ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಕಾಲಿವುಡ್ ನಟ ಸಿದ್ಧಾರ್ಥ್ ಸದ್ದಿಲ್ಲದೇ ಮದುವೆಯಾದ ವಿಚಾರ ಕಾಲಿವುಡ್ ಅಂಗಳದಿಂದ ಬಂದಿದೆ. ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿರುವ ಶ್ರೀರಂಗಪುರಂನಲ್ಲಿರುವ ಶ್ರೀ ರಂಗನಾಯಕ ಸ್ವಾಮಿ ದೇವಸ್ಥಾನದಲ್ಲಿ ಸಿಂಪಲ್ ಆಗಿ ಈ ಜೋಡಿ ಮದುವೆಯಾಗಿದೆ. ಅಧಿಕೃತವಾಗಿ ಈ ಕುರಿತಂತೆ ಜೋಡಿ ಹೇಳಿಕೊಳ್ಳದೇ ಇದ್ದರೂ, ಇರಾ ಖಾನ್ ಮದುವೆಯಲ್ಲಿ ಕಾಣಿಸಿಕೊಂಡಿದ್ದ ಅದಿತಿ ಮತ್ತು ಸಿದ್ಧಾರ್ಥ ಫೋಟೋವನ್ನೇ ಮದುವೆ ಫೋಟೋ ಎಂದು ವೈರಲ್ ಆಗಿದೆ.
ಈ ಜೋಡಿ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದೆ. ಆದರೆ ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ಸಿದ್ಧಾರ್ಥ್ ಜೊತೆಗಿನ ಖಾಸಗಿ ಫೋಟೋ ಹಂಚಿಕೊಂಡು ಹೊಸ ವರ್ಷದಂದು ಮದುವೆ (ವಿವಾಹ) ಬಗ್ಗೆ ಸುಳಿವು ನೀಡಿದ್ದರು ಅದಿತಿ ರಾವ್.
ನ್ಯೂ ಇಯರ್ ಸಂಭ್ರಮವನ್ನು ನಟಿ ಅದಿತಿ- ಸಿದ್ಧಾರ್ಥ್ ಜೋಡಿ ವಿದೇಶದಲ್ಲಿ ಸೆಲೆಬ್ರೇಟ್ ಮಾಡಿತ್ತು. ಈ ಕುರಿತ ಇಬ್ಬರೂ ಕೂಡ ಚೆಂದದ ಫೋಟೋ ಶೇರ್ ಮಾಡಿ ಅಭಿಮಾನಿಗಳಿಗೆ ಶುಭಕೋರಿದ್ದರು. ಈ ಮೂಲಕ ಎಂಗೇಜ್ ಆಗಿರುವುದು ಖಚಿತವಾಗಿತ್ತು. ಫೋಟೋ ಶೇರ್ ಮಾಡ್ತಿದ್ದಂತೆ ಮದುವೆ ಯಾವಾಗ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದರು.
2021ರಲ್ಲಿ ‘ಮಹಾ ಸಮುದ್ರಂ’ ಸಿನಿಮಾ ವೇಳೆ, ಅದಿತಿ- ಸಿದ್ಧಾರ್ಥ್ ಪರಿಚಿತರಾದರು. ಅಲ್ಲಿಂದ ಶುರುವಾದ ಸ್ನೇಹ ಪ್ರೀತಿಗೆ ತಿರುಗಿತ್ತು. ಸಾಕಷ್ಟು ಪಾರ್ಟಿ ಮತ್ತು ಸೆಲೆಬ್ರಿಟಿ ಮದುವೆ ಸಮಾರಂಭಗಳಲ್ಲಿ ಇಬ್ಬರೂ ಜೊತೆಯಾಗಿಯೇ ಹೋಗುವ ಮೂಲಕ ಹೈಲೆಟ್ ಆದರು.