Breaking
Mon. Dec 23rd, 2024

ಯುವಕನೊಬ್ಬ ಹೆಣ್ಣಿನ ವೇಷ ತೊಟ್ಟು ಲೇಡಿಸ್ ಹಾಸ್ಟೆಲ್ ಗೆ ಬಂದಿದ್ದಾನೆ…!

ಈ ಕೆಲವು ಪೋಲಿ ಹುಡುಗರು ಏನಾದರೊಂದು ತರ್ಲೆ ಕೆಲಸ ಮಾಡಿ ನೆಟ್ಟಿಗರ ಕೋಪಕ್ಕೆ ಗುರಿಯಾಗುತ್ತಿರುತ್ತಾರೆ. ಹೀಗೆ ಈ ಪೋಲಿ ಹುಡುಗರು ಹಾದಿ ಬೀದಿಯಲ್ಲಿ ಹೋಗುವವರಿಗೆ ತೊಂದರೆ ಕೊಡುವಂತಹ, ಮಧ್ಯರಾತ್ರಿ ಬಾಲಕಿಯರ ಹಾಸ್ಟೆಲ್ಗೆ ನುಗ್ಗಿದಂತಹ ಸುದ್ದಿಗಳನ್ನು ಕೇಳಿರುತ್ತೀರಿ ಅಲ್ವಾ.

ಇದೀಗ ಅಂತಹದೊಂದು ಸುದ್ದಿ ವೈರಲ್ ಆಗಿದ್ದು, ಯುವಕನೊಬ್ಬ ಹೆಣ್ಣಿನ ವೇಷ ತೊಟ್ಟು ಲೇಡಿಸ್ ಹಾಸ್ಟೆಲ್ ಗೆ ನುಗ್ಗಿದ್ದಾನೆ. ಹೀಗೆ ಹಾಸ್ಟೆಲ್ ಗೆ ನಗ್ಗಿದ ಈತ ಸ್ವಲ್ಪ ಹೊತ್ತಿನಲ್ಲೇ ಹಾಸ್ಟೆಲ್ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೆಣ್ಣಿನ ವೇಷ ತೊಟ್ಟು ಲೇಡಿಸ್ ಹಾಸ್ಟೆಲ್ ಗೆ ನುಗ್ಗಿದಂತಹ ಯುವಕನೊಬ್ಬ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಹಾಸ್ಟೆಲ್ ಅಧಿಕಾರಿಗಳ ಕೈಯಿಂದ ಆತನಿಗೆ ಸರಿಯಾಗಿ ಗೂಸಾ ಬಿದ್ದಿದೆ. ಆದರೆ ಈ ಘಟನೆ ಯಾವಾಗ, ಎಲ್ಲಿ ನಡೆದಿದ್ದು ಎಂಬ ವಿಚಾರ ಇನ್ನೂ ತಿಳಿದು ಬಂದಿಲ್ಲ. ಈ ಕುರಿತ ವಿಡಿಯೋವನ್ನು @gharkalesh ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಹೆಣ್ಣಿನ ವೇಷ ಧರಿಸಿ ಹುಡುಗಿಯರ ಹಾಸ್ಟೆಲ್ ಗೆ ನುಸುಳಿದ ವ್ಯಕ್ತಿ ಹಾಸ್ಟೆಲ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. 

ವೈರಲ್ ವಿಡಿಯೋದಲ್ಲಿ ಹೆಣ್ಣಿನ ವೇಷ ಧರಿಸಿ ಹುಡುಗಿಯರ ಹಾಸ್ಟೆಲ್ಗೆ ಎಂಟ್ರಿ ಕೊಟ್ಟ ಯುವಕನನ್ನು ರೆಡ್ ಹ್ಯಾಂಡ್ ಹಿಡಿದು, ಹಾಸ್ಟೆಲ್ ಅಧಿಕಾರಿಗಳು ವಿದ್ಯಾರ್ಥಿನಿಯರ ಮುಂದೆಯೇ ಆತನಿಗೆ ಸರಿಯಾಗಿ ಗೂಸಾ ಕೊಡುತ್ತಿರುವ ದೃಶ್ಯವನ್ನು ಕಾಣಬಹುದು. ನಂತರ ಆ ಯುವಕ ಧರಿಸಿದ್ದ ಸೀರೆಯನ್ನು ಆತನ ಕೊರಳಿಗೆ ಸುತ್ತಿ, ಅಧಿಕಾರಿಗಳು ಆತನನ್ನು ಹೊರಗೆ ಎಳೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಕಾಣಬಹುದು.

ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಆರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನನ್ನ ಕಾಲೇಜಿನಲ್ಲಿ ಹುಡುಗಿಯರು ಹುಡುಗರ ಹಾಸ್ಟೆಲ್ ಗೆ ಬಂದು ಕೂರುತ್ತಿದ್ದರು, ಅವರಿಗೇಕೆ ಯಾರು ಏನು ಕ್ರಮ ಕೈಗೊಳ್ಳಲಿಲ್ಲʼ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇಂತಹವರನ್ನು ಜೈಲಿಗೆ ಅಟ್ಟಬೇಕುʼ ಎಂದು ಹೇಳಿದ್ದಾರೆ. ಇನ್ನೂ ಹಲವರು ಈತನ ನೀಚ ಕೆಲಸಕ್ಕೆ ಛೀಮಾರಿ ಹಾಕಿದ್ದಾರೆ.

Related Post

Leave a Reply

Your email address will not be published. Required fields are marked *