ಬೆಂಗಳೂರು : ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಅಜ್ಜಿ ಮತ್ತು ಅಮ್ಮನಿಗೆ ‘ಶಕ್ತಿ ಯೋಜನೆ’ಯಡಿ ಫ್ರೀ ಬಸ್ ಪ್ರಯಾಣ ಟಿಕೆಟ್ ಸಿಕ್ಕಿತು. ಆದರೆ ಅವರ ಜೊತೆಯಲ್ಲಿ ತಂದಿದ್ದ ಲವ್ ಬರ್ಡ್ಸ್ಗಳಿಗೆ ಪ್ರಯಾಣ ಶುಲ್ಕ ಬರೋಬ್ಬರಿ 444 ರೂ. ಬಿದ್ದಿದೆ.
ಅಜ್ಜಿ ಮತ್ತು ಅಮ್ಮಂದಿರು ಮೈಸೂರು ಕಡೆಗೆ ಬಸ್ನಲ್ಲಿ ಉಚಿತ ಪ್ರಯಾಣ ಬೆಳೆಸಿದ್ದರು. ತಮ್ಮ ಜೊತೆ ಪಂಜರದಲ್ಲಿ ಲ ಬರ್ಡ್ಸ್ಗಳನ್ನು ತೆಗೆದುಕೊಂಡು ಹೋಗುವಂತೆ. ಅಜ್ಜಿ-ಮೊಮ್ಮಗಳಿಗೆ ಕಂಡಕ್ಟರ್ ಫ್ರೀ ಟಿಕೆಟ್ ಕೊಟ್ಟರು. ಆದರೆ ಲವ್ ಬರ್ಡ್ಸ್ಗಳಿಗೆ ಪ್ರಯಾಣ ಶುಲ್ಕ ಹಾಕಿದ್ದಾರೆ.
ಮೊಮ್ಮಗಳ ಜೊತೆ ನಾಲ್ಕು ಲ ಬರ್ಡ್ಸ್ ಹಕ್ಕಿಗಳನ್ನು ಅಜ್ಜಿಯೊಬ್ಬರು ತೆಗೆದುಕೊಂಡರು. ಕೆಎಸ್ಆರ್ಟಿಸಿ ಕಂಡಕ್ಟರ್, ಅಜ್ಜಿ-ಮೊಮ್ಮಗಳಿಗೆ ಫ್ರೀ ಟಿಕೆಟ್ ಕೊಟ್ಟಿದ್ದಾರೆ. ಆದರೆ ಲವ್ ಬರ್ಡ್ಸ್ ಗೆ ಟಿಕೆಟ್ ನಾಲ್ಕು ಮಕ್ಕಳು ಎಂದು ಟಿಕೆಟ್ನಲ್ಲಿ ನಮೂದು ಮಾಡಿದ್ದಾರೆ.
ಒಂದು ಬರ್ಡ್ ಪ್ರಯಾಣ ವೆಚ್ಚವಾಗಿ 111 ರೂ. ಬಿದ್ದಿದೆ. ಒಟ್ಟು ನಾಲ್ಕು ಹಕ್ಕಿಗಳಿಗೆ 444 ರೂಪಾಯಿ ಟಿಕೆಟ್ ನೀಡಿತು. ಇಂದು ಬೆಳಗ್ಗೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.