ತಮಿಳಿನ ಖ್ಯಾತ ಖಳ ನಟ ಡ್ಯಾನಿಯಲ್ ಬಾಲಾಜಿ ಅವರು ಹೃದಯಾಘಾತದಿಂದ ನಿಧನರಾದರು. ಅವರಿಗೆ 48 ವರ್ಷ ವಯಸ್ಸಾಗಿತ್ತು. ಗೌತಮ್ ವಾಸುದೇವ ಮೆನನ್ ನಿರ್ದೇಶನದ ‘ಕಾಖ ಕಾಖ’ ಸಿನಿಮಾದಲ್ಲಿ ಸೂರ್ಯ ಜೊತೆ ತೆರೆ ಹಂಚಿಕೊಂಡು ಅವರು ಗಮನ ಸೆಳೆದಿದ್ದರು. ಡ್ಯಾನಿಯಲ್ ಅವರು ಸಣ್ಣ ವಯಸ್ಸಿಗೆ ನಿಧನ ಹೊಂದಿದ್ದು ಅನೇಕರಿಗೆ ಬೇಸರ ತರಿಸಿದೆ. ಅವರ ಅಗಲುವಿಕೆಯಿಂದ ಎಲ್ಲರೂ ಶಾಕ್ ಆಗುವಂತೆ ಆಗಿದೆ.
ಕನ್ನಡ ಚಿತ್ರರಂಗ ಸೇರಿದಂತೆ ಬಹುಭಾಷಾ ನಟನಾಗಿ ಗುರುತಿಸಿಕೊಂಡಿದ್ದ ನಟ ಡ್ಯಾನಿಯಲ್ ಬಾಲಾಜಿ (48) ವಿಧಿವಶರಾಗಿದ್ದಾರೆ. ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದ ಡ್ಯಾನಿಯಲ್ ಬಾಲಾಜಿ ನಿನ್ನೆ( ಮಾರ್ಚ್ 29) ಶುಕ್ರವಾರದಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ನಟ ಡ್ಯಾನಿಯಲ್ ಬಾಲಾಜಿ ಕನ್ನಡ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಕುಟುಂಬ ಸದಸ್ಯರಾಗಿದ್ದು, ಚಿತ್ರಗಳಲ್ಲಿ ಖಳನಾಯಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ರಾಕಿಂಗ್ ಸ್ಟಾರ್ ಯಶ್ ನಟನೆಯ ಕಿರಾತಕ ಸಿನಿಮಾದಲ್ಲಿ ವಿಲನ್ ಆಗಿದ್ದರು.
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಭಾಷೆಯ ಚಿತ್ರಗಳಲ್ಲಿ ನಟಿಸಿರುವ ಡ್ಯಾನಿಯಲ್ ಬಾಲಾಜಿ ಕನ್ನಡ ಕಿರಾತಕ, ಶಿವಾಜಿನಗರ, ಬೆಂಗಳೂರು ಅಂಡರ್ವರ್ಲ್ಡ್ ಹಾಗೂ ಡವ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿ ಪ್ರಿಯರಿಗೂ ಕೂಡ ಚಿರಪರಿಚಿತರಾಗಿದ್ದರು.
ಡ್ಯಾನಿಯಲ್ ಬಾಲಾಜಿ ಅವರು ಅವರು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಬಣ್ಣದ ಲೋಕದ ಜೊತೆ ನಂಟು ಬೆಳೆಸಿದರು. ಅವರು ಕಮಲ್ ಹಾಸನ್ ಅವರ ಹಿಸ್ಟಾರಿಕ್ ಡ್ರಾಮಾ ‘ಮರುದನಯಗಂ’ ಸಿನಿಮಾದಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದರು. ಈ ಸಿನಿಮಾ ಅರ್ಧಕ್ಕೆ ನಿಂತಿತು. ಡ್ಯಾನಿಯಲ್ ಬಾಲಾಜಿ ಅವರು ‘ಚಿತ್ತಿ’ ಹೆಸರಿನ ಧಾರಾವಾಹಿಯಲ್ಲೂ ನಟಿಸಿದ್ದರು.
ನಂತರದ ದಿನಗಳಲ್ಲಿ ಬಾಲಾಜಿ ಅವರಿಗೆ ಕಮಲ್ ಹಾಸನ್ ಜೊತೆ ನಟಿಸೋ ಅವಕಾಶ ಸಿಕ್ಕಿತು. ಕಮಲ್ ಹಾಸನ್ ನಟನೆಯ ‘ವೆಟ್ಟೈಯಾಡು ವಿಲಯಾಡು’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರು. ಈ ಮೂಲಕ ಮೆಚ್ಚುಗೆ ಪಡೆದು ಬಂದರು. ಮಮ್ಮೂಟಿ ನಟನೆಯ ‘ಬ್ಲ್ಯಾಕ್’ ಸಿನಿಮಾದಲ್ಲಿ ಬಾಲಾಜಿ ಬಣ್ಣ ಹಚ್ಚಿದ್ದರು. ಮೋಹನ್‌ಲಾಲ್ ನಟನೆಯ ‘ಭಗವಾನ್’, ಮಮ್ಮೂಟಿ ನಟನೆಯ ‘ಡ್ಯಾಡಿ ಕೂಲ್’ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿದ್ದರು.
ಡ್ಯಾನಿಯಲ್ ಅವರು ಎದೆನೋವಿನಿಂದ ಇತ್ತೀಚೆಗೆ ಚೆನ್ನೈ ಆಸ್ಪತ್ರೆಗೆ ದಾಖಲಾದರು. ನಂತರ ಅವರು ಕೊನೆಯುಸಿರು ಎಳೆದರು. ಇಂದು (ಮಾರ್ಚ್ 30) ಅವರ ಅಂತ್ಯಕ್ರಿಯೆ ಹೆಚ್ಚಾಗಿ.