ಬೆಂಗಳೂರು/ಮೈಸೂರು, (ಮಾರ್ಚ್ 27) : ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಸಚಿವ ಹೆಚ್.ಸಿ ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಇಂದು (ಮಾರ್ಚ್ 27) ಬಹಿರಂಗಪಡಿಸಿದ್ದು, ಎಐಸಿಸಿಯಿಂದ ಅಧಿಕೃತ ಘೋಷಣೆಯೊಂದೆ ಬಾಕಿ ಇದೆ.
ನಾಳೆ (ಮಾರ್ಚ್ 28) ಸಂಜೆ ವೇಳೆಗೆ ಪಟ್ಟಿ ಹೊರಬೀಳುವ ಸಾಧ್ಯತೆಗಳಿವೆ. ಈಗಾಗಲೇ ರಾಜ್ಯದ ನಾಲ್ವರು ಸಚಿವರ ಮಕ್ಕಳಿಗೆ ಲೋಕಸಭೆ ಟಿಕೆಟ್ ನೀಡಲಾಗಿದೆ. ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾಗೆ ಚಿಕ್ಕೋಡಿ ಕ್ಷೇತ್ರ, ಬೀದರ್ ಟಿಕೆಟ್ ಈಶ್ವರ್ ಖಂಡ್ರೆ ಮಗನಿಗೆ ನೀಡಲಾಗಿದೆ.
ಇನ್ನು ಬೆಳಗಾವಿ ಕ್ಷೇತ್ರದ ಟಿಕೆಟ್ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನಿಗೆ ಕೊಡಲಾಗಿದೆ. ಹಾಗೇ ಶಿವಾನಂದ ಪಾಟೀಲ್ ಪುತ್ರಿ ಸಯುಕ್ತ ಪಾಟೀಲ್ಗೆ ಬಾಗಲಕೋಟೆ ಟಿಕೆಟ್ ನೀಡಲಾಗಿದೆ. ಇದೀಗ ಈ ಪಟ್ಟಿಗೆ ಸಚಿವ ಮಹಾದೇವಪ್ಪ ಸೇರಿಕೊಂಡಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಒಟ್ಟು ಐವರು ಸಚಿವರ ಮಕ್ಕಳಿಗೆ ಈ ಬಾರಿ ಲೋಕಸಭಾ ಟಿಕೆಟ್ ನೀಡಿದಂತಾಗಿದೆ.