ತುಮಕೂರು : ಬೆಂಕಿ ಕೊಂಡ ಹಾಯುವಾಗ ಕಾಲು ಜಾರಿ ಬಿದ್ದು ಅರ್ಚಕ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಗ್ರಾಮದಲ್ಲಿ ನಡೆದಿದೆ.
ಶ್ರೀ ಹುಲಿಯೂರಮ್ಮ ದೇವಿ ಜಾತ್ರಾ ಪ್ರಯುಕ್ತ ಬೆಂಕಿಕೊಂಡ ಹಾಯುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ದೇವರನ್ನ ಹೊತ್ತು ಕೊಂಡು ಕೆಂಡ ಹಾಯುವಾಗ ಅರ್ಚಕ ಮನು ಎಡವಿ ಬೆಂಕಿ ಕೆಂಡದೊಳಗೆ ಬಿದ್ದು ಗಾಯವಾಗಿದೆ. ಕೂಡಲೇ ಸ್ಥಳಿಯರು ಅರ್ಚಕ ಮನು ಅವರನ್ನು ರಕ್ಷಿಸಿದ್ದಾರೆ. ಸುಟ್ಟ ಗಾಯಗಳಾದ ಹಿನ್ನೆಲೆ ಕುಣಿಗಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸತ್ಯವತಿ ದೇವತೆಗೆ ಕೆಂಡದ ನೈವೇದ್ಯ : ಚಾಮರಾಜನಗರ ಜಿಲ್ಲೆ ಬಾನಳ್ಳಿ ಗ್ರಾಮದ ಸತ್ಯವತಿ ದೇವಸ್ಥಾನದಲ್ಲಿ ಕೆಂಡದ ಜಾತ್ರೆ ನಡೆಸಲಾಗುತ್ತದೆ. ಈ ಜಾತ್ರೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿಶೇಷ ಆಚರಣೆಯಾಗಿದೆ. ಕೊಳಗದಲ್ಲಿ ಕೆಂಡ ತುಂಬಿ ಬಿಳಿ ಬಟ್ಟೆಯ ಮೂಲಕ ದೇವಾಲಯಕ್ಕೆ ಅರ್ಚಕರು ಕೊಂಡ್ಯೋಯ್ಯುತ್ತಾರೆ.
ದೇವತೆಗೆ ಕೆಂಡದ ನೈವೇದ್ಯವನ್ನೇ ಅರ್ಪಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಶಕ್ತಿ ದೇವತೆ ಸತ್ಯವತಿಯ ಕೆಂಡದ ಜಾತ್ರೆ ಆಚರಿಸಲಾಗುತ್ತದೆ. ಕೆಂಡದ ಪವಾಡ ನೋಡಲು ಸಾವಿರಾರು ಜನರು ಆಗಮಿಸುತ್ತಾರೆ.