Breaking
Tue. Jan 14th, 2025

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ವಿರುದ್ಧ ವಾಗ್ದಾಳಿ..!

ಚಿತ್ರದುರ್ಗ ಮಾ. 30 : ನಾನು ಶಾಸಕನಾದಾಗ ಅವನು ಚಳ್ಳಕೆರೆಯಲ್ಲಿ ನಿಕ್ಕರ್ ಹಾಕಿಕೊಳ್ಳುತ್ತಿದ್ದನೋ ಇಲ್ಲವೋ ಗೊತ್ತಿಲ್ಲ, ನಾನು ಅವನಿಗಿಂತ ವಯಸ್ಸಾದ ಹಿರಿಯನು, ನಾನು ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ ಇಡೀ ಜಿಲ್ಲೆಯ ಪ್ರತಿ ಚಿತ್ರಣ ನನಗೆ ಗೊತ್ತಿದೆ ಎಂದು ಹಿರಿಯರು ನನ್ನ ಅಭಿಪ್ರಾಯವನ್ನು ಕೇಳಿದ್ದಾರೆ. ಈ ಪೋತಪ್ಪ ನಾಯಕನಿಗೆ ಹೆದರಿ ಸುಮ್ಮನಿರಲು ಆಗಲ್ಲ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. 

ಚಿತ್ರದುರ್ಗ ನಗರದ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿ.ಎಸ್. ವೈಗಿಂತ ದೊಡ್ಡ ವ್ಯಕ್ತಿ ನಿನ್ನೆ ಬೆಂಬಲಿಗರ ಸಭೆ. ಬಿಎಸ್ ವೈ ಹಾಗೂ ನನ್ನ ಬಗ್ಗೆ ಹಗುರವಾಗಿ ಮಾತಾಡಿದ್ದಾರೆ. ಇನ್ನು ಮುಂದೆ ನಾನು ಅವನ ಬಗ್ಗೆ ಏಕವಚನದಲ್ಲಿ ಮಾತಾಡುತ್ತೇನೆ ಬಿಎಸ್ ವೈ, ವಿಜಯೇಂದ್ರ ಭೇಟಿಯಾಗಿ ಸುಮಾರು ದಿನಗಳೇ ಆಗಿವೆ. ಈ ಹಿಂದೆ ವಿಜಯೇಂದ್ರ ಭೇಟಿಯಾದಾಗ ಈ ಮಹಾ ನಾಯಕನು ಇದ್ದನು ಅವನ ಮಗನಿಗೆ ಟಿಕೆಟ್ ತಪ್ಪಿಸಲು ಅವನೇನು ದೊಡ್ಡ ಲೀಡರ್ ಅಲ್ಲ. ಕೋಲಾರದಲ್ಲಿ ಜೆಡಿಎಸ್ ಜತೆ ನಮ್ಮ ಪಕ್ಷದ ಹೊಂದಾಣಿಕೆ ಆಗಿದೆ.

ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಸ್ಪರ್ಧೆಗೆ ಹಿಂದೇಟು ಹಾಕಿದ್ದು, ವರಿಷ್ಠರು ಗೋವಿಂದ ಕಾರಜೋಳಕ್ಕೆ ಟಿಕೆಟ್ ನೀಡಿದ್ದಾರೆ. ಪೋತಪ್ಪ ನಾಯಕನಿಗೆ ಟಿಕೆಟ್ ಸಿಕ್ಕೇ ಸಿಗುತ್ತಿತ್ತು. ಈ ಹಿಂದೆ ಎ.ನಾರಾಯಣಸ್ವಾಮಿಗೆ ಟಿಕೆಟ್ ಕೊಡಿಸಿದ್ದೇ ನಾನು ಬಿಜೆಪಿಯಲ್ಲಿ ಈ ಹಿಂದೆಯೇ ರಘುಚಂದನ್‌ಗೆ ಟಿಕೆಟ್ ಭರವಸೆ ನೀಡಿದ್ದೇನೆ ಎಂದಿದ್ದಾನೆ ಕೋರ್ ಕಮಿಟಿ ಸಭೆ ನಡೆದಾಗ ನಾನು ಸಹ ಅಲ್ಲಿದ್ದೆನು ಕ್ಷೇತ್ರದಲ್ಲಿ ಮತಗಳ ಕಾಂಬಿನೇಷನ್ ಬಗ್ಗೆ ನಾನು ಹೇಳಿದ್ದೇನೆ ಆ ಸಭೆಯಲ್ಲಿ ಪೋತಪ್ಪ ನಾಯಕ ಮಾಜಿ ಶಾಸಕನೂ ಇದ್ದನು. 

