಮ 19ನೇ ಸಿನಿಮಾದ ಪ್ರಾಜೆಕ್ಟ್ ಎಲ್ಲಿಗೆ ಬಂತು? ಎಂಬುದರ ಬಗ್ಗೆ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದರು. ಡೈರೆಕ್ಟರ್ ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಕೆವಿಎನ್ ಸಂಸ್ಥೆ ಜೊತೆ ಯಶ್ ಕೈಜೋಡಿಸಿದ್ದಾರೆ.