ಬೆಳಗಾವಿ ಸುದ್ದಿ : ಬೆಂಗಳೂರುನ ನೆಲಮಂಗಲ ಎಮ್.ವಿ.ಎಮ್ ಕನ್ವೆನ್ಸನ್ ಹಾಲ್ ನಲ್ಲಿ ಮಾರ್ಚ್ 24 ರಂದು ಕಾನಿಪ ಧ್ವನಿ ಸಂಘಟನೆಯ 2ನ್ ಸಮ್ಮೇಳನ ನಡೆಯಿತು. ಕಾರ್ಯಕ್ರಮದಲ್ಲಿ ಪತ್ರಿಕಾ ಧರ್ಮದ ನೈತಿಕ ಮೌಲ್ಯಗಳ ಬಗ್ಗೆ ಚರ್ಚಿಸಲಾಯಿತು.
ಕಾನಿಪ ಧ್ವನಿಯ ಸಂಸ್ಥಾಪಕ ಅಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ‘ನಮ್ಮ ಕಾನಿಪ ಧ್ವನಿ ಸಂಘಟನೆಯು ಪತ್ರಕರ್ತರಿಗಾಗಿ ಹಗಲಿರುಳು ದುಡಿದು, ಎಲ್ಲರ ಪ್ರಗತಿಗಾಗಿ ಶ್ರಮದಾನ ಮಾಡಿತ್ತಿದ್ದು, ಇಂದು ಸರ್ಕಾರ ಪತ್ರಿಕಾ ಭವನಗಳನ್ನು ಕೆಲವು ಸಂಘಟನೆಗಳಿಗೆ ಸೀಮಿತ ಮಾಡಿದೆ.ಇದು ಬದಲಾಗಬೇಕು.
ನಮ್ಮ ಕಾನಿಪ ಧ್ವನಿಯ ಹಲವು ಬೇಡಿಕೆಗಳನ್ನು ಈಡೇರಿಸುವ ಕಡೆ ಸರ್ಕಾರಗಳು ಗಮನಹರಿಸಬೇಕು ” ಎಂದು ಹೇಳಿದರು. ನಂತರ ಉದ್ಘಾಟನಾ ಭಾಷಣ ಮಾಡಿದ ನಿವೃತ್ತ ನ್ಯಾಯಮೂರ್ತಿಗಳಾದ ಸಂತೋಷ್ ಹೆಗ್ಡೆ ಅವರು”ಪತ್ರಿಕಾ ರಂಗದ ಸೇವಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸುದ್ದಿ ಮಾಡುತ್ತಾರೆ.
ಸಾಕಷ್ಟು ಹಗರಣಗಳು ಬೆಳಕಿಗೆ ಬರಲು ಮಾಧ್ಯಮಗಳು ತುಂಬಾ ದುಡಿದಿವೆ. ಆಕ್ರಮಗಳನ್ನು, ಭ್ರಷ್ಟಾಚಾರಗಳನ್ನು ಹೆಡೆಮುರಿ ಕಟ್ಟಲು ಸಾಂವಿಧಾನಿಕ ಎಲ್ಲಾ ಅಂಗಗಳ ಜೊತೆ ಅಂದರೆ ಶಾಸಕಾಂಗ, ಕಾರ್ಯಾಂಗ,ನ್ಯಾಯಾಂಗ ಜೊತೆಗೆ ನಾಲ್ಕನೇ ಅಂಗವಾಗಿ ಸಾಂವಿಧಾನಿಕ ಪತ್ರಿಕಾ ರಂಗ ಶ್ರಮಿಸುತ್ತಿದ್ದಾರೆ.
ದೇಶ ಕಟ್ಟಲು ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮಗಳ ಪಾತ್ರ ಬಹಳಷ್ಟಿದೆ ” ಎಂದು ಹೇಳಿದರು. ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿದ್ದ ಪ.ಪೂ. ಬಸವರಮಾನಂದ ಸ್ವಾಮಿಗಳು ಮಾತನಾಡುತ್ತಾ”ಇಂದು ಡಿಗ್ರಿ ಮಾಸ್ಟರ್ ಡಿಗ್ರಿ, ಪಿಎಚ್ಚಿ, ಮಾಡಿದ ಪ್ರಬುದ್ಧ ಪತ್ರಕರ್ತರು ಇಂದು ಉಪಸ್ಥಿತರಿದ್ದು,ನಿಮ್ಮ ಶಕ್ತಿ ಅನಂತತೆ ಹೊಂದಿದೆ. ನೀವು ಬಳಸುವ ಲೇಖನವೆಂಬ ಅಸ್ತ್ರ ಇನ್ನುಳಿದ ಶಸ್ತ್ರಗಳಿಗಿಂತ ಬಲಿಷ್ಠತೆ ಮತ್ತು ಚತುರತೆಯೊಂದಿಗೆ ಹರಿತವಾಗಿದೆ. ಪತ್ರಕರ್ತರು ಮನಸ್ಸು ಮಾಡಿದರೆ ಹೊಸ ಕ್ರಾಂತಿಗಳನ್ನು ಸೃಷ್ಟಿ ಮಾಡುವಂತ ಶಕ್ತಿ ನಿಮ್ಮಲ್ಲಿದೆ ” ಎಂದು ಶ್ಲಾಘಿಸಿದರು.
ನಂತರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಜೋಗುತಿ ಮಂಜಮ್ಮ ಅವರು ಭಾವುಕರಾಗಿ “ಇಂದು ನನ್ನನ್ನು ದಿಲ್ಲಿಯ ಪಾರ್ಲಿಮೆಂಟ್ ತನಕ
ಬೆಳೆಸಿದ್ದು ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು, ನೀವುಗಳು ಕೈ ಹಿಡಿದರೆ ಎಲ್ಲರನ್ನು ಬೆಳೆಸಲು ಬಹುದು, ಅಳಿಸಲು ಬಹುದು ಆ ಶಕ್ತಿ ನಿಮ್ಮಲ್ಲಿದೆ. ನಿಮ್ಮ ಸಂಘಟನೆಯಲ್ಲಿ ಹೆಣ್ಮಕ್ಕಳಿಗೂ ಮತ್ತು – ನಮ್ಮಂಥ ತೃತೀಯ ಲಿಂಗಿಗಳಿಗೆ ಅವಕಾಶ ಮಾಡಿಕೊಟ್ಟು ಸಮಾನತೆಯ ಘನತೆಯನ್ನು – ಎತ್ತರಿಸಿ. ನಿಮ್ಮ ಮಕ್ಕಳು ಸರ್ವತೋಮುಖವಾಗಿ ಈ ಬೆಳೆಯಲು ಶಿಕ್ಷಣದ ಅವಶ್ಯಕತೆ ತುಂಬಾ ಇದೆ. ಅದಕ್ಕಾಗಿ ನಿಮ್ಮ ಮಕ್ಕಳು ದುರ್ಮಾರ್ಗ ಹಿಡಿಯದಂತೆ ವಿದ್ಯಾವಂತರನ್ನಾಗಿ ಮಾಡಿ ಎನ್ನುತ್ತಾ ಮಾಧ್ಯಮಗಳಿಗೆ ಕೃತಜ್ಞತೆ ಅರ್ಪಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿಗೆ ಪತ್ರಿಕಾ ರಂಗದಲ್ಲಿ ಸಾಧನೆಗೈದ 3ವರಿಗೆ ಕಾನಿಪ ಧ್ವನಿ ರಾಜ್ಯ ಕಾರ್ಯಕಾರಿಣಿಯ ಸದಸ್ಯ, ಮಂಜುನಾಥ್ ರಾಠೋಡ್ ,
ತಾಲೂಕಾರ್ಯಧ್ಯಕ್ಷ, ರಮೇಶ್ ರಾಯಬಾಗ ಅವರಿಗೆ 2024ಸಾಲಿನ ರಾಜ್ಯಮಟ್ಟದ ‘ಕರ್ನಾಟಕ ಮಾದ್ಯಮ ಸೇವಾ ರತ್ನ ಮತ್ತು ರಾಮದುರ್ಗ ತಾಲೂಕಾ ಅಧ್ಯಕ್ಷ,ಎಂ ಕೆ ಯಾದವಾಡ ಅವರಿಗೆ ಸಾಮಾಜಿಕ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು,
ಪತ್ರಕರ್ತರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ” ನೀಡಿ ಸನ್ಮಾನಿಸಲಾಯಿತು. ರಾಜ್ಯದ ಮೂಲೆ ಮೂಲೆಗಳಿಂದ ಬಂದಿದ್ದ ಕಾನಿಪ ಧ್ವನಿಯ – ಜಿಲ್ಲಾಧ್ಯಕ್ಷರು, ತಾಲ್ಲೂಕಾಧ್ಯಕ್ಷರು, ಹಾಗೂ ಎಲ್ಲಾ – ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಈ ಎರಡನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ – ಸಹಸ್ರಾರು ಸಂಖ್ಯೆಯಲ್ಲಿ ಪತ್ರಕರ್ತರು ಭಾಗವಹಿಸಿ – ಈ ಸಮ್ಮೇಳನಕ್ಕೆ ಮೆರುಗು ತಂದರು.