ಚಿತ್ರದುರ್ಗದಲ್ಲಿ ಜನ ಬಜಾರ್ ಎಂದು ಅಲ್ಲಿ ಕೈಕಾಲು ಹಿಡಿದು ಸಕ್ಕರೆ ಸೀಮೆ ಎಣ್ಣೆ ತೂಗಲು ಇವನು ಹೊಂದಿದ್ದನು ಎರಡ್ಮೂರು ನ್ಯಾಯ ಬೆಲೆ ಅಂಗಡಿ ಮಾಡಿಕೊಂಡಿದ್ದನು ಸೀಮೆ ಎಣ್ಣೆ ಹಂಚುತ್ತಿದ್ದಾಗ ಜನರ ಬಳಿ ಹೇಳುತ್ತಿದ್ದನು 1979 ರಲ್ಲಿ ಪುರಸಭೆಗೆ ಠೇವಣಿ ಕಳೆದುಕೊಂಡಿದ್ದನು. 2023 ರ ಚುನಾವಣೆಯಲ್ಲಿ ಚಿತ್ರದುರ್ಗದಲ್ಲಿ ಕೈ ಅಭ್ಯರ್ಥಿ ಪರ ಕೆಲಸವೋ ದೊಡ್ಡ ವ್ಯಕ್ತಿಗೆ ಐವತ್ತು ಲಕ್ಷ ಕೊಡಿಸಲು ಪ್ರಯತ್ನಿಸಿದ್ದನು ಹಿಂದೆ ಕೆಟ್ಟದಾಗಿ ಬೈಯುವುದು ಮುಂದೆ ಕಾಲು ಮುಗಿಯುವ ಕೆಲಸ ದೊಡ್ಡ ಉಳ್ಳಾರ್ತಿ ಸ್ವಗ್ರಾಮದಲ್ಲೇ ಅವನಿಗೆ ಯಾರೂ ಮಾತಾಡಿಸಲ್ಲ. ಅವನು ಸತ್ತರೆ 20ಸಾವಿರ ಜನ, ನಾನು ಸತ್ತರೆ 4ಜನ ಸೇರಲ್ಲ ಅಂದಿದ್ದಾನೆ ನಾವು ಟ್ರೈಲರ್ ನೋಡುತ್ತೇವೆ ಈಗ ಎಂದು ವ್ಯಂಗ್ಯ ಅನೇಕರ ಬಳಿ ಕಾಲೇಜು ಸರ್ಟಿಫಿಕೇಟ್ ವಿಚಾರಕ್ಕೆ ಹಣ ಕೇಳಿದ್ದಾನೆ ಅಂಥವರು ಇವನು ಸತ್ತಾಗ ಬೈಯಲು ಬರಬಹುದು ಎಂದು ವ್ಯಂಗ್ಯವಾಡಿದರು. 

ಬಿಎಸ್ ವೈ, ಬಿ ಎಲ್ ಸಂತೋಷ ಭರವಸೆ ನೀಡಿದ್ದರು ಆದರೆ ನನ್ನ ಪುತ್ರನಿಗೆ ಟಿಕೆಟ್ ಕೊಟ್ಟರೆ ಕೊಡಲಿ ಇಲ್ಲ ಬಿಡಲಿ ಎಂದಿದ್ದನು ಈ ಬಗ್ಗೆ ಅವರು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳಲಿ ಬಿಎಸ್ ವೈಗೆ ಶಾಸಕ ಸ್ಥಾನ ತ್ಯಾಗ ಮಾಡಿದ್ದೇನೆ ಎಂದು ಬಿಎಸ್ ವೈ ಅವರು ಚಂದ್ರಪ್ಪಗೆ ಕೆಎಸ್ ಆರ್ ಟಿಸಿ ಚೇರ್ ಮೆನ್ ಕೊಟ್ಟ ಅವಕಾಶ ಇಲ್ಲದಿದ್ದರೂ ಸೈರನ್ ಹಾಕಿಕೊಂಡು ಬಂದಿದ್ದ ಬಿಎಸ್ ವೈ ಆಶೀರ್ವಾದದಿಂದ KSRTC ಚೇರ್ಮನ್ ಆಗಿದ್ದು ಮರೆತಿದ್ದಾನೆ ಎಂದ ತಿಪ್ಪಾರೆಡ್ಡಿಯವರು, ನಿನ್ನೆ ಅವರು ಕರೆದ ಸಭೆಯಲ್ಲಿ ಕೆಲ ಬಿಜೆಪಿ ಬೆಂಬಲಿಗರು ಅದೇ ರೀತಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದವರು 1994 ರಲ್ಲಿ ಪಕ್ಷೇತರ ಶಾಸಕನಾಗಿ ಗೆದ್ದು ಗೃಹಮಂಡಳಿ ಅಧ್ಯಕ್ಷ ಆಗಿದ್ದೆನು. ಗೆದ್ದಿದ್ದೆನು ನಾನು ತಿಪ್ಪಾರೆಡ್ಡಿಗೆ ಎಂಎಲ್ಸಿ ಮಾಡಿದ್ದೆನೆಂದು ಹೇಳುತ್ತಾನೆ ಅಧಿಕ ಲೀಡ್ ನಲ್ಲಿ ನಾನು 2009 ರಲ್ಲಿ ಓಐಎ ಆಗಿದ್ದೆನು ಎಪಿ ಓಐಅವರಿಗೆ ಬೇಕಿದ್ದರೆ ಅವನು ಯಾವ ಪಕ್ಷದ ಪರ ಚುನಾವಣೆ ಮಾಡಿಲ್ಲ ಎಂದು ಎಲ್ಲರೂ ಸೋತು ನಾನು ಗೆದ್ದರೆ ಮಂತ್ರಿ ಆಗುತ್ತೇನೆ ಎಂಬ ಭಾವನೆ ಅವನಲ್ಲಿದೆ. 

