ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಟನೆಯ ಬಡೆ ಮಿಯಾ ಚೋಟೆ ಮಿಯಾ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಯಲ್ಲಿಯೂ ಮೊದಲ ನೋಟ ಅನಾವರಣಗೊಂಡಿದೆ. 3 ನಿಮಿಷ 3 ಸೆಕೆಂಡ್ ಇರುವ ಪವರ್ ಪ್ಯಾಕ್ಡ್ ಟ್ರೈಲರ್ ನಲ್ಲಿ ಅಕ್ಷಯ್ ಹಾಗೂ ಟೈಗರ್ ಭರ್ಜರಿ ಆಕ್ಷನ್ ಮೂಲಕ ಅಬ್ಬರಿಸಿದ್ದಾರೆ.
ಬಡೆ ಮಿಯಾ ಚೋಟೆ ಮಿಯಾ ಟ್ರೈಲರ್ ನಲ್ಲಿ ಮೈ ಜುಮ್ ಎನಿಸುವ ಹೈ ಆಕ್ಷನ್ ಸೀಕ್ವೆನ್ಸ್ ಹೈಲೆಟ್ ಆಗಿವೆ. ದೇಶಭಕ್ತಿ ಉಕ್ಕಿಸುವ ಈ ಝಲಕ್ ನಲ್ಲಿ ಕಿಲಾಡಿ ಟೈಗರ್ ಜುಗಲ್ ಬಂಧಿ ನೋಡುಗರಿಗೆ ಸಖತ್ ಕಿಕ್ ಕೊಡಲಿದೆ. ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಂಡಿದ್ದು, ಆದರೆ ಟ್ರೇಲರ್ ನಲ್ಲಿ ಅವರ ಮುಖವನ್ನೇ ರಿವೀಲ್ ಮಾಡದೇ ಚಿತ್ರತಂಡ ಸೀಕ್ರೆಟ್ ಕಾಯ್ದುಕೊಂಡಿದೆ. ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಚಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಚಿತ್ರಗಳನ್ನು ನಡೆಸಲಾಗಿದೆ. ಹಾಲಿವುಡ್ ರೇಂಜ್ಗೆ ಬಿಗ್ ಬಜೆಟ್ನಲ್ಲಿ ‘ಬಡೇ ಮಿಯಾನ್ ಚೋಟೆ ಮಿಯಾನ್’ ಅನ್ನು ನಿರ್ಮಿಸಲಾಗಿದೆ. ಟೈಗರ್ ಜಿಂದಾ ಹೈ, ಸುಲ್ತಾನ್ ಸಿನಿಮಾಗಳನ್ನು ನಿರ್ದೇಶಿಸಿರುವ ಅಲಿ ಅಬ್ಬಾಸ್ ಜಫರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ವಶು ಭಗ್ನಾನಿ, ದೀಪಿಕ್ಷಾ ದೇಶ್ಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಚಿತ್ರ ನಿರ್ಮಾಣ ಮಾಡಿದ್ದಾರೆ. ವಶು ಭಗ್ನಾನಿ ಮತ್ತು ಪೂಜಾ ಎಂಟರ್ಟೈನ್ಮೆಂಟ್ ಎಝೆಡ್ ಫಿಲ್ಮ್ಸ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. 2024ರ ಏಪ್ರಿಲ್ – ಈ ಸಂದರ್ಭ ಹಿಂದಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.