ಚಿತ್ರದುರ್ಗ, ಮಾರ್ಚ್.25 : ನಗರ ಪೊಲೀಸ್ ರಾಣೆ ಆವರಣದಲ್ಲಿರುವ ಕಣಿವೆ ಮಾರಮ್ಮನ ಜಾತ್ರೆ ಮಾ.26 ರ ಇಂದಿನಿಂದ ಆರಂಭಗೊಂಡು 29 ರವರೆಗೆ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ದೇವಸ್ಥಾನದ ಮುಂಭಾಗ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
26 ರಂದು ಸಂಜೆ 6-30 ಕ್ಕೆ ಮಧುವಣಗಿತ್ತಿ ಶಾಸ್ತ್ರ, 28 ರಂದು ಬೆಳಿಗ್ಗೆ 11 ಕ್ಕೆ ಹೂವಿನ ಅಲಂಕಾರ, ಸಕಲ ವಾದ್ಯಗಳೊಂದಿಗೆ ನಗರದ ರಾಜಬೀದಿಗಳಲ್ಲಿ ಅಮ್ಮನ ಮೆರವಣಿಗೆ. 29 ರಂದು ಜಾತ್ರೆಯ ಅಂಗವಾಗಿ ವಿಶೇಷ ಪೂಜೆ, ಬೆಳಿಗ್ಗೆ 11 ಕ್ಕೆ ಅನ್ನಸಂತರ್ಪಣೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಣಿವೆ ಮಾರಮ್ಮನ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಭಕ್ತ ಮಂಡಳಿ ಕೋರಿದೆ.
ಜಾತ್ರಾ ಮಹೋತ್ಸವಕ್ಕೆ ಅಕ್ಕಿ, ಬೇಳೆ, ಬೆಲ್ಲ, ಎಣ್ಣೆ, ಧವಸ ಧಾನ್ಯಗಳನ್ನು ಕೊಡಲಿಚ್ಚಿಸುವ ಭಕ್ತಾಧಿಗಳು ಮಂಗಳವಾರದೊಳಗೆ ದೇವಸ್ಥಾನದ ಸನ್ನಿಧಿಯಲ್ಲಿ ಸಮರ್ಪಿಸಿ ರಸೀದಿಯನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಮೊ : 8951555830, 9448728083, 9480803146 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.