Breaking
Wed. Dec 25th, 2024

ಬಿಸಿ ಬಿಸಿ ಬೇಸಿಗೆಯಲ್ಲಿ ನಟಿ ಸಾನ್ಯಾ ಐಯ್ಯರ್ ಅವರು ಜಲಪಾದಲ್ಲಿ ಫೋಟೋಸ್…!

ಬಿಗ್ಬಾಸ್ ಚೆಲುವೆ ಸಾನ್ಯಾ ಐಯ್ಯರ್ ಅವರು ಬಿಸಿಲ ಬೇಗೆಯನ್ನು ಕಳೆಯಲು ಕೊಡಗಿಗೆ ಭೇಟಿ ಕೊಟ್ಟಿದ್ದಾರೆ. ಕೊಡಗಿನ ತಂಪಾದ ಜಲಪಾತದ ಬಳಿ ಕುಳಿತು ನೀರಿನಲ್ಲಿ ಆಡಿದ್ದಾರೆ. ಸೊಗಸಾದ ಪ್ರಕೃತಿಯ ಸೌಂದರ್ಯವನ್ನು ಎಂಜಾಯ್ ಮಾಡಿ ಜಲಪಾತದ ಸೌಂದರ್ಯ ಸವಿದಿದ್ದಾರೆ. ಅವರ ಫೋಟೋಗಳು ಇಲ್ಲಿವೆ ನೋಡಿ. 

ನಟಿ ಅರಶಿನ ಬಣ್ಣದ ಶರ್ಟ್ ಧರಿಸಿ ಮೇಲಿನ ಬಟನ್ ಓಪನ್ ಬಿಟ್ಟು ಗಾಗಲ್ಸ್ ಧರಿಸಿಕೊಂಡು ಸೂರ್ಯನನ್ನು ನೋಡಿ ಪೋಸ್ ಕೊಟ್ಟಿದ್ದಾರೆ. ಅವರ ಫೋಟೋಗಳಿಗೆ 5 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಅವರ ಫೋಟೋ ಅವರ ಅಭಿಮಾನಿಗಳಿಗೂ ತುಂಬಾ ಇಷ್ಟವಾಗಿದೆ. 

ಜಲಪಾತದ ಬುಡದಲ್ಲಿ ಕಲ್ಲೊಂದರ ಮೇಲೆ ಕುಳಿತ ಸಾನ್ಯಾ ಐಯ್ಯರ್ ನೀರಿನಲ್ಲಿ ಆಟ ಆಡಿದ್ದಾರೆ. ಚಿಕ್ಕ ಮಕ್ಕಳಂತೆ ನೀರಿನಲ್ಲಿ ಕಾಲುಬಿಟ್ಟು ಕುಳಿತು ಚಿಲ್ ಮಾಡಿದ್ದಾರೆ. ಫೋಟೋದಲ್ಲಿ ನಟಿ ಫುಲ್ ಹ್ಯಾಪಿಯಾಗಿರುವುದನ್ನು ಕಾಣಬಹುದು.

ಹಸಿರು ಪ್ರಕೃತಿಯ ಮಧ್ಯೆ ನಟ ಮಾಡರ್ನ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡಿದ್ದು ಅವರ ಕ್ಯಾಂಡಿಡ್ ಫೋಟೋಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅವರ ಫೋಟೋಗಳನ್ನು ಫ್ಯಾನ್ಸ್ ಈಗ ಶೇರ್ ಮಾಡುತ್ತಿದ್ದಾರೆ. ಫೋಟೋದಲ್ಲಿ ನಟಿಯ ಮಂಡಿಗೆ ಗಾಯವಾಗಿರುವುದು ಕೂಡಾ ಕಂಡುಬಂದಿದೆ.

ಇದನ್ನು ನೋಡಿದ ನೆಟ್ಟಿಗರು ತಮಾಷೆ ಮಾಡಿದ್ದಾರೆ. ಇದು ಕ್ಯಾಂಪಿಂಗ್ ಸೈಡ್ ಎಫೆಕ್ಟ್ ಎಂದು ಕಾಲೆಳೆದಿದ್ದಾರೆ. ನಟಿಯ ಮೊಣಕಾಲಿನಲ್ಲಿ ಗಾಯವಾಗಿರುವುದನ್ನು ಕಾಣಬಹುದು. ಇನ್ನೂ ಅವರ ಫ್ಯಾನ್ಸ್ ಲುಕ್ ಸೂಪರ್ ಎಂದು ಹೊಗಳಿ ಕಮೆಂಟ್ ಮಾಡಿದ್ದಾರೆ.

