ಶಾಸಕ ಎಂ ಚಂದ್ರಪ್ಪ ಅಸಮಧಾನ ವ್ಯಕ್ತಪಡಿಸಿದ್ದು, ಯಡಿಯೂರಪ್ಪ ಅವರಿಂದಲೇ ನನ್ನ ಮಗನಿಗೆ ಟಿಕೆಟ್ ಕೈತಪ್ಪಿದ್ದು ಶಾಸಕ ಚಂದ್ರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮಧ್ಯಾಹ್ನದ ವರೆಗೂ ನನ್ನ ಮಗನ ಹೆಸರು ಪೈನಲ್ ಆಗಿತ್ತು. ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಿಲ್ಲ ಅಂದ್ರೆ ಕ್ಯಾಂಪೇನ್ ಮಾಡಲ್ಲ ಎಂದಿದ್ದಾರೆ.
ಯಡಿಯೂರಪ್ಪ ಹೈಕಮಾಂಡ್‍ಗೆ ಹೀಗೆ ಹೇಳಿದ್ದಕ್ಕೆ ನನ್ನ ಮಗನಿಗೆ ಟಿಕೆಟ್ ಮಿಸ್ ಆಗಿದೆ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ದ ಶಾಸಕ ಚಂದ್ರಪ್ಪ ತೀವ್ರ ಅಸಮಾಧಾನ ಹೂರ ಹಾಕಿದ್ದಾರೆ. ನನ್ನ ಮಗನಿಗೆ 2019 ರಲ್ಲಿ ಟಿಕೇಟ್ ಕೇಳಿದ್ದೆ, ಆಗ ಮುಂದಿನ ಬಾರಿ ಎಂದು ಹೇಳಿದ್ದರು.
ನಾರಾಯಣ ಸ್ವಾಮಿ ಪರ ಕಳೆದ ಬಾರಿ 40 ಸಾವಿರ ಲೀಡ್ ಕೊಟ್ಟಿದ್ದೆ. 2024 ರ ಎಲೆಕ್ಷನ್ ನಲ್ಲಿ ಟಿಕೆಟ್ ಕೊಡ್ತೇವೆ ಎಂದ ಸಂತೋಷ್ ಜೀ ಕೂಡಾ ಹೇಳಿದ್ದರು. ಇದೇ ಗೋವಿಂದ ಕಾರಜೋಳ ನನ್ನ ಮಗನ ಓಡಾಡಲು ಹೇಳಿದ್ರು. ಪಾರ್ಟಿ ಸಭೆಯಲ್ಲಿ ಕೂಡಾ ಹೊರಗಿನ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದಾಗಿ ದ್ವನಿ ಎತ್ತಿದ್ದೆ.
ಸರ್ವೆ ಬಂದವರಿಗೆ ನಮ್ಮ ಜಿಲ್ಲೆಯವರಿಗೆ ಟಿಕೆಟ್ ನೀಡಿ ಎಂದಿದ್ದೆ. ಮೋದಿ, ಅಮೀತ್ ಷಾ ಸರ್ವೆಯಲ್ಲಿ ರಘುಚಂದನ್ ಹೆಸರಿತ್ತು. ಸಿಇಸಿ ಕಮಿಟಿಯಲ್ಲಿ ನನ್ನ ಮಗನ ಹೆಸರು ಪೈನಲ್ ಆಗಿತ್ತು. ನಿನ್ನೆ ಸಂಜೆ ಯಡಿಯೂರಪ್ಪ ಅವರಿಂದ ನನ್ನ ಮಗನಿಗೆ ಟಿಕೆಟ್ ತಪ್ಪಿದೆ ಎಂದು ಯಡೆಯೂರಪ್ಪರವರ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.