ಸಮಂತಾ : ಸೂಕ್ಷ್ಮ ಮನಸ್ಸಿನ ‘ಕ್ಯೂಟ್ ಲಿಟಲ್ ಗರ್ಲ್’ ಆಗಿದ್ದ ಸಮಂತಾ ಈಗ ವಾರಿಯರ್ನಂತಾಗಿದ್ದಾರೆ. ‘ರಾಣಿಯಾಗಿ ಸೋತಿದ್ದೀನಿ, ಈಗ ನಾನು ಡ್ರ್ಯಾಗನ್’ ಎಂದು ಅವರೇ ಹೇಳಿಕೊಂಡಿದ್ದಾರೆ. ನಟಿ ಸಮಂತಾ ಹಲವು ಕೌಟುಂಬಿಕ ಸಮಸ್ಯೆಗಳು, ಸಾಮಾಜಿಕ ನಿಂದನೆ, ಆರೋಗ್ಯ ಸಮಸ್ಯೆಗಳನ್ನು ಎದುರಿಸಿ ಈಗ ಮರಳಿ ಎದ್ದು ನಿಂತಿದ್ದಾರೆ.
10 ವರ್ಷ ಪ್ರೀತಿಯಲ್ಲಿದ್ದ ನಾಗ ಚೈತನ್ಯ ಹಾಗೂ ಸಮಂತಾ ಜೋಡಿ ವಿಚ್ಛೇದನ ಪಡೆದು ದೂರಾದರು. ಅದರ ಬೆನ್ನಲ್ಲೆ ಸಮಂತಾಗೆ ಸತತ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು. ವಿಚ್ಛೇದನದ ಸಮಯದಲ್ಲಿ ಸಮಂತಾ ತೀವ್ರ ಸಾಮಾಜಿಕ ನಿಂದನೆಯನ್ನು ಎದುರಿಸಬೇಕಾಯ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಮಂತಾರನ್ನು ತೀವ್ರವಾಗಿ ನಿಂದಿಸಲಾಗಿತ್ತು.
ಅದನ್ನೆಲ್ಲ ದಿಟ್ಟವಾಗಿ ಎದುರಿಸಿ ಸಮಂತಾ ಮತ್ತೆ ಎದ್ದು ನಿಂತಿದ್ದಾರೆ. ಈ ಹಿಂದಿನ ‘ಕ್ಯೂಟ್ ಲಿಟಲ್ ಗರ್ಲ್’ ಅಲ್ಲ ಸಮಂತಾ. ಈಗ ಆಕೆ ಹೋರಾಟಗಾರ್ತಿ. ಇದೀಗ ತಮ್ಮ ಕೆಲವು ಹಾಟ್ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಸಮಂತಾ. ‘ರಾಣಿಯಾಗಿ ನಾನು ಸೋತಿದ್ದೇನೆ, ಈಗ ನಾನು ಡ್ರ್ಯಾಗನ್’ ಎಂದು ಬರೆದುಕೊಂಡಿದ್ದಾರೆ.
ಸಮಂತಾ ನಿಜಕ್ಕೂ ಡ್ರ್ಯಾಗನ್, ಸಮಸ್ಯೆಗಳಿಗೆ ಅಳುತ್ತಾ ಕೂರುತ್ತಿದ್ದ ಹುಡುಗಿಯಾಗಿದ್ದ ಸಮಂತಾ ಈಗ ದಿಟ್ಟತನದಿಂದ ಎದುರಿಸುವುದು ಕಲಿತಿದ್ದಾರೆ. ದೈಹಿಕ ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸಿದ್ದಾರೆ. ಪುರುಷರು ನಾಚುವಂತೆ ವರ್ಕೌಟ್ ಸಹ ಮಾಡುತ್ತಾರೆ. ಆರೋಗ್ಯದ ಕಾರಣಕ್ಕೆ ಚಿತ್ರರಂಗದಿಂದ ಬಿಡುವು ಪಡೆದಿದ್ದ ಸಮಂತಾ ಇದೀಗ ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ರೆಡಿಯಾಗಿದ್ದಾರೆ. ದೊಡ್ಡ ಸಿನಿಮಾ ಮೂಲಕ ಕಮ್ಬ್ಯಾಕ್ ಮಾಡಲಿದ್ದಾರೆ ಸ್ಯಾಮ್.