ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಚಾರಕ್ಕೆ ಎಲ್ಲಾ ನಾಯಕರು ಸಜಾಗುತ್ತಿದ್ದಾರೆ ಹಾಗಾಗಿ ಮಧ್ಯಪ್ರದೇಶ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಭಾರತೀಯ ಜನತಾ ಪಕ್ಷವು 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಜೆಪಿ ನಡ್ಡಾ, ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಶಿವಪ್ರಕಾಶ್, ಡಾ.ಮೋಹನ್ ಯಾದವ್, ವಿಡಿ ಶರ್ಮಾ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೆಸರುಗಳು ಸೇರಿವೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜಸ್ಥಾನ ಸಿಎಂ ಭಜನ್ಲಾಲ್ ಶರ್ಮಾ ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರನ್ನು ಸಹ ಸ್ಟಾರ್ ಪ್ರಚಾರಕರನ್ನಾಗಿ ಮಾಡಲಾಗಿದೆ. ಕಾಂಗ್ರೆಸ್ ನಿಂದ ಬಿಜೆಪಿ ಸೇರಿದ ಸುರೇಶ್ ಪಚೌರಿ ಅವರನ್ನೂ ಸ್ಟಾರ್ ಪ್ರಚಾರಕರನ್ನಾಗಿ ಮಾಡಲಾಗಿದೆ.
ಮಾಜಿ ಸಿಎಂ ಸಂಸದೆ ಹಾಗೂ ಬಿಜೆಪಿಯ ಫೈರ್ ಬ್ರ್ಯಾಂಡ್ ನಾಯಕಿ ಉಮಾಭಾರತಿ ಹೆಸರಿಲ್ಲ. ಈ ಪಟ್ಟಿಯಲ್ಲಿ ಮಧ್ಯಪ್ರದೇಶದ ಹಲವು ನಾಯಕರೂ ಸ್ಥಾನ ಪಡೆದಿದ್ದಾರೆ. ಸಿಎಂ ಮೋಹನ್ ಯಾದವ್, ವಿಡಿ ಶರ್ಮಾ, ಉಪ ಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ, ಉಪಮುಖ್ಯಮಂತ್ರಿ ಜಗದೀಶ್ ದೇವ್ರಾ, ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಭೂಪೇಂದ್ರ ಪಟೇಲ್ ಅವರ ಹೆಸರುಗಳು ಸೇರಿವೆ.
ಆದರೆ, ಜ್ಯೋತಿರಾದಿತ್ಯ ಸಿಂಧಿಯಾ, ವೀರೇಂದ್ರ ಕುಮಾರ್ ಖಟಿಕ್, ಫಗ್ಗನ್ ಸಿಂಗ್ ಕುಲಸ್ತೆ, ಹಿತಾನಂದ್, ಪ್ರಹ್ಲಾದ್ ಪಟೇಲ್, ಕೈಲಾಶ್ ವಿಜಯವರ್ಗಿಯಾ, ಜೈಭನ್ ಸಿಂಗ್ ಪವಯ್ಯ, ರಾಕೇಶ್ ಸಿಂಗ್, ಲಾಲ್ ಸಿಂಗ್ ಆರ್ಯ, ನಾರಾಯಣ್ ಕುಶ್ವಾಹ, ತುಳಸಿ ಸಿಲಾವತ್, ನಿರ್ಮಲಾ ಭೂರಿಯಾ, ಎಡಲ್ ಸಿಂಗ್ ಕಂಸನಾ, ಗೋಪಾಲ್ ಭರ್ರೋತ್ ಮಿಲಗವಾ, ಇತ್ತೀಚೆಗೆ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ಕವಿತಾ ಪಾಟಿದಾರ್, ಗೌರಿಶಂಕರ್ ಬಿಸೇನ್ ಮತ್ತು ಸುರೇಶ್ ಪಚೌರಿ ಅವರಿಗೂ ಸ್ಥಾನ ನೀಡಲಾಗಿದೆ.
ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೂ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್, ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಛತ್ತೀಸ್‌ಗಢ ಸಿಎಂ ವಿಷ್ಣು ದೇವ್ ಸಾಯಿ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಯುಪಿ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೆಸರುಗಳು ಸೇರಿವೆ.