ಬಿಸಿಲಿಗೆ ಕೂಲಿಂಗ್ ಗ್ಲಾಸ್ ತೊಟ್ಟ ಪುಟ್ಟ ಗೌರಿ ಈಗ ಸಿಕ್ಕಾಪಟ್ಟೆ ಬೋಲ್ಡ್ ಆಗಿದ್ದಾರೆ. ಕೊಡಗಿನಲ್ಲಿ ವೆಕೇಷನ್ ಎಂಜಾಯ್ ಮಾಡ್ತಿರುವ ಸಾನ್ಯಾ, ಪೋಟೋ ಹಾಗೂ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ ನಟಿಯ ಫೋಟೋಗೆ ಲೈಕ್ಗಳ ಸುರಿಮಳೆ ಆಗಿದೆ. ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಸಿನಿಮಾದಲ್ಲಿ ಸಾನ್ಯಾ ಅಯ್ಯರ್ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಇಂಡಸ್ಟ್ರಿಗೆ ಎಂಟ್ರಿ ಕೊಡೊಕೆ ಸಜ್ಜಾದ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ಗೆ ಸಾನ್ಯಾ ಜೋಡಿಯಾಗಿದ್ದಾರೆ. 

ತಮಿಳು ನಟ ಅಜಿತ್ ಅವರನ್ನು ನಟಿ ಸಾನ್ಯಾ ಅಯ್ಯರ್ ಭೇಟಿ ಆಗಿದ್ದಾರೆ. ನಟ ಅಜಿತ್ ಜೊತೆ ತೆಗೆದ ಫೋಟೋವನ್ನು ಸಾನ್ಯಾ ಅಯ್ಯರ್ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಜಿತ್ ಜೊತೆಗಿನ ಫೋಟೋ ಹಂಚಿಕೊಂಡ ಸಾನ್ಯಾ ನಟನನ್ನು ಕೊಂಡಾಡಿದ್ದಾರೆ. ಅಜಿತ್ ಜೊತೆ ಸಾನ್ಯಾ ಅಯ್ಯರ್ ನೋಡಿ ಫ್ಯಾನ್ಸ್ ಕೂಡ ಕನ್ಫೂಸ್ ಆಗಿದ್ದಾರೆ. ಪುಟ್ಟಗೌರಿ ಕಾಲಿವುಡ್ ಗೆ ಹಾರಿಬಿಟ್ರಾ ಎಂದು ಕಮೆಂಟ್ ಮಾಡಿದ್ದಾರೆ. ಅಜಿತ್ ಜೊತೆ ಸಾನ್ಯಾ ಸಿನಿಮಾ ಮಾಡ್ತಿದ್ದಾರಾ ಎಂದು ಫ್ಯಾನ್ಸ್ ಕೇಳ್ತಿದ್ದಾರೆ.  ಅಜಿತ್ ಅವರನ್ನು ಭೇಟಿಯಾದ ಬಗ್ಗೆ ನಟಿ ಮಾತನಾಡಿದ್ದಾರೆ.

ಅಜಿತ್ ನನ್ನ ಫೇವರಿಟ್ ಹೀರೋ ನೋಡಿ. ಒಂದಿಲ್ಲ ಒಂದು ದಿನ ಅಜಿತ್ ಜೊತೆಗೆ ನಟಿಸುತ್ತೇನೆ. ಆ ಒಂದು ಆಸೆ ಇದ್ದೇ ಇದೆ. ಅಜಿತ್ ಅವರ ಸಿನಿಮಾಗಳನ್ನ ನೋಡಿದ್ದೇನೆ. ಅವುಗಳಲ್ಲಿ ನನ್ನ ಫೇವರಿಟ್ ಕೂಡ ಇದೆ. ಹಾಗೆ ನಾನು ಇಷ್ಟಪಡೋ ಅಜಿತ್ ಅವರ ಚಿತ್ರಗಳಲ್ಲಿ ನನ್ನ ಫೇವರಿಟ್‌ ‘Kandukondain Kandukondain’ ಅಂತಲೇ ಇದನ್ನ ನೋಡಿ ತುಂಬಾನೆ ಖುಷಿ ಆಗಿದ್ದೇನೆ ಅಂತಲೇ ಸಾನ್ಯ ಅಯ್ಯರ್ ಹೇಳಿಕೊಂಡಿದ್ದಾರೆ. 2000 ರಲ್ಲಿ ಬಂದ ಈ ಚಿತ್ರದಲ್ಲಿ ಮಮ್ಮೂಟಿ ಅಭಿನಯಿಸಿದ್ದಾರೆ. ಟಬು ಕೂಡ ಲೀಡ್ ಅಲ್ಲಿಯೇ ಇದ್ದರೆ. ರಾಜೀವ್ ಮೆನನ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ.

 

 

 

 

Related Post

Leave a Reply

Your email address will not be published. Required fields are marked *