Breaking
Tue. Dec 24th, 2024

ನಗರ ಪೊಲೀಸ್ ಠಾಣೆಯ 21 ಶ್ರೀ ಕಣಿವೆ ಮಾರಮ್ಮ ಜಾತ್ರಾ ಮಹೋತ್ಸವ

ಚಿತ್ರದುರ್ಗದಿಂದ ವಿಜೃಂಭಣೆಯಿಂದ ಶ್ರೀ ಕಣಿಮೆ ಮಾರಮ್ಮ ಜಾತ್ರಾ ಮಹೋತ್ಸವ ನಗರ ಪೊಲೀಸ್ ಠಾಣೆ ಆವರಣದ ವಿಜೃಂಭಣೆಯ ವಿದ್ಯುತ್ ದೀಪಗಳಿಂದ ಅಲಂಕರಿಸಿ ಸಕಲ ಭಕ್ತಾದಿಗಳು ಅಮ್ಮನವರ ವಿಶೇಷ ಪೂಜೆ ಹಾಗೂ 25,000ಕ್ಕೂ ಹೆಚ್ಚು ಜನ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪುರಾತನ ಪ್ರಸಿದ್ಧ ಐತಿಹಾಸಿಕ ಪ್ರತಿವರ್ಷದಂತೆ ಈ ವರ್ಷವೂ ಕೂಡ ಶ್ರೀ ಕಣಿವೆ ಮಾರಮ್ಮ ಜಾತ್ರಾ ಮಹೋತ್ಸವವನ್ನು ದೇವಿಗೆ ಮಧುವಣಗಿತ್ತಿ ಶಾಸ್ತ್ರದಿಂದ ಪ್ರಾರಂಭವಾಗಿ ಹೂವಿನ ಅಲಂಕಾರದೊಂದಿಗೆ ಸಕಲ ವಾದ್ಯಗಳು ನಗರ ರಾಜ ಬೀದಿಯಲ್ಲಿ ಮೆರವಣಿಗೆ ನಡೆಸಿ ಅಮ್ಮನವರ ವಿಶೇಷ ಜಾತ್ರೆ ಪೂಜೆ ಮತ್ತು ಅನ್ನಸಂದರ್ಪಣೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.

ಶ್ರೀ ಕಣಿವೆ ಮಾರಮ್ಮನ 21 ಜಾತ್ರಾ ಮಹೋತ್ಸವವನ್ನು ನಗರ ಪೊಲೀಸ್ ಠಾಣೆ ಮತ್ತು ಸಾರ್ವಜನಿಕರು ಅದ್ದೂರಿಯಾಗಿ ಕಾರ್ಯಕ್ರಮವನ್ನು ನೆರವೇರಿಸಿದರು ಹಾಗೂ ಈ ದೇವಸ್ಥಾನದ ವಿಶೇಷತೆ ಏನೆಂದರೆ ಬೃಹತ್ ಏಕಶಿಲಾ ಮೂರ್ತಿಯು ಪ್ರಥಮವಾಗಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ರೀತಿಯ ವಿಶಿಷ್ಟವಾದ ದೇವಿಯ ವಿಗ್ರಹ ಮತ್ತು ದೇವಸ್ಥಾನದ ಕಟ್ಟಡವನ್ನು ಹೊಂದಿದ್ದು ಇಲ್ಲಿಯ ವಿಶೇಷವಾದ ದೇವಾಲಯವು ರಾಜ – ಮಹಾರಾಜರ ಕಾಲದ ವೈಶಿಷ್ಟತೆಯ ಗುಣವನ್ನು ಹೊಂದಿದೆ. , ಇದು ಸಾವಿರಾರು ವರ್ಷಗಟ್ಟಲೇ ಉಳಿಯುವಂತಹ ದೇವಸ್ಥಾನವಾಗಿದೆ. ಚಿತ್ರದುರ್ಗ ನಗರದ ಜನತೆಯ ಶಕ್ತಿ ಪೀಠವಾಗಿ ಶ್ರೀ ಕಣಿವೆ ಮಾರಮ್ಮ ದೇವಾಲಯವು ನೆಲೆಸಿದೆ.