ಹೊಳಲ್ಕೆರೆ ಬಿಜೆಪಿ ಪ್ರಭಾವವಿರುವ ಕ್ಷೇತ್ರ ಅಲ್ಲಿ ಯಾರಿಗಾದರೂ ಬಿಜೆಪಿ ಗೆಲ್ಲುತ್ತದೆ ನನಗೆ ಜೆ ಹೆಚ್ ಪಟೇಲರು ಒಮ್ಮೆ ಹೇಳಿದ್ದರು ನನ್ನ ಬಳಿ ಬಂದು ನನಗೆ ತುಂಬಾ ಹೊಗಳುತ್ತಾನೆ ಸಂಜೆ ದೇವೇಗೌಡರ ಬಳಿ ಹೋಗಿ ನನ್ನ ತೆಗಳುತ್ತಾನೆ ಎಂದಿದ್ದರು ಪುತ್ರನಿಗೆ ಲೋಕಸಭೆ ಟಿಕೆಟ್ ಗಾಗಿ ನನ್ನ ಜತೆ ರಾಜಿಗೆ ಪ್ರಯತ್ನಿಸಿದ್ದನು ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್ ಗೆ ಕಳಿಸಿದ್ದನು ಜೋಗಿಮಟ್ಟಿಯಲ್ಲಿ ಪಾರ್ಟಿಗೆ ಸೇರೋಣ ಎಂದು ನಾನು ಕಳಿಸಿದ್ದೇನೆ ಭೇಟಿಗೆ ನಿರಾಕರಿಸಿ ವಾಪಸು ಕಳಿಸಿದ್ದೇನೆ ಅವನು ನನಗೆ ಎಂಎಲ್ ಎ, ಎಂಎಲ್ಸಿ ಮಾಡುವುದಾದರೆ ನನಗೆ ಎಂಎಲ್ ಎಗಿರಿನೇ ಬೇಡ ಬಿಜೆಪಿ ಕಚೇರಿ ಮೊಟ್ಟೆ, ಕಲ್ಲು ಹೊಡೆದರೆ ಮುಗಿಯಲ್ಲ ನಾನು ಅವನಿಗಿಂತ ಎರಡು ಸಲ ಗೆದ್ದ ಎರಡು ಸಲ ಪಕ್ಷೇತರವಾಗಿ ಗೆದ್ದು ಶಾಸಕನಾಗಿದ್ದೇನೆ ಎಂದು ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದರು. 

ರಾಷ್ಟ್ರೀಯ ವಿಚಾರಗಳ ಆಧಾರದ ಮೇಲೆ ಚುನಾವಣೆ ನಡೆಯುತ್ತಿದೆ ವಿಜಯೇಂದ್ರ ಕಾಲಿಡದೇ ಕೆಎಸ್‌ಆರ್‌ಟಿಸಿ ಚೇರ್ ಮೆನ್ ಆಗಿದ್ದನು ಅವನು ನನ್ನ ಮಗನ ಟಿಕೆಟ್ ತಪ್ಪಿಸಿದವರಿಗೆ ಮಕ್ಕಳಿಗೂ ತೊಂದರೆ ಎಂದು ಅವನು ಶಾಪ ಹಾಕುತ್ತಿದ್ದಾನೆ, ಅವನು ಹೇಳಿದಂತೆ ಆಗುತ್ತದಾ ಎಂದು ವ್ಯಂಗ್ಯವಾದಿ ರಾಜಕೀಯವಾಗಿ ಪಕ್ಷ ಸೋತರೂ ಪರವಾಗಿಲ್ಲ, ಪಕ್ಷದ ವರಿಷ್ಠರು ಗಮನಿಸುತ್ತಾರೆ ಎಂದು ತಿಪ್ಪಾರೆಡ್ಡಿ ಹೇಳಿದರು. 

ಗೋಷ್ಟಿಯಲ್ಲಿ ಕೋವೆರಹಟ್ಟಿ ದ್ಯಾಮಣ್ಣ, ಮಾಳಪ್ಪನ ಹಟ್ಟಿ ಈಶ್ವರಪ್ಪ, ಕವನ, ಅರುಣ್, ಮೈಲಾರಪ್ಪ, ಲೋಕೇಶ್, ಸುರೇಶ್, ರಾಮಣ್ಣ, ರವಿ ಸೇರಿದಂತೆ ಇತರ ಎರಡರಲ್ಲಿ ಸೇರಿದ್ದಾರೆ.

Related Post

Leave a Reply

Your email address will not be published. Required fields are marked *