ಮಾಗಡಿ : ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ಮತದಾರರು ಸಹಕರಿಸಬೇಕು. ಚುನಾವಣಾ ಆಯೋಗದ ಆದೇಶಗಳನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಶಾಂತಿ ಸೌಹಾರ್ಧತೆಯಿಂದ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಲೋಕಸಭಾ ಚುನಾವಣೆಯನ್ನು ಒಂದು ಹಬ್ಬದಂತೆ ಶಾಂತಿಯುತ ಮತದಾನದ ಮೂಲಕ ಸಂಭ್ರಮಿಸಬೇಕು. ಮಾದರಿ ನೀತಿ ಸಂಹಿತೆಯನ್ನು ಎಲ್ಲರೂ ಕಡ್ಡಾಯವಾಗಿ ಅನುಸರಿಸಬೇಕು.
85 ವರ್ಷದ ಮೇಲ್ಪಟ್ಟವರು ಮನೆಯಲ್ಲಿಯೇ ಮತದಾನ ಮಾಡಲು ಅನುಕೂಲ ಮಾಡಿಕೊಡುತ್ತೇವೆ. ಬ್ಯಾನರ್ ಬಂಟಿಂಗ್ಸ್ ಹಾಕುವವರ ವಿರುದ್ದಕಾನೂನು ಕ್ರಮ ಕೈಗೊಳ್ಳಲಾಗುವುದು. ಧ್ವನಿವರ್ಧಕ ಬಳಸುವವರು ಕಡಿಮೆ ಧ್ವನಿಯಲ್ಲಿ ಅನುಮತಿ ಪಡೆದು ಹಾಕಿಕೊಳ್ಳಬೇಕು ಎಂದರು. ಡಿವೈಎಸ್‌ಪಿ ಪ್ರವೀಣ್ ಮಾತನಾಡಿ ಕಾನೂನಿಗೆ ಗೌರವ ಕೊಡುವುದು ಎಲ್ಲಾ ನಾಗರೀಕರ ಕರ್ತವ್ಯವಾಗಿದೆ.
ಅಕ್ರಮ ಚಟುವಟಿಕೆ, ಕಾನೂನು ಉಲ್ಲಂಘನೆಗಳು ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೆ ನಮ್ಮ ಗಮನಕ್ಕೆ ತರಬೇಕು. ಅಕ್ರಮ ತಡೆಯಲು ಸರ್ವರ ಸಹಕಾರ ಅಗತ್ಯವಾಗಿದೆ ಎಂದರು. ಸರ್ಕಲ್ ಇನ್ಸ್ ಪೆಕ್ಟರ್ ಜಿ.ವೈ.ಗಿರಿರಾಜ್, ಶಿರಸ್ತೇದಾರ್ ರಶ್ಮಿ ಶ್ರೀ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇದ್ದರು.