ಹಾಗೂ ಈ ದೇವಸ್ಥಾನದಲ್ಲಿ ಯಾವುದೇ ಜಾತಿ ಇರುವುದಿಲ್ಲ, ಸರ್ವಧರ್ಮ ಸಮಾನತೆಯಾಗಿ ಎಲ್ಲಾ ಜಾತಿ ವೃಂದದವರು ಈ ಜಾತ್ರಾ ಮಹೋತ್ಸವಕ್ಕೆ ಭಾಗವಹಿಸುತ್ತಾರೆ. ಜಾತ್ರಾ ಮಹೋತ್ಸವಕ್ಕೆ ಭಕ್ತಾದಿಗಳು ತಮ್ಮ ಸ್ವಯಿಚ್ಛೆಯಿಂದ ಅರ್ಧ ಕೆಜಿ, ಇಂದ ಒಂದು ಕ್ವಿಂಟಲ್ ವರೆಗೆ ಭಕ್ತರು ದವಸ ಧಾನ್ಯಗಳನ್ನು ಕೊಡುತ್ತಾರೆ. ಈ ದೇವಾಲಯದ ವಿನ್ಯಾಸವನ್ನು ಜಿಲ್ಲೆಯ ಎಲ್ಲಾ ಗ್ರಾಮದವರು ಇದೇ ಮಾದರಿಯನ್ನು ಬಳಸಿ – ತಮ್ಮಲ್ಲಿ ದೇವಸ್ಥಾನ ನಿರ್ಮಾಣ ಮಾಡುತ್ತಿದ್ದಾರೆ. ಹಿಂದೆ ರಾಜ ಮಹಾರಾಜರು ಈ ರೀತಿಯ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಆರ್ ಮೂರ್ತಿ ಚಿತ್ರದುರ್ಗ ಜಿಲ್ಲಾ ಉಪ್ಪಾರ ಸಮಾಜದ ಜಿಲ್ಲಾಧ್ಯಕ್ಷರು ಹಾಗೂ ದೇವಸ್ಥಾನದ ಸೇವಾ ಸಮಿತಿಯ ವ್ಯವಸ್ಥಾಪಕರು ಪ್ರಕಟಿಸಿದರು.

ಈ ಎಲ್ಲಾ ಕಾರ್ಯಕ್ರಮಗಳು ಅತಿ ವಿಜೃಂಭಣೆಯ ಸಕಲ ಭಕ್ತಾದಿಗಳ ಸಮ್ಮುಖದಲ್ಲಿ ನಗರ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿತ್ತು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದ ಭಕ್ತಾದಿಗಳು ಶ್ರೀದೇವಿಯ ಕೃಪೆಗೆ ಪಾತ್ರರಾದರು.

ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಂದ ಅಕ್ಕಿ, ಬೇಳೆ, ಬೆಲ್ಲ, ಎಣ್ಣೆ, ದವಸ ಧಾನ್ಯಗಳನ್ನು ಕೊಡುವುದರ ಮೂಲಕ ರಸೀದಿಯನ್ನು ಪಡೆದರು. ಹಾಗೂ ಪ್ರತಿ ಅಮಾವಾಸ್ಯೆಯ ಹುಣ್ಣಿಮೆ ದಿನದಂದು ಮಂಗಳವಾರ ಶುಕ್ರವಾರ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಭಕ್ತಾದಿಗಳಿಗೆ ಜಾತ್ರಾ ಮಹೋತ್ಸವದಲ್ಲಿ ನಗರ ಈ ಪೊಲೀಸ್ ಠಾಣೆ ಅರ್ಚಕರು ಪ್ರಕಟಿಸಿದರು.

ಸಂಜೆ ಮಹಾಮಂಗಳಾರತಿ ಹಾಗೂ ದೇವಿಯ ದರ್ಶನಕ್ಕೆ ವಿವಿಧ ನಗರಗಳಿಂದ ಭಕ್ತರು ಆಗಮಿಸಿ, ಈ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನೆರವೇರಿತು. ಭಕ್ತಾದಿಗಳಿಗೆ ಪುಳಿಯೋಗರೆ ಪ್ರಸಾದವನ್ನು ವಿನಿಯೋಗಿಸಿದರು. 

ಕಾರ್ಯಕ್ರಮದಲ್ಲಿ ಆರ್ ಮೂರ್ತಿ ಚಿತ್ರದುರ್ಗ ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷರು ಸೇವಾ ಸಮಿತಿ ವ್ಯವಸ್ಥಾಪಕರು, ಆರ್ ಮಾರುತೇಶ ರೆಡ್ಡಿ ಈ ಶಿಕ್ಷಕರ ಪ್ರಚಾರ ನಿರ್ದೇಶಕರು, ರಾಮಸುಂದರ್ ಸ್ನಾಯುಗಳ ನಿರ್ದೇಶಕರು, ನಾಗೇಂದ್ರ ಪ್ರಸಾದ್, ಸಿದ್ದೇಶ್, ಎಂ ತಿಪ್ಪೇಸ್ವಾಮಿ, ಗಾದ್ರಿಲಿಂಗೇಶ್ವರಪ್ಪ, ವೆಂಕಟೇಶ್, ಶಾಂತಕುಮಾರ್, ನಾಗಭೂಷಣಪ್ಪ, ಅರ್ಚಕರಾದಸ್ವಾಮಿ ಮುಂತಾದವರು ಭಾಗವಹಿಸಿದ್ದರು.

 

 

Related Post

Leave a Reply

Your email address will not be published. Required fields are marked *