ಕರ್ನಾಟಕಕ್ಕೆ ನೀಡುವ ನೆರವನ್ನು ಶೇ.10ರಷ್ಟು ಏರಿಕೆಯಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಒಬ್ಬರಿಗೆ ಒಬ್ಬರಿಗೆ ನೀಡುವ ಕೂಲಿ ಹಣ 33 ರೂ. ಏರಿಕೆಯಾಗಿದೆ. ಅಂದರೆ ಈ ಹಿಂದೆ ಇದ್ದ 316 ರೂ. ಈಗ 349 ರು.ಗೆ ಏರಿಕೆಯಾಗಿದೆ. ಉದ್ಯೋಗ ಖಾತ್ರಿ ಯೋಜನೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಬೇರೆ ಬೇರೆ ರೀತಿಯ ದರ ನಿಗದಿಪಡಿಸಲಾಗಿದೆ. ಹರ್ಯಾಣಕ್ಕೆ ಅತ್ಯಂತ ಗರಿಷ್ಠ 374 ರೂ. ನಿಗದಿಯಾಗಿದೆ.
ಅರುಣಾಚಲ ಪ್ರದೇಶ ಹಾಗೂ ನಾಗಾಲ್ಯಾಂಡ್ ಗೆ ಅತಿ ಕಡಿಮೆ 234 ರೂ. ನಿಗದಿಯಾಗಿದೆ. ಇದು ಮಾ.27 ರಂದು ಏರಿಕೆಯಾದ ನಂತರದ ದರವಾಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪರಿಷ್ಕೃತ ದರಗಳಿಗೆ ಸಂಬಂಧಿಸಿದ ಆದೇಶವನ್ನು ಪ್ರಕಟಿಸಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡಕ್ಕೆ ಅತಿ ಕಡಿಮೆ 7 ರೂ. ಏರಿಕೆಯಾಗಿದೆ. ಆ ರಾಜ್ಯಗಳಿಗೆ ನೀಡುವ ಕೂಲಿ ದರ 237 ರೂ.ಗೆ ಏರಿಕೆಯಾಗಿದೆ.
ಉದ್ಯೋಗ ಖಾತ್ರಿ ವೇತನದಲ್ಲಿನ ಏರಿಕೆ ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂದು ಟೀಕಿಸಿರುವ ಕಾಂಗ್ರೆಸ್ ಪಕ್ಷ, ಉದ್ಯೋಗ ಖಾತ್ರಿ ವೇತನವನ್ನು 400 ರೂ.ಗೆ ಹೆಚ್ಚಿಸುವ ಭರವಸೆ ನೀಡಿದ್ದೇವೆ. ಈಗಿನ ಏರಿಕೆಯ ನಂತರವೂ ಕೇಂದ್ರ ಸರ್ಕಾರ ನೀಡುವ ವೇತನ ನಮ್ಮ ಭರವಸೆಯನ್ನು ತಲುಪಿಲ್ಲ ಎಂದು ಹೇಳಿದೆ.