ಬಿಜೆಪಿಯಲ್ಲಿ ದಲಿತ ಎಡಗೈ ಸಮುದಾಯದ ಪ್ರಭಾವಿ ನಾಯಕರೆಂದು ಗುರುತಿಸಿಕೊಂಡಿರುವ ಸಚಿವ ಗೋವಿಂದ ಎಂ. ಕಾರಜೋಳ ಅವರು. ಇವರು ಬಾಗಲಕೋಟೆ ಜಿಲ್ಲೆ ಮುಧೋಳ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಬಿ. ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಸಂಪುಟದಲ್ಲಿ ಉಪಮುಖ್ಯಮಂತ್ರಿ ಆಗಿದ್ದರು. ಗಳಾಗಿದ್ದ ಇವರು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ಕ್ಷೇತ್ರದ ಬಿಜೆಪಿ ಶಾಸಕ ಗೋವಿಂದ ಎಂ. ಕಾರಜೋಳ. ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳಾಗಿದ್ದ ಇವರು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಜಲಸಂನ್ಮೂಲ ಸಚಿವರು.
ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಗೋವಿಂದ ಎಂ. ಕಾರಜೋಳ ಪೂರ್ಣ ಹೆಸರು ಗೋವಿಂದ ಮುಕ್ತಪ್ಪ ಕಾರಜೋಳ. ದಲಿತ ಎಡಗೈ ಸಮುದಾಯದ ಪ್ರಭಾವಿ ನಾಯಕ. ಲೋಕೋಪಯೋಗಿ ಇಲಾಖೆಯ ಮಾಜಿ ನೌಕರರು ನಂತರ ಅದೇ ಇಲಾಖೆ ಸಚಿವರಾಗಿದ್ದು ಆಸಕ್ತಿಕರ ವಿಚಾರ.
ಡಿಪ್ಲೊಮಾ ಪದವೀಧರರಾದ ಗೋವಿಂದ ಎಂ. ಕಾರಜೋಳ ಕೃಷಿ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. 1994ರ ಚುನಾವಣೆಯಲ್ಲಿ ಮೊದಲ ಬಾರಿಗೆ ಜನತಾದಳದ ಅಭ್ಯರ್ಥಿಯಾಗಿ ಕಣಕ್ಕಿಳಿದು ಮೊದಲ ಗೆಲುವು ದಾಖಲಿಸಿದರು.
1999ರ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯಾಗಿ ಕಣಕ್ಕಿಳಿದರು. 52,658 ಮತಗಳನ್ನು ಪಡೆದು ಸೋಲು ಕಂಡರು. ಬಳಿಕ ಗೋವಿಂದ ಎಂ. ಕಾರಜೋಳ ಬಿಜೆಪಿ ಸೇರಿದರು. 2004ರಿಂದ ಮುಧೋಳ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾಗುತ್ತಿದ್ದಾರೆ. 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯ ನಿರ್ವಹಣೆ ಮಾಡಿದರು.
2006-2007ರಲ್ಲಿ ಆಹಾರ ಮತ್ತುನಾಗರಿಕ ಸರಬರಾಜು ಖಾತೆ ಸಚಿವರಾದರು. 2008ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಣ್ಣ ನೀರಾವರಿ ಖಾತೆ ಸಚಿವರಾದರು. ಕನ್ನಡ ಮತ್ತು ಸಂಸ್ಕೃತಿ, ಮಾಹಿತಿ ಹಾಗೂ ಪ್ರವಾಸೋದ್ಯಮ ಸಚಿವರಾದರು. ಸಮಾಜ ಕಲ್ಯಾಣ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.
2018ರ ಚುನಾವಣೆಯಲ್ಲಿ ಗೋವಿಂದ ಕಾರಜೋಳ 64,727 ಮತಗಳನ್ನು ಪಡೆದು ಜಯಗಳಿಸಿದರು. 2019ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಉಪ ಮುಖ್ಯಮಂತ್ರಿಯಾದರು. ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆ ಸಚಿವರಾದರು. ಕರ್ನಾಟಕದಲ್ಲಿ ಹಾಲಿ ಜಲಸಂಪನ್ಮೂಲ ಸಚಿವರಾಗಿರುವ ಗೋವಿಂದ ಕಾರಜೋಳ ಅವರು ಉತ್ತರ ಕರ್ನಾಟಕದ ಜೀವನಾಡಿ ನದಿಗಳ ಯೋಜನೆ, ನೀರಾವರಿ ಯೋಜನೆಗಳ ಅನುಷ್ಠಾನ ಬಗ್ಗೆ ವಿಶೇಷ ಕಾಳಜಿ ಹೊಂದಿದವರು. ಈಗಾಗಲೇ ಮಹದಾಯಿ ನದಿ ನೀರು ಯೋಜನೆಗೆ ಸಂಬಂಧಿಸಿದಂತೆ ಹಲವು ಭಾರಿ ಕೇಂದ್ರದ ವರಿಷ್ಠರನ್ನು ಭೇಟಿ ಮಾಡಿದ್ದಾರೆ.
ಇತ್ತೀಚೆಗೆ ಕಳಸಾ-ಬಂಡೂರಿ ನಾಲಾ ಯೋಜನೆಗೆ ಅನುಮೋದನೆ ನೀಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಮ್ಮುಖದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಗೆ ಮನವಿ ಸಲ್ಲಿಸಿದ್ದರು. ಕಂದಾಯ ಇಲಾಖೆ ದಾಖಲಾತಿಗಳಲ್ಲಿ ಪಾರದರ್ಶಕತೆಗೆ ಕ್ರಮ ವಹಿಸಿದ್ದರು.
ಮುಖ್ಯವಾಗಿ ಇಂಡಿ, ನಾಗಠಾಣ, ವಿಜಯಪುರ ಹಾಗೂ ಬಬಲೇಶ್ವರ ತಾಲ್ಲೂಕಿನ ರೈತರ ದಶಕಗಳ ಕಾಲದ ಬೇಡಿಕೆಯಾಗಿದ್ದ ರೇವಣ ಸಿದ್ದೇಶ್ವರ ಏತ ನೀರಾವರಿ ಯೋಜನೆ ಜಾರಿಗೆ ಸಚಿವ ಸಂಪುಟ ಅನುಮೋದನೆ ನೀಡಲಾಯಿತು. ಇದಕ್ಕೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ಒತ್ತಾಸೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಈ ರೀತಿಯ ರೈತ, ಗ್ರಾಮೀಣ ಜನಪರ ಯೋಜನೆಗಳು ಸಾಕಾರಗೊಳ್ಳುವಲ್ಲಿ ಕಾರಜೋಳರು ಪ್ರಮುಖ ಪಾತ್ರ ವಹಿಸಿದವರು.
ಗೋವಿಂದ ಕಾರಜೋಳರು ಒಟ್ಟು 2.08 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಇವರು ಸಾಮಾಜಿಕ ಖಾತೆಗಳು ಫೇಸ್ ಬುಕ್, ಟ್ವಿಟ್ಟರ್ ಮತ್ತು ಯಾವುದೇ ಬ್ಯಾಂಕ್ ಸಾಲ ಇರುವುದಿಲ್ಲ.