ನವದೆಹಲಿ : ಚುನಾವಣೆ ಹೊತ್ತಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಬಂಧನದ ಈ ಸಮಯ ನ್ಯಾಯ ಸಮ್ಮತ ಚುನಾವಣೆಯನ್ನು ಸೃಷ್ಟಿಸುವುದಿಲ್ಲ. ಈ ಬಂಧನದ ಅಡಿಪಾಯವೇ ದೋಷಪೂರಿತ ಎಂದು ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದಾರೆ.
ಇಡಿ ಬಂಧನವನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ವಾದ ಮಂಡಿಸಿದ ಸಿಂಘ್ವಿ, ನನ್ನ ಕಕ್ಷಿದಾರರ ಬಂಧನದ ಬುನಾದಿ ದೋಷಪೂರಿತ ಕಾರಣ ಅವರನ್ನು ಬಿಡುಗಡೆ ಮಾಡಬೇಕು. ಇದು ನನ್ನ ಪ್ರಾರ್ಥನೆ. ಇದು ಕ್ರಿಮಿನಲ್ ವಿಷಯವಾಗಿದ್ದರೂ ಕಾನೂನು ಮತ್ತು ಮೂಲಭೂತ ರಚನೆಯ ಮೇಲೆ ಪ್ರಭಾವ ಬೀರಿದೆ.
ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಒಬ್ಬ ಮುಖ್ಯಮಂತ್ರಿಯನ್ನು ಬಂಧಿಸಲಾಗಿದೆ. ಯಾವುದೇ ವಸ್ತು ವಿಷಯವಿಲ್ಲ ಬಂಧನದ ಉದ್ದೇಶವು ನಾನ್-ಲೆವೆಲ್ ಪ್ಲೇಯಿಂಗ್ ಫೀಲ್ಡ್ ಅನ್ನು ರಚಿಸುವುದಾಗಿದೆ. ಈ ಮೂಲಕ ಸಂವಿಧಾನದ ಮೂಲಭೂತ ರಚನೆಯನ್ನು ಹೊಡೆಯುತ್ತಿದ್ದಾರೆ. ಸೆಕ್ಷನ್ 19 ರ ಅಡಿಯಲ್ಲಿ ಬಂಧನದ ಮಿತಿಯನ್ನು ಇರಿಸಲಾಗಿದೆ. ಇದಕ್ಕೆ ಕಾರಣ ಸೆಕ್ಷನ್ 45 ರ ಅಡಿಯಲ್ಲಿ ಜಾಮೀನು ಪಡೆಯುವುದು ತುಂಬಾ ಕಷ್ಟಕರವಾಗಿದೆ ಎಂದು ಸಿಂಗ್ವಿ ಹೇಳಿದ್ದಾರೆ.
ಕೇಜ್ರಿವಾಲ್ ಪರ ವಾದ ಮಂಡಿಸಿದ ಮತ್ತೋರ್ವ ಹಿರಿಯ ವಕೀಲ ಅಮಿತ್ ದೇಸಾಯಿ, ಪ್ರಕರಣದಲ್ಲಿ ಸೆಕ್ಷನ್ 19 ಅನ್ನು ಸರಿಯಾಗಿ ಪಾಲಿಸಿಲ್ಲ. ಇದು ಪ್ರಾಥಮಿಕ ಅಂಶವಾಗಿದೆ. ಬಂಧನದ ಸಮಯದಲ್ಲಿ ಅರ್ಜಿದಾರರು ಸೆಕ್ಷನ್ 3 ರ ಅಡಿಯಲ್ಲಿ ಸೂಚಿಸಲಾದ ಚಟುವಟಿಕೆಗಳನ್ನು ಮಾಡುವಲ್ಲಿ ತಪ್ಪಿತಸ್ಥರು ಎಂದು ಸ್ಥಾಪಿಸಲು ಡಿಒಐ (ವೆಚ್ಚದ ಇಲಾಖೆ) ವಿಫಲವಾಗಿದೆ. ಯಾವುದೇ ವಿಚಾರಣೆಯಿಲ್ಲದೆ ಅರ್ಜಿದಾರರನ್ನು ಬಂಧಿಸಲಾಗಿದೆ. ಇದು ರಾಜಕೀಯ ಸೇಡನ್ನು ಪ್ರತಿಬಿಂಬಿಸುತ್ತದೆ ಎಂದು ವಾದಿಸಿದರು.
ಪ್ರಕರಣಕ್ಕೆ ಉತ್ತರ ಸಲ್ಲಿಸಲು ಕಾಲಾವಕಾಶ ನೀಡುವಂತೆ ಇಡಿ ಹೈಕೋರ್ಟ್‌ಗೆ ಮನವಿ ಮಾಡಿತು. ಎಜೆನ್ಸಿ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, ಅರ್ಜಿ ಮಂಗಳವಾರವೇ ಲಭ್ಯವಾಗಿದೆ. ಇ.ಡಿ ನಿಲುವನ್ನು ದಾಖಲಿಸಲು ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದರು. ಮಧ್ಯಂತರ ಪರಿಹಾರಕ್ಕೂ ಸೂಕ್ತ ಕಾಲಾವಕಾಶವಿದೆ ಎಂದು ಮನವಿ ಮಾಡಿದರು.