ಬಹು ನಿರೀಕ್ಷಿತ ಚಿತ್ರವನ್ನು ಬಿಗ್ ಬಜೆಟ್ ಸಿನಿಮಾಗಳ ಬಗ್ಗೆ ಗಾಸಿಪ್ ಹುಟ್ಟಿಕೊಳ್ಳುವುದುದು ಸಹಜ. ಇತ್ತೀಚಿನ ದಿನಗಳಲ್ಲಿ, ಸೆಟ್ಟೇರುವುದಕ್ಕೂ ಮುನ್ನವೇ ಅತಿ ಹೆಚ್ಚು ಸುದ್ದಿಯಾದ ಸಿನಿಮಾ ಎಂದರೆ ಅದು ‘ರಾಮಾಯಾಣ’ ಚಿತ್ರ. ಹೌದು, ಬಾಲಿವುಡ್ನಲ್ಲಿ ರಾಮಾಯಣ ಕಥೆಯನ್ನು ಆಧರಿಸಿ ಸಿನಿಮಾ ಸಿದ್ಧವಾಗುತ್ತಿದ್ದು ಅದರ ಪಾತ್ರವರ್ಗದ ಬಗ್ಗೆ ಹಲವಾರು ಗಾಸಿಪ್ಗಳು ಕೇಳಿಬರುತ್ತಿವೆ.
ರಾಮಾಯಣದಲ್ಲಿ ಹಲವಾರು ಪ್ರಮುಖ ಪಾತ್ರಗಳು ಬರುತ್ತವೆ. ಅವುಗಳಲ್ಲಿ ಯಾರಿಗೆ ಯಾವ ಪಾತ್ರ ಸಿಗಲಿದೆ ಎಂಬ ಬಗ್ಗೆ ಅಧಿಕೃತ ಘೋಷಣೆ ಆಗುವುದು ಬಾಕಿ ಇದೆ. ಅಷ್ಟರಲ್ಲಾಗಲೇ ಹತ್ತಾರು ಗಾಸಿಪ್ಗಳು ಹರಿದಾಡುತ್ತಿವೆ. ಈ ಸಿನಿಮಾದಲ್ಲಿ ಯಶ್ ಕಿರುತೆರೆ ನಟಿ ಸಾಕ್ಷಿ ತನ್ವರ್ ಅಭಿನಯಿಸುತ್ತಾರೆ ಎಂದು ಹೇಳಲಾಗುತ್ತಿದೆ.
ರಾಮಾಯಣ’ ಸಿನಿಮಾಗೆ ನಿತೀಶ್ ತಿವಾರಿ ನಿರ್ದೇಶನ ಮಾಡಲಿದ್ದಾರೆ. ರಾಮನಾಗಿ ರಣಬೀರ್ ಕಪೂರ್ ನಟಿಸಲಿದ್ದಾರೆ. ಸೀತೆಯಾಗಿ ಸಾಯಿ ಪಲ್ಲವಿ ಅಭಿನಯಿಸಲಿದ್ದಾರೆ. ರಾವಣನ ಪಾತ್ರವನ್ನು ಯಶ್ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ರಾವಣನ ಪತ್ನಿ ಮಂಡೋದರಿಯ ಪಾತ್ರದಲ್ಲಿ ಖ್ಯಾತ ಕಿರುತೆರೆ ಕಲಾವಿದೆ ಸಾಕ್ಷಿ ತನ್ವರ್ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ. ಅಂದರೆ, ರಾವಣ ಪಾತ್ರಧಾರಿ ಯಶ್ಗೆ ಸಾಕ್ಷಿ ತನ್ವರ್ ಅವರು ಜೋಡಿ ಆಗಲಿದ್ದಾರೆ ಎಂಬುದು ಸದ್ಯದ ಗಾಸಿಪ್.
ಶೀಘ್ರದಲ್ಲೇ ‘ರಾಮಾಯಣ’ ಸಿನಿಮಾ ಸೆಟ್ಟೇರಲಿದೆ. ಅದಕ್ಕಾಗಿ ರಣಬೀರ್ ಕಪೂರ್ ಅವರು ಈಗಾಗಲೇ ತಯಾರಿ ಶುರು ಮಾಡಿಕೊಂಡಿದ್ದಾರೆ. ರವಿ ದುಬೆ ಅವರು ಲಕ್ಷ್ಮಣನ ಪಾತ್ರ ಮಾಡುತ್ತಾರೆ. ದಶರತನಾಗಿ ಅರುಣ್ ಗೋವಿಲ್, ಕೈಕೇಯಿಯಾಗಿ ಲಾರಾ ದತ್ತ, ಹನುಮಂತನಾಗಿ ಸನ್ನಿ ಡಿಯೋಲ್ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಹಲವಾರು ಕಲಾವಿದರ ಜೊತೆ ಮಾತುಕಥೆ ನಡೆಯುತ್ತಿದೆ. ಆದಷ್ಟು ಬೇಗ ಪಾತ್ರವರ್ಗದ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಮೂರು ಪಾರ್ಟ್ಗಳಲ್ಲಿ ಈ ಸಿನಿಮಾ ಮೂಡಿಬರಲಿದೆ.