ಬೆಂಗಳೂರು : ಸಮಯ ಬಂದಾಗ ಸುಮಲತಾ ಅಂಬರೀಶ್ (ಸುಮಲತಾ) ಜೊತೆಗೂ ಮಾತುಕತೆ ನಡೆಸುತ್ತೇನೆ. ರಾಮಾಂಜನೇಯ ಯುದ್ಧವೇ ನಡೆದು ಹೋಗಿದೆ. ನಮ್ಮಲ್ಲಿ ಯುದ್ದ ಆಗೋಲ್ಲವಾ ಎಂದು ಮಾಜಿ ಸಿಎಂಹೆಚ್.ಡಿ.ಕುಮಾರಸ್ವಾಮಿ (ಎಚ್‌ಡಿ ಕುಮಾರಸ್ವಾಮಿ)
ನಾರಾಯಣಗೌಡರಂತೆ ಸುಮಲತಾ ಜೊತೆಯೂ ಮಾತುಕತೆ ನಡೆಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ಸುಮಲತಾ ಅಂಬರೀಶ್ ಜೊತೆಗೆ ಮಾತುಕತೆಗೆ ಸಿದ್ದ ಎಂದು ಸಂದೇಶ ರವಾನೆ ಮಾಡಿದ್ದಾರೆ ಸುಮಲತಾ ಅವರ ಜೊತೆಗೆ ಮಾತುಕತೆ ಮಾಡ್ತೀನಿ.
ಎಲ್ಲವೂ ಸುಗಮವಾಗಿ ನಡೆಯುತ್ತಿದೆ. ಸುಮಲತಾ ನನಗೆ ಶತ್ರು ಅಲ್ಲ. ಚುನಾವಣೆಗಳು ಬಂದಾಗ ಕೆಲವು ವಿಚಾರದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಬಂದಿವೆ. ಆ ಸಂದರ್ಭದಲ್ಲಿ ಹಲವಾರು ರೀತಿಯ ಚರ್ಚೆಗಳು ನಡೆಯುತ್ತವೆ. ಅದನ್ನು ಈಗ ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ ಎಂದರು.
ಅಂಬರೀಶ್ ಅವರು ಬದುಕಿದ್ದಾಗ ಜೊತೆಗೂಡಿಯೇ ಊಟ ಮಾಡಿದ್ದೇವೆ. ಸುಮಲತಾ ಅವರೇ ನನಗೆ ಊಟ ಬಡಿಸಿದ್ದಾರೆ. ಅಂಬರೀಶ್ ಜೊತೆ ಊಟ ಮಾಡೋವಾಗ ಜೊತೆಯಲ್ಲಿ ಅವರ ಮನೆಯಲ್ಲಿ ಊಟ ಮಾಡಿದ್ದೇವೆ. ಆ ದಿನಗಳು ಇವೆ ಎಂದು ನೆನಪು ಮೆಲುಕು ಹಾಕಿದರು.