ಮಾರುತಿ ನಿರ್ದೇಶನದ ‘ಈ ರೋಜುಲ್ಲೋ’ ಸಿನಿಮಾ ರಿ-ರಿಲೀಸ್ ಆಗಿದೆ. ಕೇವಲ 30 ಲಕ್ಷ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕೋಟ್ಯಂತರ ರೂಪಾಯಿ ಗಳಿಕೆ ಮಾಡಿತ್ತು. ಈಗ ಅವರು ಬಿಗ್ ಬಜೆಟ್ನತ್ತ ಗಮನ ಹರಿಸುತ್ತಿದ್ದಾರೆ. ‘ರಾಜಾಸಾಬ್’ ಚಿತ್ರದ ಬಗ್ಗೆ ಮಾರುತಿ ಅವರು ಮಾತನಾಡಿದ್ದಾರೆ.
ನಟ ಮಾರುತಿ ಅವರು ಪ್ರಭಾಸ್ ಜೊತೆ ಕೈ ಜೋಡಿಸಿದ್ದಾರೆ. ಇವರ ಸಿನಿಮಾಗೆ ‘ರಾಜಾಸಾಬ್’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಈಗಾಗಲೇ ಸಿನಿಮಾ ಪೋಸ್ಟರ್ ಮೂಲಕ ಗಮನ ಸೆಳೆದಿದೆ. ಈ ಚಿತ್ರ ದೊಡ್ಡ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿದೆ.
ಮಾರುತಿ ಅವರು ಸಣ್ಣ ಬಜೆಟ್ನ ಸಿನಿಮಾಗಳನ್ನು ಮಾಡುತ್ತಾ ಬಂದವರು. ಅವರು ಇದೇ ಮೊದಲ ಬಾರಿಗೆ ದೊಡ್ಡ ಬಜೆಟ್ನ ಸಿನಿಮಾ ಮಾಡಿದ್ದಾರೆ. ಈ ಸಿನಿಮಾದ ಬಜೆಟ್ ಬಗ್ಗೆ ಅವರೇ ಮಾಹಿತಿ ನೀಡಿದ್ದಾರೆ. ಮಾರುತಿ ನಿರ್ದೇಶನದ ‘ಈ ರೋಜುಲ್ಲೋ’ ಸಿನಿಮಾ ರಿ-ರಿಲೀಸ್ ಆಗಿದೆ. ಕೇವಲ 30 ಲಕ್ಷ ರೂಪಾಯಿ ಬಜೆಟ್ನಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಕೋಟ್ಯಂತರ ರೂಪಾಯಿ ಗಳಿಕೆ ಮಾಡಿತ್ತು. ಈಗ ಅವರು ಬಿಗ್ ಬಜೆಟ್ನತ್ತ ಗಮನ ಹರಿಸುತ್ತಿದ್ದಾರೆ. ‘ರಾಜಾಸಾಬ್’ ಚಿತ್ರದ ಬಗ್ಗೆ ಮಾರುತಿ ಅವರು ಮಾತನಾಡಿದ್ದಾರೆ. ಸಿನಿಮಾದ ಬಜೆಟ್ ಬಗ್ಗೆ ಅವರು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದಾರೆ.
ನಾಲ್ಕು ದಿನಗಳ ಶೂಟ್ಗೆ ಅವರು ನಾಲ್ಕು ಕೋಟಿ ವ್ಯಯಿಸಿದ್ದಾರಂತೆ. ‘ಕೆಲವೇ ದಿನಗಳ ಹಿಂದೆ ನಾಲ್ಕು ದಿನ ಶೂಟ್ ಮಾಡಿದೆವು. ಇದಕ್ಕೆ 4 ಕೋಟಿ ಖರ್ಚಾಗಿದೆ. ಒಂದೊಮ್ಮೆ ಪ್ರಭಾಸ್ ಇಲ್ಲದೆ ಇದ್ದಿದ್ದರೆ ಈ ಬಜೆಟ್ನಲ್ಲಿ ನಾನು 2-3 ಸಿನಿಮಾಗಳನ್ನು ಮಾಡುತ್ತಿದ್ದೆ. ಈ ಚಿತ್ರದ ಬಜೆಟ್ ದೊಡ್ಡದಾಗಿದೆ’ ಎಂದಿದ್ದಾರೆ ಅವರು.
‘ರಾಜಾಸಾಬ್’ ಚಿತ್ರದ ಪ್ರಚಾರ ಯಾವಾಗಿನಿಂದ ಎನ್ನುವ ಪ್ರಶ್ನೆಗೂ ಉತ್ತರ ಸಿಕ್ಕಿದೆ. ‘ಕಲ್ಕಿ 2898 ಎಡಿ’ ಸಿನಿಮಾ ಮೇ 9ರಂದು ರಿಲೀಸ್ ಆಗಲಿದೆ. ಚುನಾವಣೆಯ ಅಬ್ಬರದ ಮಧ್ಯೆಯೂ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಚಿತ್ರ ರಿಲೀಸ್ ಆದ ಬಳಿಕ ‘ರಾಜಾಸಾಬ್’ ಚಿತ್ರದ ಪ್ರಚಾರವನ್ನು ಮಾರುತಿ ಪ್ರಾರಂಭಿಸಲಿದ್ದಾರೆ. ಅಲ್ಲಿಯವರೆಗೆ ಸಿನಿಮಾ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳದೆ ಇರಲು ತಂಡ ನಿರ್ಧರಿಸಿದೆ.