ಚಿತ್ರದುರ್ಗ :ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ 2014 ರಲ್ಲಿ ನಡೆದ ಸಂಸತ್ತಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸಿದಾಗ ಚಿತ್ರದುರ್ಗ ಕ್ಷೇತ್ರದ ಜನ ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿ ಲೋಕಸಭೆಗೆ ಕಳಿಸಿಕೊಟ್ಟರು.
ಮುಂದಿನ ತಿಂಗಳು ನಡೆಯಲಿರುವ ಸಂಸತ್ತಿನ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಬಿ.ಎನ್.ಚಂದ್ರಪ್ಪ ಸೋಮವಾರ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದಾಗ ಬೃಹದಾಕಾರವಾದ ಹೂಮಾಲೆ ಹಾಕಿ ಕಾರ್ಯಕ್ರಮಕ್ಕೆ ಹಾಗೂ ಕಾರ್ಯಕರ್ತರು ಪ್ರೀತಿ ಅಭಿಮಾನ ತೋರಿಸಿ ಬರಮಾಡಿಕೊಂಡರು.
ಕನಕಾಂಬರ, ಸುಗಂಧರಾಜ, ಹಸಿರುಪತ್ರೆ ಹಾಗೂ ಗುಲಾಬಿ ಹೂಗಳಿಂದ ಕೂಡಿದ್ದ ಬೃಹಧಾಕಾರವಾದ ಹಾರವನ್ನು ಜೆ.ಸಿ.ಬಿ. ಸಹಾಯದಿಂದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರಿಗೆ ಸಮರ್ಪಿಸಲಾಯಿತು. ಜೆ.ಸಿ.ಬಿ.ಯಿಂದ ಮತ್ತೊಂದು ಕಾರ್ಯಕರ್ತರು ಚಂದ್ರಪ್ಪನವರ ಮೇಲೆ ಹೂಮಳೆ ಸುರಿಸಿದರು.
ಕಾಂಗ್ರೆಸ್ ಕಚೇರಿ ಮೇಲೆ ನಿಂತಿದ್ದ ಕಾರ್ಯಕರ್ತರು ಹೂವಿನ ರಾಶಿ ಎರಚಿ ಸಂಭ್ರಮಿಸಿದರು, ಡೊಳ್ಳು, ತಮಟೆ ಸದ್ದಿಗೆ ಕಾರ್ಯಕರ್ತರು ಕೇಕೆ ಸಿಳ್ಳೆ ಮಾಡುತ್ತಿರುವುದನ್ನು ನೋಡಿದರೆ ಚುನಾವಣೆಯಲ್ಲಿ ಗೆದ್ದು ಬಿಟ್ಟಿದ್ದಾರೇನೋ ಎಂಬ ವಾತಾವರಣ ಕಾಂಗ್ರೆಸ್ ಕಚೇರಿ ಎದುರು ನಿರ್ಮಾಣವಾಯಿತು.
ಪಕ್ಷದ ಮುಖ್ಯಸ್ಥ ಹಾಗೂ ಕಾರ್ಯಕರ್ತರೊಡನೆ ಜೆ.ಸಿ.ಬಿ. ಮೇಲೆ ನಿಂತಿದ್ದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಕಾರ್ಯಕರ್ತರು, ಸಾರ್ವಜನಿಕರಿಗೆ ಕೈಮುಗಿದು ಕೃತಜ್ಞತೆ ಸಲ್ಲಿಸಿದರು.