Breaking
Tue. Dec 24th, 2024

ಮುಂಬೈನ ಐಷಾರಾಮಿ ಬಂಗಲೆಯನ್ನು ಮಗಳು ರಾಹಾ ಹೆಸರಿಗೆ ರಣಬೀರ್- ಆಲಿಯಾ ಭಟ್ ಖರೀದಿ..!

ಬಾಲಿವುಡ್ ನಟ ರಣಬೀರ್ ಕಪೂರ್- ಆಲಿಯಾ ಭಟ್ ಜೋಡಿ ತಮ್ಮ ಕನಸಿನ ಮನೆ ಕಟ್ಟುವುದಕ್ಕೆ ಮುಂದಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ನಿರ್ಮಾಣ ಹಂತದಲ್ಲಿರುವ ಬಂಗಲೆಗೆ ಸ್ಟಾರ್ ಜೋಡಿ ಭೇಟಿ ನೀಡಿದೆ. 250 ಕೋಟಿ ರೂ.ಗೂ ಅಧಿಕ ಮೌಲ್ಯದ ಈ ಬಂಗಲೆ ಈಗ ರಾಹಾ ಕಪೂರ್ ಹೆಸರಿಗೆ ರಿಜಿಸ್ಟರ್ ಮಾಡಿದ್ದಾರೆ. 

ಕಪೂರ್ ಕುಟುಂಬದ ಕುಡಿ ರಾಹಾ ಕಪೂರ್ ಇದೀಗ 250 ಕೋಟಿ ರೂ. ಮೌಲ್ಯದ ಬಂಗಲೆಗೆ ಒಡತಿಯಾಗಿದ್ದಾಳೆ. ಮುಂಬೈನ ಐಷಾರಾಮಿ ಬಂಗಲೆಯನ್ನು ಮಗಳು ರಾಹಾ ಹೆಸರಿಗೆ ರಣಬೀರ್- ಆಲಿಯಾ ಭಟ್ ಖರೀದಿಸಿದ್ದಾರೆ. ಈ ಮೂಲಕ ಅತೀ ಸಣ್ಣ ವಯಸ್ಸಿನ ಅತೀ ಹೆಚ್ಚು ಆಸ್ತಿ ಹೊಂದಿದ ಸ್ಟಾರ್ ಕಿಡ್ ಎಂಬ ಖ್ಯಾತಿಗೆ ರಾಹಾ ಗಳಿಸಿದ್ದಾಳೆ. 

ಈ ಬಂಗಲೆಗೂ ಕಪೂರ್ ಕುಟುಂಬಕ್ಕೂ ನಂಟಿದೆ. ರಣಬೀರ್ (ರಣಬೀರ್ ಕಪೂರ್) ತಂದೆ ರಿಷಿ ಕಪೂರ್ ಅವರು ಸಾಯುವ ಮೊದಲು ಈ ಸೈಟ್‌ಗೆ ಭೇಟಿ ನೀಡಿದ್ದರು. ಈ ಬಂಗಲೆಯನ್ನು ರಿಷಿ ಕಪೂರ್ ಇಷ್ಟಪಟ್ಟಿದ್ದರು. ಬೆಲೆಬಾಳುವ ಬಂಗಲೆಯನ್ನು ರಾಹಾ ಹೆಸರಿಗೆ ರಿಜಿಸ್ಟರ್ ಹೊಂದಿದೆ. 

ಮುಂಬೈ ಬಾಂದ್ರಾದಲ್ಲಿ ರಣಬೀರ್-ಆಲಿಯಾ ಹೆಸರಲ್ಲಿ ದುಬಾರಿ ಫ್ಲಾಟ್‌ಗಳಿವೆ. ಅದರ ಜೊತೆಗೆ ಇದೀಗ ಖರೀದಿಸಿರುವ ಬಂಗಲೆ ಬಗ್ಗೆ ಹೆಚ್ಚು ಟಾಕ್ ಆಗುತ್ತಿದೆ . ಅಂದಹಾಗೆ, ರಣ್‌ಬೀರ್‌ ಕಪೂರ್‌ ಮತ್ತು ಆಲಿಯಾ ಬಾಲಿವುಡ್‌ನ ಬಹುಬೇಡಿಕೆ ಸ್ಟಾರ್ಸ್‌ ಆಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿ ಮಾಡಲಾಗಿದೆ.

Related Post

Leave a Reply

Your email address will not be published. Required fields are marked *