ಪ್ರತಿ ವರ್ಷ ರಂಜಾನ್ ಹಬ್ಬ ಬಂದ್ರೆ ಸಾಕು ಸಿಲಿಕಾನ್ ಸಿಟಿಯ ರೆಸೆಲ್ ಮಾರ್ಕೆಟ್ ನಲ್ಲಿ ಫುಡ್ ಫೆಸ್ಟ್ ಶುರುವಾಗುತ್ತದೆ. ಈ ವರ್ಷವು ರೆಸೆಲ್ ಅದ್ದೂರಿಯಾಗಿ ಫುಡ್ ಫೆಸ್ಟ್ ನಡೆಯುತ್ತಿದೆ, ಫೆಸ್ಟ್ ನಲ್ಲಿ 50ಕ್ಕೂ ಹೆಚ್ಚು ಬಗೆಯ ವೈರೈಟಿ ವೆರೈಟಿ ಖಾದ್ಯಗಳು ಜನರನ್ನು ಸೆಳೆಯುತ್ತಿವೆ.
ರಂಜಾನ್ ಹಬ್ಬಕ್ಕೆ ಕೌಂಟ್ ಡೌನ್ ಆರಂಭವಾಗಿದೆ. ಶಿವಾಜಿನಗರದ ರೆಸೆಲ್ ಮಾರುಕಟ್ಟೆ, ಚಾಂದನಿ ಚೌಕ್ ಭಾಗದಲ್ಲಿ ಫುಡ್ ಫೆಸ್ಟ್ ಆರಂಭವಾಗಿದೆ, ಬಗೆ ಬಗೆಯ ಸಮೋಸಗಳು, ಮಾಂಸದ ಖಾದ್ಯಗಳು ಜನರನ್ನು ಸೆಳೆಯುತ್ತಿವೆ.
ಸಮೋಸ, ಚಿಕನ್ ಖಾದ್ಯಗಳನ್ನ ಸವಿಯುವುದರಲ್ಲಿ ಜನ ಬ್ಯುಸಿ. ವ್ಯಾಪಾರ ಮಾಡಿವುದರಲ್ಲಿ ವ್ಯಾಪರಸ್ಥರು ಬಿಜಿ, ಈ ಫುಡ್ ಫೆಸ್ಟ್ ನಿಂದಾಗಿ ರೆಸೆಲ್ ಮಾರ್ಕೆಟ್ ಸುತ್ತಾಮುತ್ತ ಫುಲ್ ಟ್ರಾಫಿಕ್ ಕಂಡುಬಂತು.
ಪ್ರತಿ ವರ್ಷ ರಂಜಾನ್ ಹಬ್ಬ ಬಂದ್ರೆ ಸಾಕು ಸಿಲಿಕಾನ್ ಸಿಟಿಯ ರೆಸೆಲ್ ಮಾರ್ಕೆಟ್ ನಲ್ಲಿ ಫುಡ್ ಫೆಸ್ಟ್ ಶುರುವಾಗುತ್ತದೆ. ಈ ವರ್ಷವು ರೆಸೆಲ್ ಅದ್ದೂರಿಯಾಗಿ ಫುಡ್ ಫೆಸ್ಟ್ ನಡೆಯುತ್ತಿದೆ, ಫೆಸ್ಟ್ ನಲ್ಲಿ 50ಕ್ಕೂ ಹೆಚ್ಚು ಬಗೆಯ ವೈರೈಟಿ ವೆರೈಟಿ ಖಾದ್ಯಗಳು ಜನರನ್ನು ಸೆಳೆಯುತ್ತಿವೆ.
ಅದ್ರಲ್ಲೂ ವೆಜ್ ಸಮೋಸ, ಚಿಕನ್ ಸಮೋಸ, ಮಟನ್ ಸಮೋಸ, ಸೇರಿದಂತೆ ವಿವಿಧ ಬಗೆಯ ಸಮೋಸಗಳು ಜನರನ್ನ ಕೈಬೀಸಿ ಕರೆಯುತ್ತಿವೆ. ಇಲ್ಲಿ ಬೆಜ್ ಸಮೋಸ ಒಂದಕ್ಕೆ 12 ರೂ. ಚಿಕನ್ ಸಮೋಸ ಒಂದಕ್ಕೆ 15 ರೂ. ಚಿಕನ್ ಶಾಮಿ 3 ತುಣುಕುಗಳು 100 ರೂ. ಮಟನ್ ಹಾಲಿಮ್ ಕೆಜಿಗೆ 400 ರೂ.
ಸಿಂಗಾರಪುರಿ ಚಿಕನ್ 70 ರೂ. ಲೆಮೆನ್ ಚಿಕನ್ 70 ರೂ. ಚಿಕನ್ ಲಾಲಿ ಪಾಪ್ 4 ತುಣುಕುಗಳು 100ರೂ, ಚಿಕನ್ ಕುಲ್ಫಿ 70 ರೂ. ಚಿಕನ್ ಸಾಸ್ ಲೀಚ್ 70 ರೂ. ಕಲ್ಮಿ ಕಬಾಬ್ 60 ರೂ. ಹಾರ್ಯಾಲಿ ಚಿಕನ್ 220 ರೂ. ಶೋಲೆ ಚಿಕನ್ 220ರೂ.
ರಂಜಾನ್ ಹಬ್ಬ ಬಂದ್ರೆ ಕೇವಲ ಮುಸ್ಲಿಮರಿಗೆ ಮಾತ್ರ ಹಬ್ಬ ಆಗಿರೋದಿಲ್ಲ.ಹಿಂದೂಗಳು ಈ ಸಂದರ್ಭದಲ್ಲಿ ರಂಜಾನ್ ಫುಡ್ ಫೆಸ್ಟ್ ಗೆ ಬಂದು ವೈರೈಟಿ ಖಾದ್ಯಗಳನ್ನ ಸವಿತಾರೆ. ನಾವು ಕೂಡ ಪ್ಯಾಮಿಲಿ ಸಮೇತ ಬಂದಿದ್ವಿ. ತುಂಬ ಖುಷಿಯಾಗುತ್ತಿದೆ ಅಂತ ಖಾದ್ಯ ಪ್ರಿಯರು ಹೇಳಿದ್ರು.
ರಂಜಾನ್ ಸಮಯದಲ್ಲಿ ಮುಸ್ಲಿಂ ಬಾಂಧವರು ಉಪವಾಸ ಇರ್ತಾರೆ. ಉಪವಾಸ ಬಿಟ್ಟ ನಂತರ ಬಗೆ ಬಗೆಯ ಖಾದ್ಯಗಳನ್ನ ಸವಿತಾರೆ. ಈ ಕಾರಣಕ್ಕಾಗಿಯೇ ವಿಶೇಷ ಪುಡ್ ಫೆಸ್ಟ್ ಗಳನ್ನು ಮಾಡಲಾಗುತ್ತೆ.